ಉತ್ತರ ಪ್ರದೇಶ: ತೋಟದಿಂದ ಪೇರಳೆ ಕದ್ದ ಆರೋಪದಲ್ಲಿ ಯುವಕನನ್ನು ಹೊಡೆದು ಕೊಂದ ಸ್ಥಳೀಯರು

ಕೈಯಲ್ಲಿ ಹಣ್ಣನ್ನು ನೋಡಿದ  ತೋಟದ ಕಾವಲುಗಾರರು ಯುವಕ ಕುಸಿದು ಬೀಳುವವರೆಗೆ ಥಳಿಸಿದ್ದಾರೆ ಎಂದು ಸಹೋದರ ಹೇಳಿರುವುದಾಗಿ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ

ಉತ್ತರ ಪ್ರದೇಶ: ತೋಟದಿಂದ ಪೇರಳೆ ಕದ್ದ ಆರೋಪದಲ್ಲಿ ಯುವಕನನ್ನು ಹೊಡೆದು ಕೊಂದ ಸ್ಥಳೀಯರು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 06, 2022 | 1:46 PM

ಉತ್ತರ ಪ್ರದೇಶದ (Uttar Pradesh) ಅಲಿಗಢ (Aligarh)ಜಿಲ್ಲೆಯಲ್ಲಿ ತೋಟವೊಂದರಲ್ಲಿ ಪೇರಳೆ ಕದ್ದ ಆರೋಪದ ಮೇಲೆ 20ರ ಹರೆಯದ ವ್ಯಕ್ತಿಯೊಬ್ಬನನ್ನು ಅಲ್ಲಿನ ಜನರು ಥಳಿಸಿ ಕೊಂದ ಘಟನೆ ಶನಿವಾರ ನಡೆದಿದೆ. ಪ್ರಕರಣದಲ್ಲಿ ಇದುವರೆಗೆ ಒಟ್ಟು ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಸಹೋದರನ ಪ್ರಕಾರ ಆತ(ಈಗ ಮೃತರಾಗಿರುವ ವ್ಯಕ್ತಿ) ಕಾಡಿಗೆ ಹೋಗಿದ್ದ. ಅಲ್ಲಿಂದ ಬರುವಾಗ ತೋಟವೊಂದರಲ್ಲಿ ಬಿದ್ದದ್ದ ಪೇರಳೆ ಹಣ್ಣು ಹೆಕ್ಕಿದ್ದ. ಅವನ ಕೈಯಲ್ಲಿ ಹಣ್ಣನ್ನು ನೋಡಿದ  ತೋಟದ ಕಾವಲುಗಾರರು ಯುವಕ ಕುಸಿದು ಬೀಳುವವರೆಗೆ ಥಳಿಸಿದ್ದಾರೆ ಎಂದು ಸಹೋದರ ಹೇಳಿರುವುದಾಗಿ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. ಸಂತ್ರಸ್ತ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಆತ ಸಾವಿಗೀಡಾದ ಎಂದು ಪೊಲೀಸರು ಹೇಳಿದ್ದಾರೆ. ಶನಿವಾರದಂದು ಗಂಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೇನಾ ಗ್ರಾಮದ ತೋಟದಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತ ದಲಿತ ಎಂದು ಮಾಧ್ಯಮಗಳು ವರದಿ ಮಾಡಿವೆ.

“ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂತ್ರಸ್ತನನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ. ಸಂಬಂಧಿಕರು ನೀಡಿದ ದೂರಿನ ಆಧಾರದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ವೃತ್ತ ಅಧಿಕಾರಿ ಎಕೆ ಪಾಂಡೆ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

Published On - 1:30 pm, Sun, 6 November 22