
ನವದೆಹಲಿ, ಜನವರಿ 13: ಉತ್ತರಪ್ರದೇಶದ ಖುಷಿ ನಗರದಲ್ಲಿ 30 ವರ್ಷದ ವ್ಯಕ್ತಿಯೊಬ್ಬ ತನ್ನ ತಾಯಿ ಮತ್ತು ಹೆಂಡತಿಯನ್ನು ಮನೆಯಲ್ಲೇ ಹೊಡೆದು ಕೊಂದು (Murder), ಅವರ ತಲೆಗಳನ್ನು ಇಟ್ಟಿಗೆಗಳಿಂದ ಒಡೆದು, ತಲೆಬುರುಡೆಯಿಂದ ಮಾಂಸವನ್ನು ಬಗೆದು ತಿಂದಿದ್ದಾನೆ. ಆತನ ಹಲ್ಲೆಯಿಂದ ಒದ್ದಾಡುತ್ತಿದ್ದ ಆ ಇಬ್ಬರು ಹೆಂಗಸರ ನರಳಾಟವನ್ನು ನೋಡಿ ಸುತ್ತಮುತ್ತಲಿನವರು ಆಘಾತದಿಂದ ಅಲ್ಲಿ ಬಂದು ಸೇರಿದ್ದರು. ಅವರ ಗೋಳಾಟವನ್ನು ನೋಡುತ್ತಿದ್ದ ಜನರೆದುರೇ ಆ ದೇಹಗಳಿಂದ ಮಾಂಸವನ್ನು ತೆಗೆದು ಆತ ತಿಂದಿದ್ದಾನೆ. ಇದನ್ನು ನೋಡಿ ನೆರೆಹೊರೆಯವರು ಭಯದಿಂದ ಮನೆಯೊಳಗೆ ಓಡಿದ್ದಾರೆ.
ಅಹಿರೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪಾರ್ಸಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ನೋಡುತ್ತಿದ್ದಾಗ 30 ವರ್ಷದ ವ್ಯಕ್ತಿ ತನ್ನ ತಾಯಿ ಮತ್ತು ಹೆಂಡತಿಯನ್ನು ಕೊಂದಿದ್ದಾನೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ. ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಆರೋಪಿಯಾದ ಸಿಕಂದರ್ ಗುಪ್ತಾ ಎಂಬಾತನನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಪ್ರಿಯಕರನೊಂದಿಗೆ ಓಡಿಹೋಗಿದ್ದಕ್ಕೆ ಪೊಲೀಸ್ ಠಾಣೆಯಲ್ಲೇ ಹೆಂಡತಿಯನ್ನು ಶೂಟ್ ಮಾಡಿ ಕೊಂದ ಗಂಡ!
ಕಿರುಚಾಟ ಕೇಳಿ ನೆರೆಹೊರೆಯವರು ಹೊರಗೆ ಓಡಿಬಂದರು. ಪಕ್ಕದ ಮನೆಯ ಕಡೆಗೆ ಧಾವಿಸಿದ ಅವರು ಅಲ್ಲಿನ ಪರಿಸ್ಥಿತಿ ನೋಡಿ ಶಾಕ್ ಆಗಿ ನಿಂತರು. ರಕ್ತ ಸೋರುತ್ತಿದ್ದರೂ ಬಿಡದೆ ಸಿಕಂದರ್ ತನ್ನ ತಾಯಿ ಹಾಗೂ ಅಮ್ಮನಿಗೆ ಹೊಡೆಯುತ್ತಿದ್ದ. ಅವರೆಲ್ಲರೂ ಬಿಡಿಸಲು ಮುಂದೆ ಹೋಗಲು ಹೆದರಿ ಅಲ್ಲೇ ನಿಂತಿದ್ದರು. ಆಗ ಆತ ಇಟ್ಟಿಗೆಯಿಂದ ಹೊಡೆದು ಅವರಿಬ್ಬರನ್ನೂ ಕೊಂದನು. ಇದರಿಂದ ಜನರು ಭಯದಿಂದ ಹಿಂದೆ ಸರಿದರು. ಪೊಲೀಸ್ ತಂಡಗಳು ಶೀಘ್ರದಲ್ಲೇ ಆಗಮಿಸಿ ಸಿಕಂದರ್ ಅವರನ್ನು ವಶಕ್ಕೆ ತೆಗೆದುಕೊಂಡವು.
ಇದನ್ನೂ ಓದಿ: ಕಾಡು ಹಂದಿಗಾಗಿ ಇಟ್ಟಿದ್ದ ದೇಶಿ ಬಾಂಬ್ ಕಚ್ಚಿ ಆನೆ ಮರಿ ದಾರುಣ ಸಾವು
ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಿಕಂದರ್ ಸುಮಾರು 1 ತಿಂಗಳ ಹಿಂದೆ ತನ್ನ ಗ್ರಾಮಕ್ಕೆ ಮರಳಿದ್ದ. ಮದ್ಯ ಮತ್ತು ಗಾಂಜಾ ವ್ಯಸನಿಯಾಗಿದ್ದ ಆತ ಈ ಹಿಂದೆಯೂ ಹಲವು ಬಾರಿ ಪತ್ನಿ ಪ್ರಿಯಾಂಕಾ (28) ಮತ್ತು ತಾಯಿ ರುನಾ ದೇವಿ (60) ಇಬ್ಬರ ಮೇಲೂ ಹಲ್ಲೆ ನಡೆಸಿದ್ದ. ಆದರೆ, ಈ ಬಾರಿ ಅವರಿಬ್ಬರನ್ನೂ ಕೊಲೆ ಮಾಡಿ, ಸಿಮೆಂಟ್ ಇಟ್ಟಿಗೆಯಿಂದ ತಲೆಯನ್ನು ಒಡೆದು, ಅದರಿಂದ ಮಾಂಸವನ್ನು ಹೊರಗೆ ತೆಗೆದು ತಿನ್ನುವ ಮೂಲಕ ವಿಕೃತಿ ಮೆರೆದಿದ್ದಾನೆ. ಆತನ ಮಾನಸಿಕ ಆರೋಗ್ಯದ ಬಗ್ಗೆಯೂ ತನಿಖೆಗಳು ನಡೆದಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ