ಫೈಜಾಬಾದ್ ರೈಲ್ವೆ ಸ್ಟೇಶನ್ ಹೆಸರು ಬದಲಿಸಲು ಯೋಗಿ ಸರ್ಕಾರ ನಿರ್ಧಾರ; ಅದಕ್ಕೂ ಅಯೋಧ್ಯೆ ಹೆಸರು
ಫೈಜಾಬಾದ್ ರೈಲ್ವೆ ಸ್ಟೇಶನ್ನ ಹೆಸರನ್ನು ಅಯೋಧ್ಯಾ ಕೈಂಟ್ ಆಗಿ ಬದಲಿಸಲು ಪ್ರಸ್ತಾವನೆ ಇಡಲಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅನುಮೋದನೆ ನೀಡಿದ ಬಳಿಕ ಮರುನಾಮಕರಣ ಆಗಲಿದೆ ಎನ್ನಲಾಗಿದೆ.
ಲಖನೌ: ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ಬಿಜೆಪಿ ಸೇರಿ ಎಲ್ಲ ಪ್ರಮುಖ ಪಕ್ಷಗಳೂ ಅಲ್ಲಿ ಅಧಿಕಾರ ಗದ್ದುಗೆ ಹಿಡಿಯಲು ಪ್ರಯತ್ನ ಆರಂಭಿಸಿವೆ. ಇದೇ ಹೊತ್ತಲ್ಲಿ ಬಿಜೆಪಿ ಫೈಜಾಬಾದ್ ರೈಲ್ವೆ ಸ್ಟೇಶನ್ ಹೆಸರನ್ನು ಬದಲಿಸಲು ನಿರ್ಧಾರ ಮಾಡಿದೆ. ಅದಕ್ಕೆ ಅಯೋಧ್ಯಾ ಕೈಂಟ್ ಎಂದು ಮರುನಾಮಕರಣ ಮಾಡುವುದಾಗಿ ತಿಳಿಸಿದೆ. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕ ಈಗಾಗಲೇ ಹಲವು ಪ್ರದೇಶಗಳ ಹೆಸರನ್ನು ಬದಲಿಸಿದ್ದಾರೆ. ಇದೇ ಕಾರಣಕ್ಕೆ ಅವರು ಶ್ಲಾಘನೆಯನ್ನೂ ಪಡೆದಿದ್ದಾರೆ. ಟೀಕೆಗೂ ಗುರಿಯಾಗಿದ್ದಾರೆ.
ಫೈಜಾಬಾದ್ ರೈಲ್ವೆ ಸ್ಟೇಶನ್ನ ಹೆಸರನ್ನು ಅಯೋಧ್ಯಾ ಕೈಂಟ್ ಆಗಿ ಬದಲಿಸಲು ಪ್ರಸ್ತಾವನೆ ಇಡಲಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅನುಮೋದನೆ ನೀಡಿದ ಬಳಿಕ ಮರುನಾಮಕರಣ ಆಗಲಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಕಳೆದ ವಾರ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅಯೋಧ್ಯೆಗೆ ಬಂದಿದ್ದರು. ಆಗ ಆ ಪಕ್ಷದ ಕಾರ್ಯಕರ್ತರು ಅಯೋಧ್ಯೆಯ ಎಲ್ಲೆಡೆ, ಅಯೋಧ್ಯೆಯನ್ನು ಫೈಜಾಬಾದ್ ಎಂದು ಉಲ್ಲೇಖಿಸಿರುವ ಪೋಸ್ಟರ್ಗಳನ್ನು ಹಾಕಿದ್ದರು. ಇದೀಗ ಆ ಪೋಸ್ಟರ್ಗಳನ್ನೆಲ್ಲ ತೆಗೆಯುವಂತೆ ಉತ್ತರಪ್ರದೇಶ ಪೊಲೀಸರು ಎಐಎಂಐಎಂ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಅಂದಹಾಗೇ ಈ ಫೈಜಾಬಾದ್ ಎಂಬುದು ಅಯೋಧ್ಯೆಯಲ್ಲಿರುವ ಒಂದು ನಗರ.
#UPCM श्री @myogiadityanath जी ने फैजाबाद रेलवे जंक्शन का नाम “अयोध्या कैन्ट” करने का निर्णय लिया है। @spgoyal@sanjaychapps1@74_alok pic.twitter.com/P8qg4Gc2P3
— CM Office, GoUP (@CMOfficeUP) October 23, 2021
ಇದನ್ನೂ ಓದಿ: PPF: ಪಬ್ಲಿಕ್ ಪ್ರಾವಿಡೆಂಟ್ ಫಂಡ್ನಲ್ಲಿ 1 ಕೋಟಿ ರೂಪಾಯಿ ಉಳಿಸಲು ತಿಂಗಳಿಗೆ ಎಷ್ಟು ಉಳಿಸಬೇಕು?
ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ; ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಕಾರ್ಯಕ್ರಮಕ್ಕೆ ಗೈರು