AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶ: ಕೇವಲ ನಾಯಿ ನೆಕ್ಕಿದ್ದಕ್ಕೆ ರೇಬಿಸ್​​ನಿಂದ ಪ್ರಾಣಬಿಟ್ಟ ಬಾಲಕ

ಕೇವಲ ನಾಯಿ ನೆಕ್ಕಿದ್ದಕ್ಕೆ ಬಾಲಕ ರೇಬಿಸ್(Rabies)​ ಬಂದು ಪ್ರಾಣಬಿಟ್ಟಿರುವ ಘಟನೆ ಉತ್ತರ ಪ್ರದೇಶ ಬಂದಾಯುವಿನಲ್ಲಿ ನಡೆದಿದೆ.ಮೃತ ಬಾಲಕನ ಕುಟುಂಬ ಮತ್ತು ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ.  ಬಾಲಕನ ಸಾವಿನ ಸುದ್ದಿ ತಿಳಿದ ತಕ್ಷಣ, ಮೃತ ಮಗುವಿನ ಎರಡು ಡಜನ್‌ಗೂ ಹೆಚ್ಚು ಸಂಬಂಧಿಕರು ಮತ್ತು ನೆರೆಹೊರೆಯವರು ರೇಬೀಸ್ ಇಂಜೆಕ್ಷನ್ ಪಡೆಯಲು ಆಸ್ಪತ್ರೆಗೆ ಓಡಿ ಬಂದಿದ್ದಾರೆ. ಸುಮಾರು ಎರಡು ತಿಂಗಳ ಹಿಂದೆ ನಾಯಿ ಬಾಲಕನನ್ನು ನೆಕ್ಕಿತ್ತು.

ಉತ್ತರ ಪ್ರದೇಶ: ಕೇವಲ ನಾಯಿ ನೆಕ್ಕಿದ್ದಕ್ಕೆ ರೇಬಿಸ್​​ನಿಂದ ಪ್ರಾಣಬಿಟ್ಟ ಬಾಲಕ
ನಾಯಿ
ನಯನಾ ರಾಜೀವ್
|

Updated on:Aug 19, 2025 | 2:50 PM

Share

ಲಕ್ನೋ, ಆಗಸ್ಟ್​ 19: ಕೇವಲ ನಾಯಿ ನೆಕ್ಕಿದ್ದಕ್ಕೆ ಬಾಲಕ ರೇಬಿಸ್(Rabies)​ ಬಂದು ಪ್ರಾಣಬಿಟ್ಟಿರುವ ಘಟನೆ ಉತ್ತರ ಪ್ರದೇಶ ಬಂದಾಯುವಿನಲ್ಲಿ ನಡೆದಿದೆ.ಮೃತ ಬಾಲಕನ ಕುಟುಂಬ ಮತ್ತು ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ.  ಬಾಲಕನ ಸಾವಿನ ಸುದ್ದಿ ತಿಳಿದ ತಕ್ಷಣ, ಮೃತ ಬಾಲಕನ ಕಡೆಯ ಎರಡು ಡಜನ್‌ಗೂ ಹೆಚ್ಚು ಸಂಬಂಧಿಕರು ಮತ್ತು ನೆರೆಹೊರೆಯವರು ರೇಬಿಸ್ ಇಂಜೆಕ್ಷನ್ ಪಡೆಯಲು ಆಸ್ಪತ್ರೆಗೆ ಓಡಿ ಬಂದಿದ್ದಾರೆ. ಸುಮಾರು ಎರಡು ತಿಂಗಳ ಹಿಂದೆ ನಾಯಿ ಬಾಲಕನನ್ನು ನೆಕ್ಕಿತ್ತು.

ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ದೇಶದೆಲ್ಲೆಡೆ ಹೆಚ್ಚಾಗಿದೆ. ಹಾಗೆಯೇ ದೆಹಲಿ, ಎನ್​ಸಿಆರ್​​ನಲ್ಲಿ ವಿಪರೀತವಾಗಿದ್ದು, ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಕಳುಹಿಸುವ ಕುರಿತು ಪರ, ವಿರೋಧಗಳು ಕೇಳಿಬರುತ್ತಿವೆ.

ಎರಡು ತಿಂಗಳ ಹಿಂದೆ, ಬಂದಾಯು ಜಿಲ್ಲೆಯ ಸುಜತ್‌ಗಂಜ್ ಬೇಲಾ ಗ್ರಾಮದ ಅನೀಸ್ ಅವರ ಮಗ ಅದ್ನಾನ್ ಆಟವಾಡುವಾಗ ಗಾಯಗೊಂಡಿದ್ದ. ಇದಾದ ನಂತರ ಅದ್ನಾನ್ ರಕ್ತಸ್ರಾವವಾಗಲು ಆರಂಭವಾಗಿತ್ತು. ಆ ಸಮಯದಲ್ಲಿ, ಹತ್ತಿರದ್ದ ನಾಯಿ ಅದ್ನಾನ್​​ಗೆ ಆದ ಗಾಯವನ್ನು ನೆಕ್ಕಿತ್ತು.

ಮತ್ತಷ್ಟು ಓದಿ: ನಾಯಿ ಕಡಿತ: ರೇಬಿಸ್​ ರೋಗದಿಂದ ಬೆಂಗಳೂರಿನಲ್ಲಿ 17 ಜನರ ಸಾವು

ಕುಟುಂಬವು ಇದನ್ನು ಸಾಮಾನ್ಯ ಘಟನೆ ಎಂದು ಪರಿಗಣಿಸಿ ನಿರ್ಲಕ್ಷಿಸಿತ್ತು. ಆದರೆ ಕೆಲವು ದಿನಗಳ ಹಿಂದೆ ಮಗುವಿಗೆ ರೇಬೀಸ್ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಅವನ ಸ್ಥಿತಿ ಹದಗೆಟ್ಟಾಗ, ಕುಟುಂಬವು ಅವನನ್ನು ವೈದ್ಯರ ಬಳಿಗೆ ಕರೆದೊಯ್ದರು. ಈ ಘಟನೆಯ ನಂತರ, ಇಡೀ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ರೇಬಿಸ್ ಅಪಾಯದ ಬಗ್ಗೆ ಸಮಯಕ್ಕೆ ಸರಿಯಾಗಿ ತಿಳಿದಿದ್ದರೆ, ಬಹುಶಃ ಬಾಲಕನ ಪ್ರಾಣವನ್ನು ಉಳಿಸಬಹುದಿತ್ತು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

ಈಗ ಈ ಘಟನೆಯ ನಂತರ, ಕುಟುಂಬ ಮತ್ತು ನೆರೆಹೊರೆಯವರು ಜಾಗರೂಕರಾಗಿದ್ದಾರೆ ಮತ್ತು ಮುನ್ನೆಚ್ಚರಿಕೆಯಾಗಿ, ಅವರು ಆಸ್ಪತ್ರೆಗೆ ಹೋಗಿ ರೇಬಿಸ್ ಲಸಿಕೆಯನ್ನು ಪಡೆಯುತ್ತಿದ್ದಾರೆ. ನಾಯಿ ಕಚ್ಚುವಿಕೆ ಅಥವಾ ನೆಕ್ಕುವಿಕೆಯಿಂದ ಉಂಟಾಗುವ ರೇಬಿಸ್ ಅನ್ನು ಹಗುರವಾಗಿ ಪರಿಗಣಿಸಬಾರದು ಎಂಬುದಕ್ಕೆ ಈ ಘಟನೆ ಒಂದು ದುಃಖಕರ ಉದಾಹರಣೆಯಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ಪ್ರಶಾಂತ್ ತ್ಯಾಗಿ ಹೇಳಿದ್ದಾರೆ.

ಯಾವುದೇ ಪ್ರಾಣಿ (ನಾಯಿ, ಬೆಕ್ಕು, ಮಂಗ ಇತ್ಯಾದಿ) ಯಾರನ್ನಾದರೂ ಕಚ್ಚಿದರೆ ಅಥವಾ ಗಾಯವನ್ನು ನೆಕ್ಕಿದರೆ, ಯಾವುದೇ ವಿಳಂಬವಿಲ್ಲದೆ ತಕ್ಷಣವೇ ರೇಬಿಸ್ ಲಸಿಕೆಯನ್ನು ನೀಡಬೇಕು. ಇಂದು, ಆರೋಗ್ಯ ಇಲಾಖೆಯ ತಂಡವು ಗ್ರಾಮವನ್ನು ತಲುಪಲಿದ್ದು, ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ಶಿಬಿರಗಳನ್ನು ಸ್ಥಾಪಿಸುವ ಮೂಲಕ ಅಗತ್ಯಕ್ಕೆ ಅನುಗುಣವಾಗಿ ಔಷಧಿಗಳು ಅಥವಾ ಲಸಿಕೆಗಳನ್ನು ನೀಡಲಾಗುವುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:45 pm, Tue, 19 August 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ