AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳಾ ಪೊಲೀಸ್​ ಜತೆ ಹೋಟೆಲ್​ನಲ್ಲಿ ಸಿಕ್ಕಿಬಿದ್ದ ಪೊಲೀಸ್​ ಅಧಿಕಾರಿಗೆ ಕಾನ್​ಸ್ಟೆಬಲ್​ ಆಗಿ ಹಿಂಬಡ್ತಿ

ಮಹಿಳಾ ಪೊಲೀಸ್​ ಜತೆ ಹೋಟೆಲ್​ನಲ್ಲಿ ಸಿಕ್ಕಿಬಿದ್ದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರಿಗೆ ಕಾನ್​ಸ್ಟೆಬಲ್​ ಆಗಿ ಹಿಂಬಡ್ತಿ ನೀಡಲಾಗಿದೆ. ಈ ಪ್ರಕರಣ ನಡೆದು ಮೂರು ವರ್ಷಗಳ ಬಳಿಕ ಡಿಎಸ್​ ಕೃಪಾ ಶಂಕರ್​ ಕನೌಜಿಯಾ ಅವರನ್ನು ಕಾನ್​ಸ್ಟೆಬಲ್ ಹುದ್ದೆಗೆ ಹಿಂಬಡ್ತಿ ನೀಡಲಾಗಿದೆ.

ಮಹಿಳಾ ಪೊಲೀಸ್​ ಜತೆ ಹೋಟೆಲ್​ನಲ್ಲಿ ಸಿಕ್ಕಿಬಿದ್ದ ಪೊಲೀಸ್​ ಅಧಿಕಾರಿಗೆ ಕಾನ್​ಸ್ಟೆಬಲ್​ ಆಗಿ ಹಿಂಬಡ್ತಿ
ಪೊಲೀಸ್​-ಸಾಂದರ್ಭಿಕ ಚಿತ್ರ
ನಯನಾ ರಾಜೀವ್
|

Updated on: Jun 23, 2024 | 9:29 AM

Share

ಹೋಟೆಲ್​ನಲ್ಲಿ ಮಹಿಳಾ ಪೊಲೀಸ್​ ಜತೆ ಸಿಕ್ಕಿಬಿದ್ದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರಿಗೆ ಕಾನ್​ಸ್ಟೆಬಲ್​ ಆಗಿ ಹಿಂಬಡ್ತಿ ನೀಡಲಾಗಿದೆ. ಈ ಪ್ರಕರಣ ನಡೆದು ಮೂರು ವರ್ಷಗಳ ಬಳಿಕ ಡಿಎಸ್​ ಕೃಪಾ ಶಂಕರ್​ ಕನೌಜಿಯಾ ಅವರನ್ನು ಕಾನ್​ಸ್ಟೆಬಲ್ ಹುದ್ದೆಗೆ ಹಿಂಬಡ್ತಿ ನೀಡಲಾಗಿದೆ.

ಈ ಹಿಂದೆ ಉನ್ನಾವೊದಲ್ಲಿ ಸರ್ಕಲ್ ಆಫೀಸರ್ (ಸಿಒ) ಬಿಘಾಪುರ್ ಹುದ್ದೆಯನ್ನು ಹೊಂದಿದ್ದ ಕೃಪಾ ಶಂಕರ್ ಕನೌಜಿಯಾ ಅವರನ್ನು ಈಗ ಗೋರಖ್‌ಪುರದ 26 ನೇ ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (ಪಿಎಸಿ) ಬೆಟಾಲಿಯನ್‌ಗೆ ನಿಯೋಜಿಸಲಾಗಿದೆ.

2021ರಲ್ಲಿ ಅವರು ರಜೆ ತೆಗೆದುಕೊಂಡಿದ್ದರು ಆದರೆ ಮನೆಗೆ ಹೋಗುವ ಬದಲು ಮಹಿಳಾ ಪೊಲೀಸ್​ ಜತೆ ಹೋಟೆಲ್​ಗೆ ಹೋಗಿದ್ದರು. ತನ್ನ ಪತಿಯ ಹಠಾತ್ ನಾಪತ್ತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಒ ಅವರ ಪತ್ನಿ ಸಹಾಯಕ್ಕಾಗಿ ಎಸ್ಪಿ ಉನ್ನಾವ್ ಅವರನ್ನು ಸಂಪರ್ಕಿಸಿದರು.

ಮತ್ತಷ್ಟು ಓದಿ: ಅಶ್ಲೀಲ ವೀಡಿಯೋ ವೀಕ್ಷಣೆ ಚಟ; ದೈಹಿಕ ಸಂಪರ್ಕಕ್ಕೆ ಒಪ್ಪದ ಮಗಳನ್ನೇ ಕೊಂದ ತಂದೆ

ಬಳಿಕ ಪೊಲೀಸರು ಅವರ ಮೊಬೈಲ್​ ನಂಬರ್​ ಟ್ರೇಸ್​ ಮಾಡಿ ಅವರ ಮೊಬೈಲ್​ ಹೋಟೆಲ್​ನಲ್ಲಿರುವುದನ್ನು ಪತ್ತೆ ಹಚ್ಚಿದರು. ಉನ್ನಾವೊ ಪೊಲೀಸರು ತ್ವರಿತವಾಗಿ ಹೋಟೆಲ್‌ಗೆ ಆಗಮಿಸಿದರು, ಅಲ್ಲಿ ಅವರು ಸಿಒ ಮತ್ತು ಮಹಿಳಾ ಕಾನ್‌ಸ್ಟೆಬಲ್ ಒಟ್ಟಿಗೆ ಇರುವುದನ್ನು ಕಂಡರು.

ಘಟನೆಯ ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಕೂಲಂಕಷವಾಗಿ ಪರಿಶೀಲಿಸಿದ ನಂತರ, ಸರ್ಕಾರವು ಕೃಪಾ ಶಂಕರ್ ಕನೌಜಿಯಾ ಅವರನ್ನು ಕಾನ್‌ಸ್ಟೆಬಲ್ ಹುದ್ದೆಗೆ ಹಿಂತಿರುಗಿಸಲು ಶಿಫಾರಸು ಮಾಡಿದೆ. ADG ಅಡ್ಮಿನಿಸ್ಟ್ರೇಷನ್ ತಕ್ಷಣವೇ ಈ ನಿರ್ಧಾರವನ್ನು ಜಾರಿಗೆ ತರಲು ಆದೇಶವನ್ನು ಹೊರಡಿಸಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ