Senthil Balaji: ಸೆಂಥಿಲ್ ಬಾಲಾಜಿ ವಜಾಕ್ಕೆ ತಡೆ, ಗದ್ದಲದ ಬಳಿಕ ನಿರ್ಧಾರ ಹಿಂಪಡೆದ ರಾಜ್ಯಪಾಲರು

ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ(V Senthil Balaji) ಅವರನ್ನು ಸಚಿವ ಸಂಪುಟ(Cabinet)ದಿಂದ ವಜಾಗೊಳಿಸುವ ಆದೇಶವನ್ನು ರಾಜ್ಯಪಾಲ ಆರ್ ಎನ್ ರವಿ ತಡೆಹಿಡಿದಿದ್ದಾರೆ ಎಂದು ತಮಿಳುನಾಡು ರಾಜಭವನದ ಮೂಲಗಳು ನ್ಯೂಸ್ 9 ಗೆ ತಿಳಿಸಿವೆ.

Senthil Balaji: ಸೆಂಥಿಲ್ ಬಾಲಾಜಿ ವಜಾಕ್ಕೆ ತಡೆ, ಗದ್ದಲದ ಬಳಿಕ ನಿರ್ಧಾರ ಹಿಂಪಡೆದ ರಾಜ್ಯಪಾಲರು
ಸೆಂಥಿಲ್ ಬಾಲಾಜಿImage Credit source: Zee news
Follow us
ನಯನಾ ರಾಜೀವ್
|

Updated on:Jun 30, 2023 | 10:06 AM

ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ( V Senthil Balaji) ಅವರನ್ನು ಸಚಿವ ಸಂಪುಟ(Cabinet)ದಿಂದ ವಜಾಗೊಳಿಸುವ ಆದೇಶವನ್ನು ರಾಜ್ಯಪಾಲ ಆರ್ ಎನ್ ರವಿ(RN Ravi) ತಡೆಹಿಡಿದಿದ್ದಾರೆ ಎಂದು ತಮಿಳುನಾಡು ರಾಜಭವನದ ಮೂಲಗಳು ನ್ಯೂಸ್ 9 ಗೆ ತಿಳಿಸಿವೆ. ಸೆಂಥಿಲ್ ಬಾಲಾಜಿ ವಿಚಾರವಾಗಿ ತಮಿಳುನಾಡು ರಾಜ್ಯಪಾಲ ರವಿ ಅಟಾರ್ನಿ ಜನರಲ್‌ನಿಂದ ಕಾನೂನು ಅಭಿಪ್ರಾಯ ಪಡೆಯಲು ನಿರ್ಧರಿಸಿದ್ದಾರೆ. ಕಾನೂನು ಅಭಿಪ್ರಾಯ ಬರುವವರೆಗೆ ರಾಜಭವನದ ಹಿಂದಿನ ಆದೇಶವನ್ನು ಅಮಾನತುಗೊಳಿಸಲಾಗಿದೆ ಎಂದು ರಾಜಭವನದ ಮೂಲಗಳು ತಿಳಿಸಿವೆ. ಇದರರ್ಥ ಬಾಲಾಜಿ ಸದ್ಯಕ್ಕೆ ಸಚಿವ ಸಂಪುಟದಲ್ಲಿ ಮುಂದುವರಿಯಲಿದ್ದಾರೆ.

ಈ ವಿಚಾರದಲ್ಲಿ ಗೃಹ ಸಚಿವರ ಮಧ್ಯಪ್ರವೇಶದ ಬಳಿಕ ರಾಜ್ಯಪಾಲರು ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾರೆ ಎನ್ನಲಾಗುತ್ತಿದೆ. ಸೆಂಥಿಲ್ ವಿಚಾರದಲ್ಲಿ ತಮ್ಮ ನಿರ್ಧಾರದ ಕುರಿತು ರಾಜ್ಯಪಾಲರಾದ ಆರ್​ಎನ್​ ರವಿ ಮುಖ್ಯಮಂತ್ರಿ ಸ್ಟಾಲಿನ್​ ಅವರಿಗೆ ಪತ್ರವನ್ನೂ ಕಳುಹಿಸಿದ್ದಾರೆ.

ಮತ್ತಷ್ಟು ಓದಿ: ರಾಜ್ಯಪಾಲರಿಂದ ಏಕಪಕ್ಷೀಯ ನಿರ್ಧಾರ: ಜೈಲಿನಲ್ಲಿರುವ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಸಚಿವ ಸಂಪುಟದಿಂದ ವಜಾ

ಅಟಾರ್ನಿ ಜನರಲ್ ಅವರಿಂದ ಕಾನೂನು ಅಭಿಪ್ರಾಯ ಪಡೆದು ನಂತರವಷ್ಟೇ ಅವರನ್ನು ವಜಾ ಮಾಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸಬೇಕು ಎಂದು ಗೃಹ ಸಚಿವರು ರಾಜ್ಯಪಾಲರಿಗೆ ಸಲಹೆ ನೀಡಿದ್ದರು. ಗುರುವಾರ ಸಂಜೆ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ಸಚಿವ ಸೆಂಥಿಲ್ ಬಾಲಾಜಿ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಿದ್ದರು.

ಕೇಂದ್ರ ಸಚಿವ ಸಂಪುಟದಲ್ಲಿ ಸೆಂಥಿಲ್ ಬಾಲಾಜಿ ಅವರ ಮುಂದುವರಿಕೆ ಕಾನೂನಿನ ಪ್ರಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಆತಂಕವಿರುವುದಾಗಿ ರಾಜಭವನದ ಪತ್ರದಲ್ಲಿ ತಿಳಿಸಲಾಗಿತ್ತು.

ರವಿ ಅವರ ಆದೇಶಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಸಚಿವರನ್ನು ವಜಾ ಮಾಡುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ, ನಾವು ಅದನ್ನು ಕಾನೂನುಬದ್ಧವಾಗಿ ಎದುರಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು.

ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಂಧಿಸಲಾಗಿತ್ತು ವಿದ್ಯುತ್ ಮತ್ತು ಅಬಕಾರಿ ಸಚಿವ ವಿ ಸೆಂಥಿಲ್ ಬಾಲಾಜಿಯನ್ನು ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಂಧಿಸಲಾಗಿತ್ತು. ಅವರ ಆಪ್ತರ ಮನೆ ಮೇಲೆ ಜಾರಿ ನಿರ್ದೇಶನಾಲಯ ಜೂ.13 ರಂದು ಅಧಿಕಾರಿಗಳು ದಾಳಿ ಮಾಡಿದ್ದರು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜೂ.14 ರ ಬೆಳಗ್ಗೆ ಸೆಂಥಿಲ್ ಅವರನ್ನು ಬಂಧಿಸಿ, ವೈದ್ಯಕೀಯ ತಪಾಸಣೆಗಾಗಿ ಓಮಂಡೂರರ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:05 am, Fri, 30 June 23