ಉತ್ತರಪ್ರದೇಶ ಈಗ ಮಾಫಿಯಾ ಬದಲಿಗೆ ಹಬ್ಬಗಳ ನಾಡು: ಸಿಎಂ ಯೋಗಿ
ಸತತ ಆರು ವರ್ಷಗಳ ಅಧಿಕಾರವನ್ನು ಪೂರೈಸಿ, ಶನಿವಾರದಂದು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ವಾರ್ಷಿಕೋತ್ಸವವನ್ನು ಸಂಭ್ರಮಿಸಿದ ಯೋಗಿ ಸರ್ಕಾರ.
ಲಖನೌ: ಉತ್ತರ ಪ್ರದೇಶ (Uttar Pradesh) ಬದಲಾಗುತ್ತಿದೆ, ಇಲ್ಲಿ ಕೊಲೆ, ಅತ್ಯಾಚಾರ, ಮಾಫಿಯಾದಿಂದ ಆಚರಣೆ, ಸಂಪ್ರಾದಾಯ, ಹಬ್ಬ, ಉತ್ಸಾವಗಳಾಗಿ ಬದಲಾವಣೆಯಾಗುತ್ತಿದೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಹೇಳಿದ್ದಾರೆ. ಹೌದು ಉತ್ತರ ಪ್ರದೇಶವು ದರೋಡೆಕೋರರು, ಮಾಫಿಯಾ ಮತ್ತು ಕಾನೂನುಬಾಹಿರತೆಯ ಬದಲಿಗೆ ಹಬ್ಬಗಳ ನಾಡು ಎಂಬ ಗುರುತನ್ನು ದಾಖಲಿಸುತ್ತಿದೆ. ಕಳೆದ ಆರು ವರ್ಷಗಳಲ್ಲಿ ಉತ್ತರ ಪ್ರದೇಶವು ಅನೇಕ ಸಾಧನೆಗಳನ್ನು ಮಾಡಿದೆ ಎಂದು ಹೇಳಿದರು. ಸತತ ಆರು ವರ್ಷಗಳ ಅಧಿಕಾರವನ್ನು ಪೂರೈಸಿ, ಶನಿವಾರದಂದು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ವಾರ್ಷಿಕೋತ್ಸವವನ್ನು ಸಂಭ್ರಮಿಸಿದ ಸಂದರ್ಭದಲ್ಲಿ, ಯೋಗಿ ರಾಜ್ಯವನ್ನು ಮುನ್ನಡೆಸುತ್ತಿರುವ ತಮ್ಮ ಮಂತ್ರಿಗಳು ಮತ್ತು ಅಧಿಕಾರಿಗಳ ತಂಡವನ್ನು ಶ್ಲಾಘಿಸಿದರು. ತಮಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದರು.
ನಮ್ಮ ಸಚಿವ ಸಂಪುಟ ಹಾಗೂ ಅಧಿಕಾರಿಗಳು ಮಾಡುತ್ತಿರುವ ಕೆಲಸ ಮತ್ತು ಅದರಲ್ಲಿರುವ ಬದ್ಧತೆ ಉತ್ತರಪ್ರದೇಶದಲ್ಲಿ ಒಂದು ದೊಡ್ಡ ಬದಲಾವಣೆಯನ್ನು ತಂದಿದೆ. ಕ್ಯಾಬಿನೆಟ್, ಸಾರ್ವಜನಿಕ ಪ್ರತಿನಿಧಿಗಳು, ಸಂಸ್ಥೆಗಳು ಮತ್ತು ಅಧಿಕಾರಿಗಳ ಒಗ್ಗಟಿನ ಕಾರ್ಯದ ಫಲವಾಗಿ ಇಂದು ಉತ್ತರ ಪ್ರದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ರಾಜ್ಯವಾಗಿ ಮುನ್ನಡೆದಿದೆ ಎಂದು ಯೋಗಿ ಹೇಳಿದರು.
ಈ ಸಮುದಲ್ಲಿ ತಮ್ಮ ಸರ್ಕಾರ ಆರು ವರ್ಷ ಪೂರ್ಣಗೊಳಿಸಿದಕ್ಕಾಗಿ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿದರು. ಉತ್ತರ ಪ್ರದೇಶದ ಪರಂಪರೆ ಮತ್ತು ಬದಲಾವಣೆ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಉತ್ಸಾಹದಿಂದ ಮುನ್ನಡೆಯಲಾಗುವುದು ಎಂದು ನಾನು ರಾಜ್ಯದ ಜನತೆಗೆ ಭರವಸೆ ನೀಡುತ್ತೇನೆ. ನಮ್ಮ ರಾಜ್ಯವು ಕೊಲೆ, ಅತ್ಯಾಚಾರ ಮಾಫಿಯಾಕ್ಕಿಂತ ಹೆಚ್ಚಾಗಿ ಹಬ್ಬಗಳಿಗೆ ಹೆಸರುವಾಸಿಯಾಗಿದೆ. ಗುಂಡರಾಜ್ ಮತ್ತು ಜಂಗಲ್ ರಾಜ್ ಈಗ ಹಿಂದಿನ ವಿಷಯಗಳು ಎಂದು ಹೇಳಿದ್ದಾರೆ.
ಆರು ವರ್ಷಗಳ ಸಾಧನೆ ಆಧಾರಿತ ‘ಛಾಹ್ ಸಾಲ್-ಯುಪಿ ಖುಶಾಲ್’ ಪುಸ್ತಕವನ್ನು ಯೋಗಿ ಬಿಡುಗಡೆ ಮಾಡಿದರು. ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಗೃಹ ಸಚಿವರು, ರಕ್ಷಣಾ ಸಚಿವರು, ರಸ್ತೆ ಸಾರಿಗೆ ಹೆದ್ದಾರಿ ಸಚಿವರು, ಕೇಂದ್ರ ಸಚಿವ ಸಂಪುಟದ ಸದಸ್ಯರು ಮತ್ತು ಕೇಂದ್ರ ಮತ್ತು ರಾಜ್ಯ ಪಕ್ಷ ಸಂಘಟನೆಗಳ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಸರ್ಕಾರ ಮತ್ತು ಸಂಸ್ಥೆಯ ನಡುವಿನ ಸಮನ್ವಯತೆಯು ಎರಡು ಇಂಜಿನ್ ಸರ್ಕಾರದ ಕಾರ್ಯಗಳನ್ನು ಎಲ್ಲಾ ವಿರೋಧಾಭಾಸಗಳ ನಡುವೆಯೂ ಜನಸಾಮಾನ್ಯರಿಗೆ ಕೊಂಡೊಯ್ಯಲು ಸಹಕಾರಿಯಾಗಿದೆ ಎಂದು ಹೇಳಿದರು.
“
Published On - 10:45 am, Mon, 27 March 23