ಬೆಡ್ ಕೆಳಗೆ ಗುಮ್ಮನಿದ್ದಾನೆ ಎಂದ ಮಗು, ಮಂಚದ ಕೆಳಗೆ ನೋಡಿ ಬೆಚ್ಚಿಬಿದ್ದ ಶಿಕ್ಷಕಿ
ಮಹಿಳೆಯೊಬ್ಬರು ಡೇ ಕೇರ್ ಕೇಂದ್ರವನ್ನು ನಡೆಸುತ್ತಿದ್ದರು, ಮನೆಯಲ್ಲಿಯೇ ಹತ್ತಾರು ಮಕ್ಕಳ ಪೋಷಣೆ ಮಾಡುತ್ತಿದ್ದರು. ಹೀಗೆಯೇ ಒಂದು ದಿನ ಮಗುವನ್ನು ಮಲಗಿಸುತ್ತಿದ್ದಾಗ ಅದು ಮಂಚದ ಕೆಳಗೆ ಗುಮ್ಮನಿದ್ದಾನೆ ಎಂದು ಹೇಳಿದೆ. ಆದರೆ ಶಿಕ್ಷಕಿಗೆ ನಂಬಿಕೆ ಇರಲಿಲ್ಲ, ಮಗು ಸುಮ್ಮನೇ ಏನೋ ಹೇಳುತ್ತಿದೆ ಎಂದುಕೊಂಡರೂ ಮಗುವಿಗೆ ಬೇಸರವಾಗಬಾರದು ಎಂದು ಅಲ್ಲಿ ಏನೂ ಇಲ್ಲ ಎನ್ನುತ್ತಲೇ ಕೆಳಗೆ ಬಗ್ಗಿ ನೋಡಿದಾಗ ಅಲ್ಲಿದ್ದ ವ್ಯಕ್ತಿಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಮುಂದೇನಾಯಿತು ಎಂಬುದನ್ನು ತಿಳಿಯಲು ಸುದ್ದಿ ಓದಿ.

ಸಾಮಾನ್ಯವಾಗಿ ಬೇಬಿ ಸಿಟ್ಟಿಂಗ್ಗೆ ಹೋಗುವವರೆಲ್ಲಾ ಪುಟ್ಟ ಪುಟ್ಟ ಮಕ್ಕಳಾಗಿರುವುದರಿಂದ ಮಧ್ಯೆ ಏನಾದರೂ ತಿನ್ನಿಸಿ ಅವರನ್ನು ಮಲಗಿಸುವುದು ವಾಡಿಕೆ. ಬೇರೆ ದೇಶಗಳಲ್ಲಿ ಕೆಲವು ಕಡೆ ಅದಕ್ಕೆಂದು ಪ್ರತ್ಯೇಕ ಸ್ಥಳವಿಲ್ಲದಿದ್ದರೂ ಕೆಲವರು ತಮ್ಮ ಮನೆಯಲ್ಲೇ ಡೇ ಕೇರ್ಗಳನ್ನು ತೆರೆದಿರುತ್ತಾರೆ. ಹಾಗೆಯೇ ಶಿಶುಪಾಲಕರೊಬ್ಬರು ಮಗುವನ್ನು ಮಲಗಿಸುತ್ತಿದ್ದಾಗ ಮಗು ಮಂಚದ ಕೆಳಗೆ ಗುಮ್ಮನಿದ್ದಾನೆ ಎಂದು ಹೇಳಿದೆ. ಮಗು ಮಾತನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೂ ಕೂಡ ಮಗುವಿಗೆ ಬೇಸರವಾಗಬಾರದೆಂದು ಕೆಳಗೆ ಇಣುಕಿದಾಗ ಅಲ್ಲಿ ಒಬ್ಬ ವ್ಯಕ್ತಿ ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಮಗು ಸತ್ಯವೇ ಹೇಳಿತ್ತು ಎಂಬುದು ತಿಳಿದುಬಂದಿದೆ.
ಮಾರ್ಚ್ 24ರ ರಾತ್ರಿ 10.30ರ ಸುಮಾರಿಗೆ ವಿಚಿಟಾದಿಂದ ಸುಮಾರು 100 ಮೈಲಿಗಳಷ್ಟು ಉತ್ತರಕ್ಕೆ ಗ್ರೇಟ್ ಬೆಂಡ್ ನಗರದಲ್ಲಿ ಈ ಘಟನೆ ನಡೆದಿದೆ. ಶಿಶುಪಾಲಕಿ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾಗ ಈ ಘಟನೆ ನಡೆದಿದೆ.
ಶಿಶುಪಾಲಕಿಯು ಅವನನ್ನು 27 ವರ್ಷದ ಮಾರ್ಟಿನ್ ವಿಲ್ಲಾಲೊಬೊಸ್ ಜೂನಿಯರ್ ಎಂದು ಗುರುತಿಸಿದರು. ಸ್ವಲ್ಪ ಸಮಯದ ಹಿಂದೆ ಆತ ಅದೇ ನಿವಾಸದಲ್ಲಿ ವಾಸಿಸುತ್ತಿದ್ದ ಆತನ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಲಾಗಿತ್ತು. ನಂತರ ಅಲ್ಲಿಗೆ ಬರದಂತೆ ನಿರ್ಬಂಧಿಸಲಾಗಿತ್ತು. ಅಂದು ಆ ಮನೆಗೆ ಬಂದಿದ್ದ ಮಾರ್ಟಿನ್ ಶಿಶುಪಾಲಕಿಯೊಂದಿಗೆ ಜಗಳವಾಡಿದ್ದ ಆ ಸಮಯದಲ್ಲಿ ಒಂದು ಮಗವಿಗೆ ಪೆಟ್ಟಾಗಿತ್ತು.
ಮತ್ತಷ್ಟು ಓದಿ: ಟ್ರಾಫಿಕ್ ಮಧ್ಯೆ ರೀಲ್ಸ್ ಮಾಡಿ ಜೈಲು ಸೇರಿದ ಪೊಲೀಸನ ಹೆಂಡತಿ
ಅಧಿಕಾರಿಗಳು ತಕ್ಷಣ ಆ ಪ್ರದೇಶವನ್ನು ಹುಡುಕಿದರು ಆದರೆ ವಿಲ್ಲಾಲೊಬೊಸ್ ಅವರನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಮರುದಿನ ಬೆಳಗ್ಗೆ, ಮತ್ತೆ ಅಧಿಕಾರಿಗಳು ಆ ಪ್ರದೇಶಕ್ಕೆ ಬಂದಾಗ ಆತ ಅಲ್ಲೇ ಓಡಾಡುತ್ತಿದ್ದ, ಓಡಿ ಆತನನ್ನು ಬಂಧಿಸಿದ್ದಾರೆ. ನಂತರ ಅವರನ್ನು ಬಾರ್ಟನ್ ಕೌಂಟಿ ಜೈಲಿಗೆ ವರ್ಗಾಯಿಸಲಾಯಿತು. ಬಳಿಕ ಅಪಹರಣ ಸೇರಿದಂತೆ ಅನೇಕ ಆರೋಪಗಳನ್ನು ಹೊರಿಸಲಾಯಿತು.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:14 am, Fri, 28 March 25