AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral : ಮದುವೆಯಲ್ಲಿ ಗಮನ ಸೆಳೆದ ವಿಶಿಷ್ಟ ಮೆನು ಕಾರ್ಡ್, ರುಚಿ ಸವಿಯುವ ಭಕ್ಷ್ಯಗಳ ಕ್ಯಾಲೋರಿ ಉಲ್ಲೇಖ

ಆಹಾರ ಕಾಳಜಿ ಇರುವವರು ಸೇವಿಸುವ ಆಹಾರದಲ್ಲಿ ಕ್ಯಾಲೋರಿ ಎಷ್ಟು ನೋಡುತ್ತಾರೆ. ಸಾಮಾನ್ಯವಾಗಿ ಜಿಮ್ ಗೆ ಹೋಗುವವರು ಸೇವಿಸುವ ಆಹಾರದ ಕ್ಯಾಲೋರಿಯ ಬಗ್ಗೆ ಹೆಚ್ಚು ಗಮನ ಹರಿಸುವುದನ್ನು ನೋಡಬಹುದು. ಆದರೆ ಇದೀಗ ವೈರಲ್ ಆಗಿರುವ ಫೋಟೋದಲ್ಲಿ ಮದುವೆಯ ಊಟದ ಮೆನುವಿನಲ್ಲಿ ಈ ವಿಶಿಷ್ಟ ಪರಿಕಲ್ಪನೆಯನ್ನು ತರಲಾಗಿದೆ. ಈ ಮೆನುವಿನಲ್ಲಿ ಆಹಾರದ ಪದಾರ್ಥಗಳ ಕ್ಯಾಲೋರಿ ಎಣಿಕೆ ಮಾಡಲಾಗಿದ್ದು, ಇದಕ್ಕೆ ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.

Viral : ಮದುವೆಯಲ್ಲಿ ಗಮನ ಸೆಳೆದ ವಿಶಿಷ್ಟ ಮೆನು ಕಾರ್ಡ್, ರುಚಿ ಸವಿಯುವ ಭಕ್ಷ್ಯಗಳ ಕ್ಯಾಲೋರಿ ಉಲ್ಲೇಖ
ವೈರಲ್​​ ಫೋಟೋ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 08, 2025 | 6:21 PM

Share

ಮದುವೆ (marriage) ಅಂದ್ರೆ ಸಂಭ್ರಮವಿಲ್ಲದೇ ಹೋದರೆ ಹೇಗೆ ಅಲ್ಲವೇ. ಮದುವೆಯ ದಿನ ಮನೆಯಲ್ಲಿ ಹಬ್ಬದ ವಾತಾವರವೇ ಸೃಷ್ಟಿಯಾಗಿರುತ್ತದೆ. ವಧು ಮತ್ತು ವರನ ಕಡೆಯ ಅಥಿತಿಗಳೆಲ್ಲರೂ ಮೋಜು ಮಸ್ತಿ ಮಾಡುತ್ತಾ ಸಮಯ ಕಳೆಯುತ್ತಿರುತ್ತಾರೆ. ಮದುವೆಯ ಊಟ ಕೂಡ ಅಷ್ಟೇ ಭರ್ಜರಿಯಾಗಿರುತ್ತದೆ. ವಿವಿಧ ರೀತಿಯ ವಿವಿಧ ಭಕ್ಷ್ಯ (variety food) ಗಳು ಹಾಗೂ ಸ್ವೀಟ್ (sweets) ಗಳು ಒಂದೇ ಎರಡೇ. ಕೆಲವರಂತೂ ಯಾವುದನ್ನು ಮಿಸ್ ಮಾಡಿಕೊಳ್ಳದೇ, ಎಲ್ಲದರ ರುಚಿ ಸವಿಯುತ್ತಾರೆ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಹೊಸ ಪರಿಕಲ್ಪನೆಯ ಮೆನು ಕಾರ್ಡ್ (menu card) ವೈರಲ್ ಆಗುತ್ತಿದೆ. ಪ್ರತಿಯೊಂದು ಆಹಾರದ ಪಕ್ಕದಲ್ಲಿ ಕ್ಯಾಲೋರಿಯನ್ನು ಉಲ್ಲೇಖಿಸಲಾಗಿರುವುದು ವಿಶೇಷ. ಪಶ್ಚಿಮಬಂಗಾಳ (west bengal) ದಲ್ಲಿ ನಡೆದ ಮದುವೆಯಲ್ಲಿ ಈ ಹೊಸ ಪರಿಕಲ್ಪನೆಯ ಮೆನು ಕಾರ್ಡ್ ಗಮನ ಸೆಳೆದಿದೆ. ಈ ಮೆನು ಕಾರ್ಡ್ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾ ಬಳಕೆದಾರರು ಕ್ರಿಯೇಟಿವಿ ಮೆಚ್ಚಿಕೊಂಡಿದ್ದಾರೆ.

r/india social ಹೆಸರಿನ ಖಾತೆಯಲ್ಲೋ ರೆಡ್ಡಿಟ್ ಬಳಕೆ ದಾರರು ಈ ಮೆನು ಕಾರ್ಡ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಮೆನು ಕಾರ್ಡ್ ನನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಕಾರ್ಡ್‌ಗೆ ‘ಕ್ಯಾಲೋರಿ ಮೆಮೊ’ ಎಂದು ಹೆಸರಿಸಲಾಗಿದೆ. ಇದರಲ್ಲಿ “ನಿಮ್ಮೆಲ್ಲರಿಗೂ ಚಾರಿಟಿ ಹಾಲ್‌ಗೆ ಸ್ವಾಗತ.ನಾವೆಲ್ಲರೂ ಇಂದು ಪ್ರೀತಿಯನ್ನು ಸೆಲೆಬ್ರೇಟ್ ಮಾಡುತ್ತಿದ್ದೇವೆ. ಈ ವಿಶೇಷ ಕ್ಷಣವನ್ನು ನೀವು ಆನಂದಿಸಿ, ಆಹಾರವನ್ನು ಸವಿಯಿರಿ. ಆದರೆ ದಯವಿಟ್ಟು ಆಹಾರವನ್ನು ವ್ಯರ್ಥ ಮಾಡಬೇಡಿ” ಎಂದು ಬರೆಯಲಾಗಿದೆ. ಅದಲ್ಲದೇ ವಿಶೇಷ ಖಾದ್ಯಗಳ ಪಟ್ಟಿಯನ್ನು ನೀಡಲಾಗಿದ್ದು ಅದರ ಮುಂಭಾಗದಲ್ಲಿ ಕ್ಯಾಲೋರಿಯನ್ನು ಉಲ್ಲೇಖಿಸಲಾಗಿದೆ.

ವೈರಲ್​​​ ಪೋಟೋ ಇಲ್ಲಿದೆ ನೋಡಿ:

[Unique Menu Card]Op attended a wedding after a long time byu/Prestigious-Steak316 inindiasocial

ಮೆನು ಕಾರ್ಡ್ ಫೋಟೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ನಾನು ಬೆಂಗಾಲಿ ಮದುವೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ಉತ್ತರ ಭಾರತದ ಮದುವೆಗಳು ಸಾಮಾನ್ಯವಾಗಿ ಸಸ್ಯಾಹಾರಿ ಆಹಾರವನ್ನು ಹೊಂದಿರುತ್ತದೆ. ಆದರೆ ಬಂಗಾಳಿ ಮದುವೆಗಳಲ್ಲಿ ಬಹುತೇಕ ಎಲ್ಲವೂ ಮಾಂಸಾಹಾರಿಗಳಾಗಿರುತ್ತವೆ’ ಎಂದಿದ್ದಾರೆ. ಮತ್ತೊಬ್ಬರು, ‘ಅತ್ಯಂತ ಕೆಟ್ಟದಾಗಿ ವಿನ್ಯಾಸಗೊಳಿಸಲಾದ ಮೆನು ಕಾರ್ಡ್‌ಗಳಲ್ಲಿ ಒಂದು’ ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಭಾರತೀಯರು ಪಾತ್ರೆಗಳನ್ನು ಕೈಯಿಂದ ತೊಳೆಯುವುದು ಏಕೆ? ಡಿಶ್ ವಾಶರ್ ಬಳಸದಿರಲು ಇದೇ ಕಾರಣವಂತೆ

ಇನ್ನೊರ್ವ ಬಳಕೆದಾರರು, ‘ಈ ರೀತಿಯ ಮೆನು ಕಾರ್ಡ್ ನ್ನು ನಾನು ತುಂಬಾ ಇಷ್ಟ ಪಡುತ್ತೇನೆ. ನಾನು ಜೀವನಶೈಲಿ ಹಾಗೂ ಫಿಟ್ ನೆಸ್ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತೇನೆ. ಆದರೆ, ಈ ಮೆನು ಕಾರ್ಡ್ ಆಹಾರ ಪದ್ಧತಿಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಒಂದೆರಡು ದಿನಗಳ ಕಾಲ ಈ ರೀತಿ ಆಹಾರ ಸೇವಿಸುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ