Gyanvapi Row ಜ್ಞಾನವಾಪಿ ಮಸೀದಿ ಪ್ರಕರಣ: ನಾಳೆ ವಾರಾಣಸಿಯ ಜಿಲ್ಲಾ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ

| Updated By: ರಶ್ಮಿ ಕಲ್ಲಕಟ್ಟ

Updated on: May 22, 2022 | 8:08 PM

ಜ್ಞಾನವಾಪಿ ಮಸೀದಿಯ ಪಶ್ಚಿಮ ಗೋಡೆಯ ಹಿಂಭಾಗದಲ್ಲಿರುವ ಶೃಂಗಾರ್ ಗೌರಿ, ಗಣೇಶ, ಹನುಮಾನ್ ಮತ್ತು ನಂದಿ ದೇವರ ದೈನಂದಿನ ಪೂಜೆ ಮತ್ತು ಆಚರಣೆಗಳಿಗೆ ಅನುಮತಿ ಕೋರಿ ಸಲ್ಲಿಸಿದ ಅರ್ಜಿಯೊಂದಿಗೆ ಪ್ರಸ್ತುತ ಕಾನೂನು ಹೋರಾಟ ಪ್ರಾರಂಭವಾಯಿತು.

Gyanvapi Row ಜ್ಞಾನವಾಪಿ ಮಸೀದಿ ಪ್ರಕರಣ: ನಾಳೆ ವಾರಾಣಸಿಯ ಜಿಲ್ಲಾ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ
ಜ್ಞಾನವಾಪಿ ಮಸೀದಿ
Image Credit source: PTI
Follow us on

ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ನಾಳೆ ( ಸೋಮವಾರ) ಶೃಂಗಾರ್ ಗೌರಿ-ಜ್ಞಾನವಾಪಿ ಮಸೀದಿ (Gyanvapi mosque) ಮೊಕದ್ದಮೆಯ ವಿಚಾರಣೆ ನಡೆಸಲಿದ್ದಾರೆ. ಸುಪ್ರೀಂಕೋರ್ಟ್‌ನ (Supreme Court) ಆದೇಶದ ಮೇರೆಗೆ ಮೇ 21 ರಂದು ಸಿವಿಲ್ ನ್ಯಾಯಾಧೀಶರಿಂದ (ಹಿರಿಯ ವಿಭಾಗ) ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಮೊಕದ್ದಮೆಯನ್ನು ವರ್ಗಾಯಿಸಲಾಗಿತ್ತು. ಈ ದಿನಾಂಕದ ವಿಚಾರಣೆಯ ಸಂದರ್ಭದಲ್ಲಿ, ಜ್ಞಾನವಾಪಿ ಮಸೀದಿ ಪ್ರಕರಣದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಅನುಭವಿ ನ್ಯಾಯಾಧೀಶರು ನಿಭಾಯಿಸಬೇಕು ಎಂದು ಸುಪ್ರೀಂಕೋರ್ಟ್ ಗಮನಿಸಿತು. ಸಿವಿಲ್ ನ್ಯಾಯಾಧೀಶರ ಮೇಲೆ ಯಾವುದೇ ಆಕ್ಷೇಪಣೆಗಳನ್ನು ನೀಡಲಾಗಿಲ್ಲ ಎಂದು ಭರವಸೆ ನೀಡಿದ ಸುಪ್ರೀಂಕೋರ್ಟ್ ಎರಡೂ ಪಕ್ಷಗಳು ಹೆಚ್ಚು ಪ್ರಯೋಜನ ಪಡೆಯುತ್ತವೆ ಎಂದು ಹೇಳಿದರು. ಗುರುವಾರ ವಿಚಾರಣಾ ನ್ಯಾಯಾಲಯದ ಮುಂದೆ ಎರಡೂ ಕಡೆಯವರು ತಮ್ಮ “ಆಕ್ಷೇಪಣೆಗಳು ಮತ್ತು ಪ್ರತಿ-ಆಕ್ಷೇಪಣೆಗಳನ್ನು” ಸಲ್ಲಿಸಿದರು ಎಂದು ಮಸೀದಿ ಆಡಳಿತ ಸಮಿತಿಯ ವಕೀಲರು ಹೇಳಿದ್ದಾರೆ. “ಇದು ಸಂಕೀರ್ಣ ಮತ್ತು ಸೂಕ್ಷ್ಮ ವಿಷಯವಾಗಿದೆ. ಮೊಕದ್ದಮೆಯನ್ನು ವಿಚಾರಣಾ ನ್ಯಾಯಾಧೀಶರ ಬದಲಿಗೆ ಜಿಲ್ಲಾ ನ್ಯಾಯಾಧೀಶರು ವಿಚಾರಣೆ ಮಾಡಬೇಕು ಎಂದು ನಾವು ಭಾವಿಸುತ್ತೇವೆ. ಏಕೆಂದರೆ ಹೆಚ್ಚು ಅನುಭವಿಗಳು ಅದನ್ನು ಆಲಿಸಿದರೆ ಉತ್ತಮ” ಎಂದು ನ್ಯಾಯಾಲಯ ಗುರುವಾರ ಹೇಳಿತ್ತು.

ಶೃಂಗಾರ್ ಗೌರಿ-ಜ್ಞಾನವಾಪಿ ಮಸೀದಿ ಮೊಕದ್ದಮೆಗೆ ತಡೆ ನೀಡಲು ಸುಪ್ರೀಂ ನಿರಾಕರಣೆ

ಜ್ಞಾನವಾಪಿ ಮಸೀದಿಯ ಪಶ್ಚಿಮ ಗೋಡೆಯ ಹಿಂಭಾಗದಲ್ಲಿರುವ ಶೃಂಗಾರ್ ಗೌರಿ, ಗಣೇಶ, ಹನುಮಾನ್ ಮತ್ತು ನಂದಿ ದೇವರ ದೈನಂದಿನ ಪೂಜೆ ಮತ್ತು ಆಚರಣೆಗಳಿಗೆ ಅನುಮತಿ ಕೋರಿ ಸಲ್ಲಿಸಿದ ಅರ್ಜಿಯೊಂದಿಗೆ ಪ್ರಸ್ತುತ ಕಾನೂನು ಹೋರಾಟ ಪ್ರಾರಂಭವಾಯಿತು. ಅನಾದಿ ಕಾಲದಿಂದಲೂ ಶೃಂಗಾರ್ ಗೌರಿ ದೇವಿಯು ಸ್ಥಳದಲ್ಲಿ ನೆಲೆಸಿದ್ದಾಳೆ ಎಂದು ಅರ್ಜಿದಾರರು ವಾದಿಸಿದ್ದು, ಅದನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯವನ್ನು ಒತ್ತಾಯಿಸಿದರು.

ಇದನ್ನೂ ಓದಿ
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಬಗ್ಗೆ ಆಕ್ಷೇಪಾರ್ಹ ಪೋಸ್ಟ್; ಹಿಂದೂ ಕಾಲೇಜಿನ ಪ್ರೊಫೆಸರ್ ಬಂಧನ
Gyanvapi Mosque Case ಜ್ಞಾನವಾಪಿ ಮಸೀದಿ ಪ್ರಕರಣ: ವಾರಣಾಸಿ ಜಿಲ್ಲಾ ನ್ಯಾಯಾಧೀಶರಿಗೆ ಪ್ರಕರಣವನ್ನು ವರ್ಗಾಯಿಸಲು ಸುಪ್ರೀಂಕೋರ್ಟ್ ಆದೇಶ
Gyanvapi mosque case ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಮಾತ್ರವಲ್ಲ ತ್ರಿಶೂಲ, ಡಮರು, ಶಿಲ್ಪಗಳೂ ಸಿಕ್ಕಿವೆ ಎಂದ ಸಮೀಕ್ಷೆ ವರದಿ
Gyanvapi Mosque row ಜ್ಞಾನವಾಪಿ ಮಸೀದಿ ಪ್ರಕರಣ: ವಾರಣಾಸಿ ನ್ಯಾಯಾಲಯಕ್ಕೆ ವಿಡಿಯೊ ಚಿತ್ರೀಕರಣದ ವರದಿ ಸಲ್ಲಿಕೆ, ವಿಚಾರಣೆ ನಾಳೆಗೆ ಮುಂದೂಡಿದ ಸುಪ್ರೀಂಕೋರ್ಟ್

ಏಪ್ರಿಲ್ 26 ರಂದು ವಾರಣಾಸಿಯ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ರವಿಕುಮಾರ್ ದಿವಾಕರ್ ಅವರು ಅರ್ಜಿದಾರರ ವಾದದ ಮೇರೆಗೆ ವಿಡಿಯೊಗ್ರಫಿ ಸಮೀಕ್ಷೆಗೆ ಆದೇಶಿಸಿದರು. ನ್ಯಾಯಾಲಯದ ಕಮಿಷನರ್ ಅಜಯ್ ಕುಮಾರ್ ಮಿಶ್ರಾ ನೇತೃತ್ವದ ತಂಡವು ಮೇ 6 ರಂದು ಮಸೀದಿಯ ಹೊರಗಿನ ಕೆಲವು ಪ್ರದೇಶಗಳಲ್ಲಿ ಭಾಗಶಃ ಸಮೀಕ್ಷೆ ನಡೆಸಿದರೆ, ನ್ಯಾಯಾಲಯದ ಆದೇಶದ ವ್ಯಾಖ್ಯಾನದ ವಿವಾದದ ಕಾರಣ ಮರುದಿನ ಮಸೀದಿ ಸಂಕೀರ್ಣಕ್ಕೆ ಪ್ರವೇಶಿಸದಂತೆ ತಡೆಯಲಾಯಿತು. ಅಂತಿಮವಾಗಿ, ನ್ಯಾಯಾಲಯವು ಮಸೀದಿ ಆವರಣದ ವಿಡಿಯೊಗ್ರಫಿ ಸಮೀಕ್ಷೆಗೆ ಅನುಮತಿ ನೀಡಿತು, ಅದು ಮೇ 16 ರಂದು ಪೂರ್ಣಗೊಂಡಿತು. ವರದಿಯ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ ಆರೋಪದಲ್ಲಿ ಅಡ್ವೊಕೇಟ್ ಕಮಿಷನರ್ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಲಾಯಿತು.

ಈ ಆದೇಶದಿಂದ ತೃಪ್ತರಾಗದ ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಸಮಿತಿಯು ಕಾಶಿ ವಿಶ್ವನಾಥ ದೇಗುಲ-ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆಗೆ ತಡೆ ನೀಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ