Viral: ಅಮಿತ್ ಶಾ ಹೃದಯ ಗೆದ್ದ ಪುಟ್ಟಕ್ಕ, 7 ವರ್ಷದ ಬಾಲಕಿಯ ಪ್ರತಿಭೆಗೆ ಭಾರೀ ಮೆಚ್ಚುಗೆ
ಮಿಜೋರಾಂನ 7 ವರ್ಷದ ಬಾಲಕಿ ಎಸ್ತರ್ ಲಾಲ್ದುಹವಾಮಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದ್ದಾಳೆ. ಆಕೆ ಹಾಡಿದ ಈ ಒಂದು ಹಾಡು ಇದೀಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಈ ವಿಡಿಯೋವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಮೆಚ್ಚಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಆ ಬಾಲಕಿಯ ಬಗ್ಗೆ ಅಮಿತ್ ಶಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜತೆಗೆ ಆಕೆಯನ್ನು ಭೇಟಿಯಾಗಿ ಗಿಫ್ಟ್ ಕೂಡ ನೀಡಿದ್ದಾರೆ. ಅಷ್ಟಕ್ಕೂ ಈ ಬಾಲಕಿ ಹಾಡಿದ ಹಾಡು ಯಾವುದು? ಈ ಬಗ್ಗೆ ಇಲ್ಲಿದೆ ವಿಡಿಯೋ.

ಬಿಜೆಪಿ ಚಾಣಕ್ಯ ಅಮಿತ್ ಶಾ ( Amit Shah) ಅಷ್ಟು ಬೇಗ ಯಾರಿಗೂ ಒಲಿಯುವುದಿಲ್ಲ. ಮತ್ತು ಒಪ್ಪಿಕೊಳ್ಳುವುದಿಲ್ಲ. ಅಂತ ಅಮಿತ್ ಶಾ ಅವರ ಮನಸ್ಸು ಗೆದ್ದಿದ್ದಾಳೆ ಈ ಪುಟ್ಟ ಬಾಲಕಿ. ಅಮಿತ್ ಶಾ ಶಿಸ್ತಿನ ಸಿಪಾಯಿ. ಅವರಿಗೆ ಅವರದೇ ಒಂದು ನಿಯಮ ಇರುತ್ತದೆ. ಅಮಿತ್ ಶಾ ನೋಡಲು ಮಾತ್ರ ಗಂಭೀರ, ಅವರ ವರ್ತನೆಯು ಆಗಿರಬಹುದು. ಆದರೆ ಅವರಲ್ಲೂ ಒಂದು ಮುಗ್ದ ಮನಸ್ಸು ಇದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ, ತಮ್ಮನ್ನು ಮೆಚ್ಚಿಸಿದ ಪುಟ್ಟ ಹುಡುಗಿಗೆ ಗಿಫ್ಟ್ ಕೂಡ ನೀಡಿದ್ದಾರೆ. ಅಷ್ಟಕ್ಕೂ ಈ ಬಾಲಕಿ ಅಮಿತ್ ಶಾ ಅವರನ್ನು ಮೆಚ್ಚಿಸಿದ್ದು ಹೇಗೆ? ಈ =ಬಗ್ಗೆ ಇಲ್ಲಿದೆ ನೋಡಿ ಮಾಹಿತಿ. ಮಿಜೋರಾಂನ 7 ವರ್ಷದ ಎಸ್ತರ್ ಲಾಲ್ದುಹವಾಮಿ ಎಂಬ ಬಾಲಕಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೃದಯ ಗೆದ್ದಿದ್ದಾಳೆ. ಈಕೆಯ ಪ್ರತಿಭೆಗೆ ಛೋಟು ಭಾಯಿ ಮೆಚ್ಚಿಕೊಂಡಿದ್ದಾರೆ. ಆಕೆಗೆ ಗಿಟಾರ್ ಉಡುಗೊರೆಯಾಗಿ ನೀಡುವ ಮೂಲಕ ಬಾಲಕಿಯ ಪ್ರತಿಭೆಗೆ ಗೌರವಿಸಿದ್ದಾರೆ.
ಅಮಿತ್ ಶಾ ಮಿಜೋರಾಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು, ಅಲ್ಲಿ 7 ವರ್ಷದ ಬಾಲಕಿ ವಂದೇ ಮಾತರಂ ಹಾಡನ್ನು ಹಾಡಿದ್ದಳು. ಅಲ್ಲಿದ್ದವರೆಲ್ಲರೂ ಆ ಹುಡುಗಿಯ ಗಾಯನಕ್ಕೆ ಮನಸೋತದ್ದು ನಿಜ. ಈ ಹುಡುಗಿಯ ಗಾಯ ಕೇಳಿ ಅಮಿತ್ ಶಾ ಭಾವುಕರಾಗಿದ್ದರು. ಅವರ ಧ್ವನಿಯಲ್ಲಿ ದೇಶಭಕ್ತಿಯ ಉನ್ಮಾದ ಕೇಳಿಬರುತ್ತಿತ್ತು. ಈ ಹಾಡಿನ ನಂತರ, ಅಮಿತ್ ಶಾ ಆ ಹುಡುಗಿಯನ್ನು ಹೊಗಲಿದ್ದಾರೆ. ಹಾಗೂ ಭೇಟಿಯಾಗಿದ್ದಾರೆ. ಜತೆಗೆ ಆಕೆಗೆ ಗಿಟಾರ್ ಉಡುಗೊರೆಯಾಗಿ ನೀಡಿದರು.
ಇದನ್ನೂ ಓದಿ: ಮೂಡಬಿದ್ರೆಯ ಪೇಪರ್ ರಾಜಣ್ಣ; 52 ವರ್ಷಗಳಿಂದ ದಿನ ಪ್ರತಿಕೆ, ಹಾಲು ಮಾರಿ ಸ್ವಾವಲಂಬಿ ಜೀವನ ಸಾಗಿಸುತ್ತಿರುವ ಬಡ ಜೀವ
ಅಮಿತ್ ಶಾ ಪೋಸ್ಟ್ ಇಲ್ಲಿದೆ ನೋಡಿ:
Love for Bharat unites us all.
Deeply moved to listen to Mizoram’s wonder kid Esther Lalduhawmi Hnamte, singing Vande Mataram in Aizawl today. The seven-year-old’s love for Bharat Mata poured out into her song, making listening to her a mesmerizing experience.
Gifted her a… pic.twitter.com/7CLOKjkQ9y
— Amit Shah (@AmitShah) March 15, 2025
ಇದೀಗ ಈ ಹುಡುಗಿಯ ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ. ಈ ಬಗ್ಗೆ ಅಮಿತ್ ಶಾ ಕೂಡ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವ್ಯಾಪಕವಾಗಿ ಈ ವಿಡಿಯೋ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಮಿತ್ ಶಾ ಅವರ ಈ ನಡೆಯನ್ನು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಗುವಿನ ಕಣ್ಣುಗಳಲ್ಲಿ ಹೊಳೆಯುತ್ತಿದ್ದ ಸಂತೋಷ. ಇಷ್ಟು ಚಿಕ್ಕ ವಯಸ್ಸಿನಲ್ಲಿ ದೇಶಭಕ್ತಿ ಮತ್ತು ಕಲೆಯ ಸಮ್ಮಿಲನವು ಪ್ರತಿ ಮಗುವಿಗೂ ಸ್ಪೂರ್ತಿದಾಯಕವಾಗಿದೆ ಎಂದು ಅಮಿತ್ ಶಾ ಹೇಳಿಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:06 pm, Fri, 28 March 25