Viral: ಎತ್ತಾಕೊಂಡು ಹೋಗ್ತಾ ಇರೋದೇ; ಅಂಗಡಿಯಿಂದ ಹಿಟ್ಟಿನ ಪ್ಯಾಕೆಟ್ ಎಗರಿಸಿ ಓಡೋದ ಗಜರಾಜ
ಕಾಡಿನಿಂದ ನಾಡಿನ ಕಡೆಗೆ ಬರುವ ಕಾಡಾನೆಗಳು ಅಲ್ಲಲ್ಲಿ ದಾಂಧಲೆ ನಡೆಸುವಂತಹ, ಮಾನವ-ಕಾಡು ಪ್ರಾಣಿಗಳ ಸಂಘರ್ಷದ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಮಾರುಕಟ್ಟೆಗೆ ಎಂಟ್ರಿ ಕೊಟ್ಟಂತಹ ಆನೆಯೊಂದು ಸೀದಾ ಅಂಗಡಿಗೆ ನುಗ್ಗಿ ಅಲ್ಲಿಂದ ಹಿಟ್ಟಿನ ಪ್ಯಾಕೆಟ್ ಎಗರಿಸಿ ರಸ್ತೆ ಬದಿ ಓಡೋಗಿದೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಉತ್ತರಾಖಂಡ, ಏ. 9: ಅರಣ್ಯ ನಾಶ (deforestation), ಆಹಾರದ ಕೊರತೆ (lack of food), ಕಾಡಿನ ಪ್ರದೇಶಗಳಲ್ಲಿ ಅಂತರ್ಜಲ ಕುಸಿತದಿಂದ ಬತ್ತಿ ಹೋಗುತ್ತಿರುವ ನೀರಿನ ಆಸರೆಗಳು ಈ ಎಲ್ಲಾ ಕಾರಣಗಳಿಂದಾಗಿ ಕಾಡು ಪ್ರಾಣಿಗಳು (wild animals) ಆಗಾಗ್ಗೆ ನಾಡಿನೆಡೆಗೆ ಬರುತ್ತಲೇ ಇರುತ್ತವೆ. ಕೃಷಿ ಭೂಮಿಗಳಿಗೆ ನುಗ್ಗಿ ಆನೆಗಳು (elephants) ದಾಂಧಲೆ ನಡೆಸುವ, ಹುಲಿ (tiger), ಚಿರತೆ (leopard) ಜನ ನಿಬಿಡ ಪ್ರದೇಶಗಳಿಗೆ ಬಂದು ಭಯದ ವಾತಾವರನವನ್ನು ನಿರ್ಮಿಸುವಂತಹ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ. ಅದರಲ್ಲೂ ಇತ್ತೀಚೆಗೆ ಕಾಡಾನೆಗಳು ಜನನಿಬಿಡ ಪ್ರದೇಶಗಳಿಗೆ ಬರುವ ಸಂಖ್ಯೆ ತೀರಾ ಹೆಚ್ಚಾಗಿದೆ. ಅದೇ ರೀತಿ ಇತ್ತೀಚಿಗಷ್ಟೆ ಆಹಾರವನ್ನರಸುತ್ತಾ ಹರಿದ್ವಾರದ (Haridwar) ಹಳ್ಳಿಯೊಂದಕ್ಕೆ ನುಗ್ಗಿದ ಕಾಡಾನೆ ಅಂಗಡಿಯೊಂದರಿಂದ ಹಿಟ್ಟಿನ ಪ್ಯಾಕೆಟ್ ಎಗರಿಸಿದೆ. ಆನೆ ರಸ್ತೆಯಲ್ಲಿ ನಿಂತು ತಾನು ಎಗರಿಸಿದ ಹಿಟ್ಟನ್ನು ತಿಂದು ತೇಗಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ಉತ್ತರಾಖಂಡದ ಹರಿದ್ವಾರದ ಹಳ್ಳಿಯೊಂದರಲ್ಲಿ ನಡೆದಿದ್ದು, ಇಲ್ಲಿನ ಮಾರುಕಟ್ಟೆಗೆ ನುಗ್ಗಿದ ದೈತ್ಯ ಕಾಡಾನೆಯೊಂದು ಅಂಗಡಿಯಿಂದ ಹಿಟ್ಟಿನ ಪ್ಯಾಕೆಟ್ ಎಗರಿಸಿದೆ. ಹರಿದ್ವಾರದಲ್ಲಿ ಹೆಚ್ಚಿನ ಹಳ್ಳಿಗಳು ಅರಣ್ಯ ಪ್ರದೇಶಗಳಿಗೆ ಅಂಟಿಕೊಂಡಿವೆ. ಅಷ್ಟೇ ಅಲ್ಲದೆ ಇಲ್ಲಿ ಹತ್ತಿರದಲ್ಲೇ ರಾಜಾಜಿ ಹುಲಿ ಅಭಯಾರಣ್ಯ ಪ್ರದೇಶ ಕೂಡ ಇದೆ. ಇದರಿಂದ ಈ ಕಾಡು ಪ್ರಾಣಿಗಳು ಆಹಾರವನ್ನು ಹುಡುಕುತ್ತಾ ನಗರ ಪ್ರದೇಶಗಳಿಗೆ, ಹಳ್ಳಿಯ ಕಡೆ ಬರುತ್ತಲೇ ಇರುತ್ತವೆ. ಅದೇ ರೀತಿ ಇತ್ತೀಚಿಗಷ್ಟೇ ಹರಿದ್ವಾರದ ಮಾರುಕಟ್ಟೆಯೊಂದಕ್ಕೆ ನುಗ್ಗಿದ ಆನೆ, ಹಿಟ್ಟಿನ ಪ್ಯಾಕೆಟ್ ಕದ್ದು ರಸ್ತೆಯಲ್ಲಿಯೇ ಹಿಟ್ಟನ್ನು ತಿಂದು ತೇಗಿದೆ.
ಇದನ್ನೂ ಓದಿ: ‘ಪ್ಲೀಸ್ ದೇವ್ರೇ ನನಗೆ ಸುಂದರ ಹೆಂಡತಿಯನ್ನು ಕರುಣಿಸಿದ್ರೆ ಸಾಕು, ದೇವರ ಮುಂದೆ ವಿಶೇಷ ಬೇಡಿಕೆ ಇಟ್ಟ ವೃದ್ಧ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Video: Elephant Strolls Through Haridwar Market, Steals Flour And Runs Away https://t.co/aTbA5pXCZx pic.twitter.com/l1Roh4PwKN
— NDTV (@ndtv) April 9, 2025
ಈ ಕುರಿತ ವಿಡಿಯೋವನ್ನು NDTV ಯ ಅಧೀಕೃತ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, ಹರಿದ್ವಾರದ ಮಾರುಕಟ್ಟೆಯಲ್ಲಿ ಅಡ್ಡಾಡುತ್ತಿದ್ದ ಆನೆ, ಹಿಟ್ಟನ್ನು ಕದ್ದು ಓಡಿ ಹೋಗಿದೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಾರುಕಟ್ಟೆಯ ಪಕ್ಕದಲ್ಲೇ ಇರುವ ರಸ್ತೆಯಲ್ಲಿ ನಿಂದು ದೈತ್ಯ ಕಾಡಾನೆಯೊಂದು ಹಿಟ್ಟನ್ನು ಬಾಯಿಗೆ ಹಾಕಿಕೊಳ್ಳುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಕಾಡಿನಿಂದ ಬಂದ ಆನೆ ರಾಜಾರೋಷವಾಗಿ ಮಾರುಕಟ್ಟೆಗೆ ನುಗ್ಗಿ ಅಲ್ಲಿದ್ದ ಅಂಗಡಿಯೊಂದರಿಂದ ಹಿಟ್ಟು ಕದ್ದು, ನಂತರ ರಸ್ತೆಯಲ್ಲಿಯೇ ನಿಂತುಕೊಂಡು ಹಿಟ್ಟನ್ನು ತಿಂದು ತೇಗಿದೆ.
ಏಪ್ರಿಲ್ 09 ರಂದು ಶೇರ್ ಮಾಡಲಾದ ಈ ವಿಡಿಯೋ 4 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಕಾಡನ್ನು ಕಡಿದು ದೈತ್ಯ ಕಟ್ಟಡ, ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಿದ ಪರಿಣಾಮ ಇದುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮಾನವ-ವನ್ಯಜೀವಿ ಸಂಘರ್ಷಕ್ಕೆ ಮೂಲ ಕಾರಣವೇ ನಾವುಗಳುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಕದ್ದಿಲ್ಲ, ಅದು ತನ್ನ ಹಸಿವನ್ನು ನೀಗಿಸಿದೆ ಅಷ್ಟೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ