Breaking: ಉತ್ತರಾಖಂಡದಲ್ಲಿ ಕಂದಕಕ್ಕೆ ಉರುಳಿದ ಬಸ್, 36 ಮಂದಿ ಸಾವು, ಕೇಂದ್ರದಿಂದ ಪರಿಹಾರ
ಬಸ್ ಕಂದಕಕ್ಕೆ ಉರುಳಿ ಹಲವು ಮಂದಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಪೌರಿ-ಅಲ್ಮೋರಾ ಗಡಿಯಲ್ಲಿರುವ ರಾಮನಗರದ ಉತ್ತರಾಖಂಡದ ಕುಪಿ ಬಳಿ ಸೋಮವಾರ ಗರ್ವಾಲ್ ಮೋಟಾರ್ಸ್ ಬಸ್ ಕಂದಕಕ್ಕೆ ಬಿದ್ದಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. TOI ಪ್ರಕಾರ, ಇದು 42 ಆಸನಗಳ ಬಸ್ ಆದರೆ ಅಪಘಾತದ ಸಮಯದಲ್ಲಿ 30 ಪ್ರಯಾಣಿಕರು ವಾಹನದಲ್ಲಿದ್ದರು.
ಬಸ್ ಕಂದಕಕ್ಕೆ ಉರುಳಿ ಹಲವು ಮಂದಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಪೌರಿ-ಅಲ್ಮೋರಾ ಗಡಿಯಲ್ಲಿರುವ ರಾಮನಗರದ ಉತ್ತರಾಖಂಡದ ಕುಪಿ ಬಳಿ ಸೋಮವಾರ ಗರ್ವಾಲ್ ಮೋಟಾರ್ಸ್ ಬಸ್ ಕಂದಕಕ್ಕೆ ಬಿದ್ದಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಇದು 42 ಆಸನಗಳ ಬಸ್ ಆದರೆ ಅಪಘಾತದ ಸಮಯದಲ್ಲಿ 30 ಕ್ಕೂ ಅಧಿಕ ಪ್ರಯಾಣಿಕರು ವಾಹನದಲ್ಲಿದ್ದರು.
VIDEO | A passenger bus fell into a gorge near Ramnagar, Uttarakhand early morning today. Several casualties feared. More details awaited.
(Full video available on PTI Videos – https://t.co/n147TvrpG7) pic.twitter.com/pS7Ct8NhWI
— Press Trust of India (@PTI_News) November 4, 2024
ಈ ಅಪಘಾತದಲ್ಲಿ 36 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಬಸ್ ಗರ್ವಾಲ್ ಮೋಟರ್ ಓನರ್ಸ್ ಯೂನಿಯನ್ ಲಿಮಿಟೆಡ್‌ಗೆ ಸೇರಿದೆ ಎಂದು ಹೇಳಲಾಗಿದೆ. ಬಸ್ ನೈನಿಕಂಡ ಬ್ಲಾಕ್‌ನ ಕಿನಾಥ್‌ನಿಂದ ರಾಮನಗರಕ್ಕೆ ಹೋಗುತ್ತಿತ್ತು. ಕೆಲವರು ಬಸ್‌ನಿಂದ ಕೆಳಗೆ ಬಿದ್ದ ತಕ್ಷಣ ದಾರಿಯಲ್ಲಿ ಹೋಗುತ್ತಿದ್ದವರನ್ನು ಸಹಾಯಕ್ಕಾಗಿ ಕರೆದಿದ್ದಾರೆ. ಇದಾದ ನಂತರ ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡವೂ ಸ್ಥಳಕ್ಕೆ ತೆರಳಿದೆ. ಅಲ್ಮೋರಾ ಎಸ್ಪಿ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಬಸ್ಸಿನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಇದಲ್ಲದೇ ನೈನಿತಾಲ್‌ನಿಂದ ಕೆಲವು ಪೊಲೀಸ್ ಪಡೆಗಳು ಕೂಡ ಸ್ಥಳಕ್ಕೆ ತೆರಳಿವೆ.
ಕೇಂದ್ರ ಸರ್ಕಾರವು ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದೆ. ಗಾಯಗೊಂಡವರಿಗೆ ತಲಾ 50 ಸಾವಿರ ರೂ. ನೀಡುವುದಾಗಿ ಹೇಳಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:35 am, Mon, 4 November 24