ಮಾಡದ ಕೊಲೆಗೆ ಯಾರಿಗೋ ಜೈಲು ಶಿಕ್ಷೆ, ನಿಂದನೆ, 24 ವರ್ಷಗಳ ಬಳಿಕ ಮೃತ ವ್ಯಕ್ತಿ ಪ್ರತ್ಯಕ್ಷ

|

Updated on: Jun 07, 2024 | 10:22 AM

ವ್ಯಕ್ತಿಯೊಬ್ಬ ಮಾಡದ ಕೊಲೆಗೆ ಜೈಲು ಶಿಕ್ಷೆ ಅನುಭವಿಸಿ, ಜನರಿಂದ ನಿಂದನೆಗೆ ಒಳಗಾಗಿದ್ದಾರೆ, ಆದರೆ 24 ವರ್ಷಗಳ ಬಳಿಕ ಮೃತ ವ್ಯಕ್ತಿ ಪ್ರತ್ಯಕ್ಷನಾಗಿದ್ದಾನೆ.

ಮಾಡದ ಕೊಲೆಗೆ ಯಾರಿಗೋ ಜೈಲು ಶಿಕ್ಷೆ, ನಿಂದನೆ, 24 ವರ್ಷಗಳ ಬಳಿಕ ಮೃತ ವ್ಯಕ್ತಿ ಪ್ರತ್ಯಕ್ಷ
ಜೈಲು
Follow us on

ಒಂದೆಡೆ ಕೊಲೆ ಮಾಡದೆ ವ್ಯಕ್ತಿಯೊಬ್ಬ ಜೈಲು ಶಿಕ್ಷೆ ಅನುಭವಿಸಿದ್ದರೆ, ಮೃತಪಟ್ಟಿದ್ದಾನೆ ಎನ್ನಲಾದ ವ್ಯಕ್ತಿ 24 ವರ್ಷಗಳ ಬಳಿಕ ಪ್ರತ್ಯಕ್ಷನಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದು 2001ರ ಸೆಪ್ಟೆಂಬರ್ 28ರಂದು ನಡೆದ ಘಟನೆ. ಕುದಂಹಿ ಕೋಠಿ ಗ್ರಾಮದ ಸೇಮರಿಯಾ ನಿವಾಸಿ ಸಂತ್​ರಾಜ್ ಎಂಬಾತ ಮನೆಯ ಹೊರಗೆ ಮಲಗಿದ್ದವನು ಏಕಾಏಕಿ ನಾಪತ್ತೆಯಾಗಿದ್ದ, ಪತ್ತಿದಾರ್ ರಾಮನಾಗಿನಾ ಸೇರಿದಂತೆ ಐವರು ತನ್ನ ಪತಿಯನ್ನು ಅಪಹರಿಸಿದ್ದಾರೆ ಎಂದು ಸಂತ್​ರಾಜ್ ಪತ್ನಿ ಆರೋಪಿಸಿದ್ದರು.

ಅವರ ಮನೆಗೆ ನುಗ್ಗಿ ಎಲ್ಲವನ್ನು ಧ್ವಂಸ ಮಾಡಿದ್ದರು, ಭಾರಿ ಕೋಲಾಹಲ ಉಂಟಾಗಿತ್ತು, ಸಂತ್​ರಾಜ್ ಅನ್ನು ಅಪಹರಿಸಿ ನಾಲ್ಕು ದಿನಗಳ ನಂತರ ಗ್ರಾಮದ ಸಮೀಪದ ಚರಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿತ್ತು, ಅದು ಸಂತ್​ರಾಜ್​ನದ್ದೇ ದೇಹ ಎಂದು ಮನೆಯವರು ಭಾವಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು, ಮರಣೋತ್ತರ ಪರೀಕ್ಷೆಯಲ್ಲಿ ಅದು ಮಹಿಳೆಯ ದೇಹ ಎಂದು ತಿಳಿದುಬಂದಿದ್ದು, ಅಷ್ಟೊರೊಳಗೆ ಪೊಲೀಸರು ಪತ್ತಿದಾರ್​ನ್ನು ಬಂಧಿಸಿದ್ದರು.

ನಂತರ ಕೊಲೆಯ ಬದಲು ಅಪಹರಣ ಪ್ರಕರಣ ಮಾತ್ರ ದಾಖಲಾಗಿತ್ತು, ಈ ಪ್ರಕರಣದಲ್ಲಿ ಮಾರ್ಚ್ 27, 2003 ರಂದು ಆರೋಪಿ ರಾಮ್ ನಗೀನಾ ಮತ್ತು ಇತರರನ್ನು ಖುಲಾಸೆಗೊಳಿಸಲಾಯಿತು. ಆದರೂ ಪತ್ತಿದಾರ್​ನನ್ನು ಕೊಲೆಗಾರ ಎಂದೇ ಜನರು ಕರೆಯುತ್ತಿದ್ದರು.

ಮತ್ತಷ್ಟು ಓದಿ: ಆನ್​ಲೈನ್​ನಲ್ಲಿ ಅರಳಿದ ಪ್ರೀತಿ, ಪ್ರಿಯಕರನ ಅರಸಿ ಆಸ್ಟ್ರೇಲಿಯಾದಿಂದ ಅಮೇಜಾನ್​ ಕಾಡಿಗೆ ಹೋದ ಯುವತಿ

ಆದರೆ 29 ದಿನಗಳ ಹಿಂದೆ ಸಂತ್​ರಾಜ್​ ಏಕಾಏಕಿ ಪ್ರತ್ಯಕ್ಷನಾಗಿದ್ದು, ಗ್ರಾಮಸ್ಥರಲ್ಲಿ ಅಚ್ಚರಿಯುಂಟು ಮಾಡಿದೆ. ಸಂತ್​ರಾಜ್ ನೋಡುತ್ತಿದ್ದಂತೇ ಪತ್ತಿದಾರ್​ಗೆ ತಾನು ಕಳೆದುಕೊಂಡಿದ್ದ ಗೌರವ ಮರಳಿ ಸಿಕ್ಕಿರುವ ಖುಷಿ ಆಗಿತ್ತು. ಬಳಿಕ ಪತ್ತಿದಾರ್ ಸಂತ್​ರಾಜ್ ಫೋಟೊವನ್ನು ಕೈಯಲ್ಲಿ ಹಿಡಿದು ನಾನು ಕೊಲೆ ಮಾಡಿಲ್ಲ ನೋಡಿ ಸಂತ್​ರಾಜ್ ಇನ್ನೂ ಬದುಕೇ ಇದ್ದಾನೆ ಎಂದು ಹೇಳುತ್ತಾ ಊರೂರು ಸುತ್ತುತ್ತಿದ್ದಾರೆ.

ತಾನು ಕೊಲೆ ಮಾಡಿಲ್ಲ ಎಂದು ಹೇಳಿದ್ದರೂ ಯಾರೂ ಆತನ ಮಾತು ಕೇಳಿರಲಿಲ್ಲ, ಸುಮ್ಮನೆ 3 ವರ್ಷಗಳ ಕಾಲ ಜೈಲಿನಲ್ಲಿದ್ದುದಲ್ಲದೇ 24 ವರ್ಷಗಳಿಂದ ಕೊಲೆಗಾರನೆಂಬ ಹಣೆಪಟ್ಟಿಕಟ್ಟಿಕೊಂಡು ಬೇಸರದಲ್ಲೇ ಜೀವನ ಕಳೆಯುತ್ತಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ