Viral : ‘ಪ್ಲೀಸ್ ದೇವ್ರೇ ನನಗೆ ಸುಂದರ ಹೆಂಡತಿಯನ್ನು ಕರುಣಿಸಿದ್ರೆ ಸಾಕು, ದೇವರ ಮುಂದೆ ವಿಶೇಷ ಬೇಡಿಕೆ ಇಟ್ಟ ವೃದ್ಧ
ಸೋಶಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಕೆಲವು ವಿಡಿಯೋಗಳು ಮುಖದಲ್ಲಿ ನಗು ತರಿಸಿದರೆ ಇನ್ನು ಕೆಲವು ಮನಸ್ಸಿಗೆ ಬೇಸರವನ್ನುಂಟು ಮಾಡುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವೃದ್ಧಯೊಬ್ಬನು ದೇವರಲ್ಲಿ ಸಂಗಾತಿಗಾಗಿ ಬೇಡಿಕೆಯಿಟ್ಟಿದ್ದಾನೆ. ಪ್ರಾರಂಭದಲ್ಲಿ ಇದು ತಮಾಷೆಯೆನಿಸಿರುವ ಆತನ ಮನಸ್ಸಿನ ನೋವು ಈ ವಿಡಿಯೋದಲ್ಲಿ ವ್ಯಕ್ತವಾಗಿದ್ದು ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

ಮನುಷ್ಯ (human) ನ ಆಸೆಗೆ ಕೊನೆ ಎಲ್ಲಿದೆ ಹೇಳಿ, ಒಂದು ಸಿಕ್ಕ ಮೇಲೆ ಮತ್ತೊಂದು ಬೇಕೆನಿಸುತ್ತದೆ. ಹೀಗಾಗಿ ಜೀವನದಲ್ಲಿ ತೃಪ್ತಿ (satisfaction) ಎನ್ನುವುದೇ ಇಲ್ಲ. ದಿನನಿತ್ಯ ಒಂದಲ್ಲ ಒಂದು ಬೇಡಿಕೆಯನ್ನು ದೇವ (god) ರ ಮುಂದೆ ಇಡುತ್ತೇವೆ. ಒಂದು ವೇಳೆ ತಾವಂದುಕೊಂಡಂತೆ ಆಗದಿದ್ದರೆ ದೇವರಿಗೆ ಬೈಯುತ್ತೇವೆ. ಅಥವಾ ತನ್ನ ಕನಸು (dream) ಹಾಗೂ ಬೇಡಿಕೆಯನ್ನು ಈಡೇರಿಸುವಂತೆ ಹರಕೆ ಕಟ್ಟಿಕೊಳ್ಳುತ್ತೇವೆ. ಆದರೆ ಇಲ್ಲೊಬ್ಬ ವೃದ್ಧ (old man) ದೇವರ ಮುಂದೆ ವಿಭಿನ್ನವಾದ ಬೇಡಿಕೆಯಿಟ್ಟಿದ್ದಾನೆ. ವಯಸ್ಸಾದ ಕಾಲದಲ್ಲಿ ತನಗೊಬ್ಬ ಸಂಗಾತಿ ಬೇಕೆಂದು ಕೇಳಿಕೊಂಡಿದ್ದು, ಈ ವಿಡಿಯೋವೊಂದು ವೈರಲ್ ಆಗಿದೆ.
ಹೌದು, @ghantaa ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವೃದ್ದನೊಬ್ಬನು ದೇವರ ಮುಂದೆ ಕೈ ಮುಗಿದು ಕುಳಿತಿದ್ದಾನೆ. ಈ ವೇಳೆ ತನಗೊಬ್ಬಳು ಹೆಂಡತಿಯನ್ನು ಕರುಣಿಸು ಎಂದು ಕೇಳಿದ್ದಾನೆ. ಇಲ್ಲಿಯವರೆಗೂ ಹೆಂಡತಿಯೊಬ್ಬಳನ್ನು ಬಿಟ್ಟರೆ ನನಗೆ ಯಾವುದರಲ್ಲಿ ಕೊರತೆ ಮಾಡಲಿಲ್ಲ. ದಯವಿಟ್ಟು ನನಗೆ ಸುಂದರ ಹೆಂಡತಿಯನ್ನು ನೀಡಿದರೆ ದಿನಾಲೂ ನಿನ್ನ ನೆನೆಯುತ್ತೇನೆ ಎಂದು ಪ್ರಾರ್ಥಿಸಿದ್ದಾನೆ. ಆತನ ಮುಖದಲ್ಲಿ ಬಾಳ ಸಂಗಾತಿಯಿಲ್ಲ ಎನ್ನುವ ನೋವು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಇದನ್ನೂ ಓದಿ: ರೈಲ್ವೆ ಹಳಿ ಮೇಲೆ ಮಲಗಿ ರೀಲ್ಸ್ ಮಾಡಲು ಹೋದ ಯುವಕ, ಮುಂದೇನಾಯ್ತು ನೋಡಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ನಗಬೇಕೋ ಅಳಬೇಕೋ ಎನ್ನುವುದು ತಿಳಿಯದಂತಾಗಿದೆ. ಈ ವಿಡಿಯೋವು ಈಗಾಗಲೇ ಒಂಬತ್ತು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬಳಕೆದಾರರೊಬ್ಬರು, ‘ದೇವರೇ ಈ ವೃದ್ಧನ ಅಸಹಾಯಕತೆ ನೋಡಲು ಆಗುತ್ತಿಲ್ಲ. ಈತನಿಗೆ ಹೇಗಾದ್ರು ಮದುವೆ ಮಾಡಿಸು’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಈ ರೀತಿಯ ಬೇಡಿಕೆಯಿಟ್ಟಿರುವವರಲ್ಲಿ ನಾನು ಒಬ್ಬ, ಆ ದೇವರು ಯಾರ ಬೇಡಿಕೆಯನ್ನು ಈಡೇರಿಸುವುದು ನೀವೇ ಹೇಳಿ’ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಈ ವಯಸ್ಸಿನಲ್ಲಿಯೂ ಮದುವೆಯಾಗ್ಬೇಕಾ? ಸಣ್ಣ ವಯಸ್ಸಿನವರಿಗೆ ಹುಡುಗಿ ಸಿಗುತ್ತಿಲ್ಲ’ ಎಂದು ಕಾಮೆಂಟ್ ನಲ್ಲಿ ತಮ್ಮ ನೋವನ್ನು ಹೊರಹಾಕಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ