Viral : ಐದನೇ ತರಗತಿ ಮಕ್ಕಳ ಪಠ್ಯ ಪುಸ್ತಕಗಳ ಬೆಲೆ ಏಳು ಸಾವಿರ ರೂಪಾಯಿ, ವಿಡಿಯೋ ವೈರಲ್
ಖಾಸಗಿ ಶಾಲೆಗಳು ಶಿಕ್ಷಣದ ಹೆಸರಿನಲ್ಲಿ ಉದ್ಯಮವನ್ನು ನಡೆಸುತ್ತಿದೆ. ಮಕ್ಕಳಿಗೆ ಖಾಸಗಿ ಶಾಲೆಗೆ ಸೇರಿರಬೇಕು ಎನ್ನುವ ಪೋಷಕರ ಈ ಮನಸ್ಥಿತಿಯನ್ನು ಅರಿತುಕೊಂಡು ಶಾಲಾ ಆಡಳಿತ ಮಂಡಳಿಗಳು ದುಬಾರಿ ಶುಲ್ಕ ವಿಧಿಸುವ ಮೂಲಕ ಶಿಕ್ಷಣವನ್ನು ಉದ್ಯಮವನ್ನಾಗಿಸಿಕೊಂಡಿದೆ. ಇದೀಗ ಪೋಷಕರೊಬ್ಬರು ಈ ಬಗೆಗಿನ ವಿಡಿಯೋ ಶೇರ್ ಮಾಡಿಕೊಂಡು, ಐದನೇ ತರಗತಿಯ ಪುಸ್ತಕದ ಬೆಲೆ ಬರೋಬ್ಬರಿ ಆರರಿಂದ ಏಳು ಸಾವಿರ ರೂಪಾಯಿ ಎನ್ನುವ ಕಟುವಾಸ್ತವವನ್ನು ಬಿಚ್ಚಿಟ್ಟಿದ್ದಾರೆ. ಈ ವಿಡಿಯೋ ನೋಡಿದ ಬಳಕೆದಾರರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಮಕ್ಕಳು (childrens) ಚೆನ್ನಾಗಿ ಓದಿ ಒಳ್ಳೆಯ ಬದುಕು ಕಟ್ಟಿಕೊಳ್ಳಲಿ ಎಂದು ಪೋಷಕರು ಎಷ್ಟೇ ಕಷ್ಟವಾದರೂ ಸರಿಯೇ ಖಾಸಗಿ ಶಾಲೆ (private school) , ಕಾನ್ವೆಂಟ್ ಶಾಲೆ (convent school)ಗೆ ಸೇರುತ್ತಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದು ಅನಿವಾರ್ಯ ಕೂಡ. ಆದರೆ ಈಗಿನ ಶಿಕ್ಷಣ ದುಬಾರಿಯಾಗಿದ್ದು, ಈ ಖಾಸಗಿ ಶಿಕ್ಷಣ ಸಂಸ್ಥೆ (private education institution) ಗಳು ಯಾವುದನ್ನು ಲೆಕ್ಕಿಸದೇ ಬೇಕಾ ಬಿಟ್ಟಿಯಾಗಿ ಮನಸ್ಸಿಗೆ ಬಂದಂತೆ ಶುಲ್ಕ (fees) ವನ್ನು ವಿಧಿಸಿ ಶುಲ್ಕದ ನೆಪದಲ್ಲಿ ಸುಲಿಗೆ ಮಾಡುತ್ತಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ವಿಚಾರದಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದು, ಐದನೇ ತರಗತಿಯ ಪಠ್ಯಪುಸ್ತಕ (books) ಗಳ ಬೆಲೆಯೂ ಆರರಿಂದ ಏಳು ಸಾವಿರ ರೂಪಾಯಿಯಿದೆ ಎಂದು ಹೇಳಿದ್ದು, ಇದೇ ವೇಳೆಯಲ್ಲಿ ಖಾಸಗಿ ಶಾಲೆಗಳ ದುಬಾರಿ ಪುಸ್ತಕಗಳ ಮಾರಾಟವನ್ನು ಟೀಕಿಸಿದ್ದಾರೆ.
Mohini of wealth ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದ ಪ್ರಾರಂಭದಲ್ಲಿ ವ್ಯಕ್ತಿಯೊಬ್ಬರು, ಇಂದು ನಾನು ಐದನೇ ತರಗತಿಯ ಮಗುವಿಗೆ ಪುಸ್ತಕ ತಂದಿದ್ದೇನೆ. ಈ ಪುಸ್ತಕಗಳ ವಿಶೇಷತೆಯೆಂದರೆ ಈ ಪುಸ್ತಕಗಳ ಮುಖಪುಟವು ಬೆಳ್ಳಿಯಿಂದ ಮಾಡಲ್ಪಟ್ಟಿದೆ. ಆದರೆ ಮಗುವು ಹಾಳೆಯನ್ನು ಮುಟ್ಟಿದ ತಕ್ಷಣ ಅದರಲ್ಲಿರುವ ಎಲ್ಲಾ ಮಾಹಿತಿಯು ಆ ಮಗುವಿನ ಮನಸ್ಸಿನೊಳಗೆ ಹೋಗುತ್ತದೆಯೇ. ಹಾಗಾದ್ರೆ ಈ ಪುಸ್ತಕಗಳ ಬೆಲೆ 6905 ರೂ. ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Teacher : aapko Saari cheeze school se hi leni hogi, jaise books, uniform, shoes, socks, belt. Father : aur education? Teacher : uske liye aap bahar tuition laga lena. 👍 pic.twitter.com/u4aLYFBmUa
— Mohini Of Investing (@MohiniWealth) April 3, 2025
ಇದರಲ್ಲಿ ಹೊಸ ಶಿಕ್ಷಣ ನೀತಿಯ ಬಗ್ಗೆ ಉಲ್ಲೇಖಿಸಿದ್ದು ‘ಒಂದು ರಾಷ್ಟ್ರ, ಒಂದು ತರಗತಿ, ಒಂದು ಪಠ್ಯಕ್ರಮ ಎನ್ನುವ ಒತ್ತಿಹೇಳುವಾಗ ಈ ಖಾಸಗಿ ಶಾಲೆಗಳು ಈ ಪುಸ್ತಕಗಳನ್ನು ಯಾಕೆ ಇಷ್ಟೊಂದು ಹಣವನ್ನು ವಿಧಿಸಿ ಮಾರಾಟ ಮಾಡುತ್ತಿವೆ. ಮಕ್ಕಳ ಬೆನ್ನ ಮೇಲೆ ಪುಸ್ತಕಗಳ ಹೊರೆ ಹೆಚ್ಚು ಮಾಡುತ್ತಿದೆ. ಜೊತೆಗೆ ಶುಲ್ಕ ಹಾಗೂ ಪಠ್ಯಗಳ ಮೇಲೆ ಹಣ ವಿಧಿಸಿ ಹೆಚ್ಚುವರಿ ಹಣವನ್ನು ಪೋಷಕರಿಂದ ವಸೂಲಿ ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಈ ಮೂಲಕ ಸಂಪೂರ್ಣವಾಗಿ ಪೋಷಕರನ್ನು ದಿವಾಳಿ ಮಾಡುತ್ತಿದೆ ಈಗೀಗ ಶಾಲೆ ಗಳು ಶಾಪಿಂಗ್ ಮಾಲ್ ನಂತೆ ಆಗಿದೆ ವ್ಯಂಗವಾಗಿಯೇ ಹೇಳಿದ್ದಾರೆ.
ಏಪ್ರಿಲ್ 3 ರಂದು ಶೇರ್ ಮಾಡಲಾದ ಈ ವಿಡಿಯೋವು ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ಹೆಚ್ಚಿನ ಖಾಸಗಿ ಶಾಲೆಗಳು ರಾಜಕಾರಣಿಗಳೇ ಹಣ ಹೂಡಿಕೆ ಮಾಡಿ ನಡೆಸುತ್ತಿದ್ದಾರೆ. ಅವರು ಶಿಕ್ಷಣದಲ್ಲಿ ಯಾವುದೇ ಸುಧಾರಣೆಗಳನ್ನು ಮಾಡುವುದಿಲ್ಲ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ಇದಕ್ಕೆ ಯಾವುದೇ ಪರಿಹಾರವಿಲ್ಲ, ಯಾವುದೇ ಸರ್ಕಾರಿ ಶಾಲಾ ಮುಖ್ಯಸ್ಥರಿಗೂ ಇದರ ಬಗ್ಗೆ ತಿಳಿದಿಲ್ಲ. ಇದೊಂದು ಹಣ ಗಳಿಸುವ ಮಾರ್ಗವಾಗಿದೆ. ನಾನು ಎರಡನೇ ತರಗತಿಗೆ 7500/- ರೂ. ಮೌಲ್ಯದ ಪುಸ್ತಕಗಳನ್ನು ಖರೀದಿಸಿದೆ’ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಗರ್ಭಿಣಿ ಪತ್ನಿಗೆ ನಡುರಸ್ತೆಯಲ್ಲೇ ಕಲ್ಲಿನಿಂದ ಜಜ್ಜಿ ಪತಿಯಿಂದ ಹಲ್ಲೆ
ಇನ್ನೊಬ್ಬ ಬಳಕೆದಾರರು, ‘ಸರ್, ಇದು ನಿಮ್ಮ ಸಮಸ್ಯೆ ಮಾತ್ರವಲ್ಲ, ಎಲ್ಲಾ ಪೋಷಕರ ಸಮಸ್ಯೆ, ಆದರೆ ಯಾರೂ ಇದರ ಬಗ್ಗೆ ಒಗ್ಗಟ್ಟಿನಿಂದ ಮಾತನಾಡಲು ಸಿದ್ಧವಿಲ್ಲ. ಆದರೆ ಏನೋ ತಪ್ಪು ನಡೆಯುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ. ಶಾಲೆಗಳು ಪ್ರತಿ ವರ್ಷವೂ ಅನಿಯಂತ್ರಿತವಾಗಿ ಶುಲ್ಕವನ್ನು ಹೆಚ್ಚಿಸುತ್ತಿವೆ ಮತ್ತು ಪುಸ್ತಕಗಳನ್ನು ಬದಲಾಯಿಸುತ್ತಿವೆ, ಆದರೆ ನಮ್ಮ ಶಿಕ್ಷಣ ಸಚಿವರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ