AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುರಂಗದಿಂದ ಬದುಕಿ ಬಂದವರು ಆಸ್ಪತ್ರೆಯಿಂದ ಡಿಸ್ಚಾರ್ಜ್; ಏಮ್ಸ್​ನಿಂದ ತಮ್ಮೂರಿನತ್ತ ಹೊರಟ ಕಾರ್ಮಿಕರು

ಆಸ್ಪತ್ರೆಗೆ ದಾಖಲಾಗಿದ್ದ 41ಕಾರ್ಮಿಕರ ಪೈಕಿ 40 ಕಾರ್ಮಿಕರನ್ನು ಡಿಸ್ಚಾರ್ಜ್ ಮಾಡಲಾಗಿದೆ‌. ರಿಷಿಕೇಶ್ ಏಮ್ಸ್ ಆಡಳಿತ ಮಂಡಳಿ 41 ಕಾರ್ಮಿಕರ ಪೈಕಿ 40 ಮಂದಿಗೆ ಕ್ಲಿಯರೆನ್ಸ್ ನೀಡಿ ಬಿಡುಗಡೆ ಮಾಡಿದೆ.

ಸುರಂಗದಿಂದ ಬದುಕಿ ಬಂದವರು ಆಸ್ಪತ್ರೆಯಿಂದ ಡಿಸ್ಚಾರ್ಜ್; ಏಮ್ಸ್​ನಿಂದ ತಮ್ಮೂರಿನತ್ತ ಹೊರಟ ಕಾರ್ಮಿಕರು
ಉತ್ತರಕಾಶಿ
Follow us
ಹರೀಶ್ ಜಿ.ಆರ್​. ನವದೆಹಲಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 30, 2023 | 10:12 PM

ದೆಹಲಿ, ನವೆಂಬರ್ 30: ಉತ್ತರಾಖಂಡ (Uttarakhand) ರಾಜ್ಯದ ಉತ್ತರಕಾಶಿಯಲ್ಲಿ(Uttarkashi tunnel collapse) 16 ದಿನಗಳ ಕಾಲ ಕುಸಿದ ಸುರಂಗದೊಳಗೆ ಸಿಲುಕಿ, ಪವಾಡವೆಂಬಂತೆ ಸುರಂಗದಿಂದ ಸಾವನ್ನೇ ಗೆದ್ದು ಬಂದ ಕಾರ್ಮಿಕರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ‌. ಆಸ್ಪತ್ರೆಗೆ ದಾಖಲಾಗಿದ್ದ 41ಕಾರ್ಮಿಕರ ಪೈಕಿ 40 ಕಾರ್ಮಿಕರನ್ನು ಡಿಸ್ಚಾರ್ಜ್ ಮಾಡಲಾಗಿದೆ‌. ರಿಷಿಕೇಶ್ ಏಮ್ಸ್ ಆಡಳಿತ ಮಂಡಳಿ 41 ಕಾರ್ಮಿಕರ ಪೈಕಿ 40 ಮಂದಿಗೆ ಕ್ಲಿಯರೆನ್ಸ್ ನೀಡಿ ಬಿಡುಗಡೆ ಮಾಡಿದೆ.

ಆಸ್ಪತ್ರೆಗೆ ದಾಖಲಾಗಿದ್ದ ಕಾರ್ಮಿಕರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಯಾವುದೇ ಕಾರ್ಮಿಕರಲ್ಲಿ ಗಾಯ ಕಂಡುಬಂದಿಲ್ಲ. ಇದಲ್ಲದೇ ಎಲ್ಲ ಕಾರ್ಮಿಕರನ್ನು ತೀವ್ರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಏಮ್ಸ್ ವೈದ್ಯಕೀಯ ಅಧೀಕ್ಷಕ ರಿಷಿಕೇಶ್, ಪ್ರೊ. ಆರ್.ಬಿ.ಕಾಲಿಯಾ ಹೇಳಿದ್ದಾರೆ. ಇನ್ನು ಕಾರ್ಮಿಕರ ರಕ್ತ, ಕಿಡ್ನಿ, ಇಸಿಜಿ, ಎಬಿಜಿ, ಲಿವರ್ ಫಂಕ್ಷನ್ ಟೆಸ್ಟ್, ಎಕ್ಸ್ ರೇ, ಎಕೋಕಾರ್ಡಿಯೋಗ್ರಫಿ, ಎಬಿಜಿ ಪರೀಕ್ಷೆಗಳನ್ನು ಮಾಡಲಾಗಿದೆ. ಎಲ್ಲಾ ಕಾರ್ಮಿಕರು ದೈಹಿಕವಾಗಿ ಆರೋಗ್ಯಕರವಾಗಿದ್ದಾರೆ. ಕಾರ್ಮಿಕರಿಗೆ ತಮ್ಮ ಊರುಗಳಿಗೆ ತೆರಳಲು ಏಮ್ಸ್ ಅನುಮತಿ ನೀಡಿದೆ.

ಇದನ್ನೂ ಓದಿ:ಉತ್ತರಕಾಶಿ ಸುರಂಗ ಮಾರ್ಗದಲ್ಲಿ 17-ದಿನ ಸಿಲುಕಿ ಸಾವು ಗೆದ್ದು ಬಂದ ಕಾರ್ಮಿಕರೊಂದಿಗೆ ಮಾತಾಡಿ ಅಭಿನಂದಿಸಿದ ಪ್ರಧಾನಿ ಮೋದಿ

7 ರಾಜ್ಯಗಳ 41 ಕಾರ್ಮಿಕರನ್ನು ಆರೋಗ್ಯ ತಪಾಸಣೆಗಾಗಿ ಏಮ್ಸ್‌ಗೆ ಕರೆತರಲಾಗಿತ್ತು. ಇದರಲ್ಲಿ ಜಾರ್ಖಂಡ್‌ನ 15, ಉತ್ತರ ಪ್ರದೇಶದಿಂದ 8, ಬಿಹಾರ ಮತ್ತು ಒರಿಸ್ಸಾದಿಂದ ತಲಾ 5, ಪಶ್ಚಿಮ ಬಂಗಾಳದಿಂದ 3, ಉತ್ತರಾಖಂಡ ಮತ್ತು ಅಸ್ಸಾಂನಿಂದ ತಲಾ 2 ಮತ್ತು ಹಿಮಾಚಲ ಪ್ರದೇಶದ ಒಬ್ಬರಾಗಿದ್ದಾರೆ. ಒಬ್ಬ ಕಾರ್ಮಿಕನನ್ನು ಹೊರತುಪಡಿಸಿ ಉಳಿದ 40 ಕಾರ್ಮಿಕರನ್ನು ವೈದ್ಯಕೀಯ ಅನುಮತಿ ಪಡೆದು ಬಿಡುಗಡೆ ಮಾಡಲಾಗಿದೆ. ಮತ್ತೊರ್ವ ಕಾರ್ಮಿಕನಿಗೆ ಮತ್ತೊಮ್ಮೆ ಟೆಸ್ಟ್ ಮಾಡಿದ ಬಳಿಕ ಬಿಡುಗಡೆ ಮಾಡಲು ಏಮ್ಸ್ ವೈದ್ಯರು ನಿರ್ಧಾರ ಮಾಡಿದ್ದಾರೆ.

ಯಾವುದೇ ಕಾರ್ಮಿಕರಿಗೆ ಗಂಭೀರ ಅಥವಾ ಆತಂಕಕಾರಿ ಸಮಸ್ಯೆ ಇಲ್ಲ. ಆದರೂ ಈ ಘಟನೆ ಭವಿಷ್ಯದಲ್ಲಿ ಕಾರ್ಮಿಕರಲ್ಲಿ ಮಾನಸಿಕ ಬದಲಾವಣೆಗಳನ್ನು ಉಂಟುಮಾಡುವ ಸಾಧ್ಯತೆ ಇದೆ. ಹೀಗಾಗಿ ಕಾರ್ಮಿಕರು ಎರಡು ವಾರಗಳ ನಂತರ ಅಥವಾ ಅಗತ್ಯವಿದ್ದರೆ ತಮ್ಮ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ವೈದ್ಯರನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಆರೋಗ್ಯ ತಪಾಸಣೆ ಮುಗಿಸಿ 20 ಕಾರ್ಮಿಕರು ಈಗಾಗಲೇ ತಮ್ಮ ರಾಜ್ಯ ತಲುಪಿದ್ದಾರೆ‌. ಎರಡು ಬಸ್‌ಗಳಲ್ಲಿ 20 ಕಾರ್ಮಿಕರನ್ನು ಜಾಲಿ ಗ್ರಾಂಟ್ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗಿದೆ‌. ಅಲ್ಲಿಂದ ಈ ಎಲ್ಲ ಕಾರ್ಮಿಕರು ವಿಮಾನದ ಮೂಲಕ ತಮ್ಮ ಮನೆಗಳಿಗೆ ಮರಳಿದ್ದಾರೆ‌. ಮೊದಲ ಬ್ಯಾಚ್ ನಲ್ಲಿ ಜಾರ್ಖಂಡ್‌ನ 15 ಕಾರ್ಮಿಕರು ಮತ್ತು ಒರಿಸ್ಸಾದ 5 ಕಾರ್ಮಿಕರು ಇದ್ದು, ಆಯಾ ರಾಜ್ಯಗಳ ರಾಜ್ಯದ ಅಧಿಕಾರಿಗಳು ಕಾರ್ಮಿಕರನ್ನು ಸ್ವಾಗತಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ