
ಉತ್ತರ ಪ್ರದೇಶ, ಏಪ್ರಿಲ್ 02: ನಾನು ಮಕ್ಕಳನ್ನು ನೋಡಿಕೊಳ್ಳುತ್ತೇನೆ ನೀನು ಪ್ರಿಯಕರನೊಂದಿಗೆ ಮದುವೆ(Marriage)ಯಾಗಿ ಸುಖವಾಗಿರು ಎಂದು ಪತ್ನಿಯನ್ನು ಬೇರೊಬ್ಬನಿಗೆ ಕೊಟ್ಟು ಮದುವೆ ಮಾಡಿಸಿದ್ದ ಪತಿ, ಇದೀಗ ಪಶ್ಚಾತಾಪ ಪಟ್ಟು ಪತ್ನಿಯನ್ನು ಮತ್ತೆ ಮನೆಗೆ ಕರೆದುಕೊಂಡು ಬಂದಿದ್ದಾನೆ. ಈಗಾಗಲೇ ವೈರಲ್ ಆಗಿದ್ದ ಈ ಘಟನೆ, ಪತ್ನಿ ತನ್ನ ಮೊದಲ ಗಂಡನ ಬಳಿಗೆ ಮರಳಿದಾಗ ಮತ್ತೊಂದು ತಿರುವು ಪಡೆದುಕೊಂಡಿತು.
ಪತ್ನಿ ರಾಧಿಕಾ ವಿಕಾಸ್ ಜತೆ ಸಂಬಂಧ ಹೊಂದಿದ್ದಾಳೆಂದು ಬಬ್ಲೂಗೆ ತಿಳಿದತ್ತು. ಜಗಳ ಮಾಡುವ ಮೊದಲು ಪತ್ನಿಯನ್ನು ಆಕೆಯ ಪ್ರಿಯಕರನಿಗೆ ಕೊಟ್ಟು ಮದುವೆ ಮಾಡಲು ನಿರ್ಧರಿಸಿದ್ದ.
ಮಾರ್ಚ್ 25ರಂದು ದೇವಾಲಯದಲ್ಲಿ ವಿಕಾಸ್ ಜತೆ ರಾಧಿಕಾ ವಿವಾಹವನ್ನು ನೆರವೇರಿಸಿದ್ದ. ಇತ್ತೀಚೆಗೆ ಪತ್ನಿ ಪ್ರಯಕರನ ಜತೆ ಸೇರಿಕೊಂಡು ಗಂಡನನ್ನು ಕೊಲೆ ಮಾಡಿರುವ ಸಾಕಷ್ಟು ಘಟನೆಗಳು ನಡೆದಿವೆ, ಅದರಿಂದ ನಾನು ಭಯಗೊಂಡಿದ್ದೆ ಎಂದು ಬಬ್ಲೂ ಹೇಳಿದ್ದಾನೆ.
ನಾನು ಬದುಕಬೇಕೆಂದು ನನ್ನ ಹೆಂಡತಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಲು ನಿರ್ಧರಿಸಿದೆ. ಆದರೆ ಮದುವೆಯಾಗಿ ಕೆಲವೇ ದಿನಗಳಲ್ಲಿ ಮಾರ್ಚ್ 28ರಂದು ಬಬ್ಲೂ ವಿಕಾಸ್ ಮನೆಗೆ ಹೋಗಿ ರಾಧಿಕಾರನ್ನು ವಾಪಸ್ ಕರೆದುಕೊಂಡು ಬಂದಿದ್ದಾರೆ.
ಏಳು ಮತ್ತು ಎರಡು ವರ್ಷದ ತಮ್ಮ ಇಬ್ಬರು ಮಕ್ಕಳನ್ನು ಒಬ್ಬಂಟಿಯಾಗಿ ನೋಡಿಕೊಳ್ಳಲು ಕಷ್ಟಪಡುತ್ತಿರುವುದಾಗಿ ಬಬ್ಲೂ ಹೇಳಿಕೊಂಡಿದ್ದರು ಎನ್ನಲಾಗಿದೆ. ನಂತರ ವಿಕಾಸ್ ಮತ್ತು ಅವರ ಕುಟುಂಬವು ರಾಧಿಕಾಗೆ ಬಬ್ಲೂ ಜೊತೆ ಮರಳಲು ಅವಕಾಶ ಮಾಡಿಕೊಟ್ಟಿತು.
ಮತ್ತಷ್ಟು ಓದಿ: ಮಕ್ಕಳನ್ನು ನಾನು ನೋಡ್ಕೋತೀನಿ, ನೀನು ಇಷ್ಟಪಟ್ಟವನ ಜತೆ ಖುಷಿಯಾಗಿರು ಎಂದು ಪತ್ನಿಗೆ ಮದುವೆ ಮಾಡಿಸಿದ ಗಂಡ
ಅವಳನ್ನು ಬಲವಂತವಾಗಿ ಮದುವೆ ಮಾಡಿಕೊಡಲಾಗಿತ್ತು, ಮದುವೆಯಾದ ಕೆಲವೇ ದಿನಗಳಲ್ಲಿ ಆಕೆ ನಿಷ್ಕಳಂಕಳು ಎಂದು ನನಗೆ ತಿಳಿಯಿತು. ನಾನು ಆಕೆಯ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ನಾನು ಅವಳೊಂದಿಗೆ ಶಾಂತಿಯುತವಾಗಿ ಬದುಕಲು ಬಯಸುತ್ತೇನೆ ಎಂದು ಬಬ್ಲೂ ಹೇಳಿದ್ದಾನೆ.
ವಿಕಾಸ್ ಅವರ ತಾಯಿ ಗಾಯತ್ರಿ ಅವರ ಪ್ರಕಾರ, ಅವರ ಕುಟುಂಬವು ಮೊದಲಿನಿಂದಲೂ ಮದುವೆಗೆ ವಿರೋಧಿಸುತ್ತಿತ್ತು ಮತ್ತು ಬಬ್ಲೂ ತನ್ನ ಮಕ್ಕಳನ್ನು ಕರೆತಂದಾಗ, ರಾಧಿಕಾ ಮತ್ತೆ ಅವನ ಬಳಿಗೆ ಹೋಗುವುದನ್ನು ತಡೆಯಲು ಅವರಿಗೆ ಸಾಧ್ಯವಾಗಲಿಲ್ಲ.
ರಾಧಿಕಾ ಮದುವೆಯಾಗಿ ಮೂರು ದಿನಕ್ಕೇ ಹಿಂದಿರುಗಿದ್ದಾಳೆ. ಅವನು ಮಕ್ಕಳನ್ನು ಒಬ್ಬಂಟಿಯಾಗಿ ನೋಡಿಕೊಳ್ಳಲು ಸಾಧ್ಯವಿಲ್ಲ ಮತ್ತು ತನ್ನ ತಪ್ಪಿನ ಅರಿವಾಗಿದೆ ಎಂದು ಹೇಳಿದ್ದ, ಮಕ್ಕಳನ್ನು ನೋಡಿದಾಗ ಕಳುಹಿಸುವುದಿಲ್ಲ ಎಂದು ಹೇಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ರಾಧಿಕಾ ಬಬ್ಲೂ ಜೊತೆ ಜಿಲ್ಲೆಯ ದೂರ ಸ್ಥಳದಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ, ವಿಕಾಸ್ ಬೇರೆಡೆ ಕೆಲಸ ಹುಡುಕಲು ಮನೆ ಬಿಟ್ಟಿದ್ದಾನೆ ಎನ್ನಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:07 am, Wed, 2 April 25