Arjun Singh ತೃಣಮೂಲ ಕಾಂಗ್ರೆಸ್‌ಗೆ ಮರಳಿದ ಬಿಜೆಪಿ ಸಂಸದ ಅರ್ಜುನ್ ಸಿಂಗ್
ಬಿಜೆಪಿ ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಿಗೆ ಸೀಮಿತವಾಗಿದೆ. ಫೇಸ್ಬುಕ್ನಲ್ಲಿ ಮಾತ್ರ ರಾಜಕೀಯ ಮಾಡಲು ಸಾಧ್ಯವಿಲ್ಲ. ಬಂಗಾಳದಲ್ಲಿ ನೆಲದ ಮೇಲೆ ಕೆಲಸ ಮಾಡುವುದು ಮುಖ್ಯ...
ಕೇಂದ್ರ ಸರ್ಕಾರದ ಸೆಣಬಿನ ನೀತಿಯ ಬಗ್ಗೆ ಟೀಕಿಸಿದ ಮತ್ತು ಬಂಗಾಳದಲ್ಲಿ ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಕೆಲವು ದಿನಗಳ ನಂತರ, ಬರಾಕ್‌ಪುರದ ಬಿಜೆಪಿ (BJP) ಸಂಸದ ಅರ್ಜುನ್ ಸಿಂಗ್ (Arjun Singh) ಭಾನುವಾರ ತೃಣಮೂಲ ಕಾಂಗ್ರೆಸ್‌ಗೆ (TMC) ಮರಳಿದ್ದಾರೆ.ಕೋಲ್ಕತ್ತಾದ ಕ್ಯಾಮಾಕ್ ಸ್ಟ್ರೀಟ್ ಕಚೇರಿಯಲ್ಲಿ ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಸಿಂಗ್ ಅವರು ಪಕ್ಷಕ್ಕೆ ಸೇರ್ಪಡೆಗೊಂಡರು. ಟಿಎಂಸಿಗೆ ಸೇರ್ಪಡೆಯಾದ ನಂತರ ಮಾತನಾಡಿದ ಸಿಂಗ್ “ಬಂಗಾಳದ ಅಭಿವೃದ್ಧಿಯಲ್ಲಿ ತೃಣಮೂಲ ಕಾಂಗ್ರೆಸ್ ಕೆಲಸ ಮಾಡುತ್ತಿರುವ ರೀತಿ ಶ್ಲಾಘನೀಯ. ನಾನು ಸೆಣಬಿನ ಮಿಲ್ ಪ್ರದೇಶದವನಾಗಿದ್ದು, ಕೇಂದ್ರದ ಅನ್ಯಾಯದ ನೀತಿಗಳಿಂದ ಅಲ್ಲಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಜೆಪಿ ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಿಗೆ ಸೀಮಿತವಾಗಿದೆ. ಫೇಸ್ಬುಕ್ನಲ್ಲಿ ಮಾತ್ರ ರಾಜಕೀಯ ಮಾಡಲು ಸಾಧ್ಯವಿಲ್ಲ. ಬಂಗಾಳದಲ್ಲಿ ನೆಲದ ಮೇಲೆ ಕೆಲಸ ಮಾಡುವುದು ಮುಖ್ಯ ಮತ್ತು ಅವರ ನಾಯಕರು ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತಿರುವುದರಿಂದ ಬಿಜೆಪಿಯು ಅದನ್ನು ಕಳೆದುಕೊಳ್ಳುತ್ತಿದೆ ಎಂದಿದ್ದಾರೆ. ಸಿಂಗ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಅಭಿಷೇಕ್ ಬ್ಯಾನರ್ಜಿ ಬಿಜೆಪಿಯಲ್ಲಿ ವಿಭಜಕ ಶಕ್ತಿಗಳನ್ನು ತಿರಸ್ಕರಿಸಿದ ಮತ್ತು ಇಂದು ಟಿಎಂಸಿ ಕುಟುಂಬಕ್ಕೆ ಸೇರ್ಪಡೆಗೊಂಡ ಅರ್ಜುನ್ ಸಿಂಗ್ ಅವರಿಗೆ ಆತ್ಮೀಯ ಸ್ವಾಗತವನ್ನು ನೀಡುತ್ತಿದ್ದೇವೆ. ರಾಷ್ಟ್ರದಾದ್ಯಂತ ಜನರು ಬಳಲುತ್ತಿದ್ದಾರೆ ಮತ್ತು ಅವರಿಗೆ ಹಿಂದೆಂದಿಗಿಂತಲೂ ಈಗ ನಮ್ಮ ಅವಶ್ಯಕತೆಯಿದೆ. ಹೋರಾಟವನ್ನು ಜೀವಂತವಾಗಿಡೋಣ ಎಂದು ಟ್ವೀಟ್ ಮಾಡಿದ್ದಾರೆ.
ಅರ್ಜುನ್ ಸಿಂಗ್ ಇಂದು ಮಧ್ಯಾಹ್ನ ತಮ್ಮ ಭಾಟ್ಪಾರಾ ನಿವಾಸದಿಂದ ಹೊರಟು ಅಲಿಪುರದ ಪಂಚತಾರಾ ಹೋಟೆಲ್‌ಗೆ ತಲುಪಿದ್ದಾರೆ. ಅದೇ ಸಮಯದಲ್ಲಿ, ಟಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ತಮ್ಮ ಕ್ಯಾಮಾಕ್ ಸ್ಟ್ರೀಟ್ ಕಚೇರಿಯಲ್ಲಿ ಬ್ಯಾರಕ್‌ಪೋರ್ ಮತ್ತು ಉತ್ತರ 24 ಪರಗಣಗಳ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದರು. ಸಿಂಗ್ ಅವರನ್ನು ಮತ್ತೆ ಪಕ್ಷಕ್ಕೆ ತೆಗೆದುಕೊಳ್ಳಬೇಕೇ ಎಂಬ ಬಗ್ಗೆ ನಾಯಕರು ಸುದೀರ್ಘ ಚರ್ಚೆ ನಡೆಸಿದರು ಎಂದು ಸಭೆಯ ಗೌಪ್ಯ ಮೂಲಗಳು ತಿಳಿಸಿವೆ. ಸಭೆಯಲ್ಲಿ ಬರಾಕ್‌ಪುರ ಶಾಸಕ ರಾಜ್ ಚಕ್ರವರ್ತಿ, ಜ್ಯೋತಿ ಪ್ರಿಯಾ ಮುಲ್ಲಿಕ್ ಮತ್ತು ಶಾಸಕ ಪಾರ್ಥ ಭೌಮಿಕ್ ಉಪಸ್ಥಿತರಿದ್ದರು.
Extending a warm welcome to Shri @ArjunsinghWB, who rejected the divisive forces at @BJP4India and joined the @AITCofficial family today.
People across the nation are suffering and they need us now more than ever. Let’s keep the fight alive! pic.twitter.com/N6s5FggBtx
— Abhishek Banerjee (@abhishekaitc) May 22, 2022
“ಕೌಂಟ್‌ಡೌನ್ ಪ್ರಾರಂಭವಾಗಿದೆ. ನಾನು ಘರ್ ವಾಪ್ಸಿ ಮಾಡಿದರೆ ನಿಮಗೆಲ್ಲಾ ಗೊತ್ತಾಗುತ್ತದೆ. ಇದು ಅಧಿಕೃತವಾಗಿ ಮುಗಿಯುವವರೆಗೆ, ಅದರ ಬಗ್ಗೆ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಕ್ಷ ಕಟ್ಟುವ ಮುನ್ನವೇ ನಾನು ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದು ಸಿಂಗ್ ಟಿಎಂಸಿ ಸೇರುವ ಮುನ್ನ ಹೇಳಿದ್ದರು. ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಕಳೆದ ವರ್ಷ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ಕಳಪೆ ಅಭ್ಯರ್ಥಿ ಆಯ್ಕೆಯೇ ಕಾರಣ ಎಂದು ಅರ್ಜುನ್ ಸಿಂಗ್ ದೂಷಿಸಿದ್ದರು.
ಸಿಂಗ್ ಟಿಎಂಸಿಗೆ ಸೇರ್ಪಡೆಯಾದ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಜ್ರಾ, ಯಾರಾದರೂ ತಮ್ಮ ವೈಯಕ್ತಿಕ ಲಾಭಕ್ಕಾಗಿ ರಾಜಕೀಯ ಮಾಡಲು ಬಯಸಿದರೆ, ಅದರ ಬಗ್ಗೆ ನಾವು ಏನು ಹೇಳಲಾಗುತ್ತದೆ?. ಆದಾಗ್ಯೂ, ಇದು ದೊಡ್ಡ ನಷ್ಟವಾಗಿದೆ ಎಂದಿದ್ದಾರೆ.
ಇದು ಬಿಜೆಪಿ ಮತ್ತು ಟಿಎಂಸಿ ನಡುವಿನ ಹಳೆಯ ಒಪ್ಪಂದ. ಮೋದಿಯವರ ಜನರು ದೀದಿಯನ್ನು ಸೇರುತ್ತಾರೆ ಮತ್ತು ದೀದಿಯವರ ಜನರು ಬಿಜೆಪಿ ಸೇರುತ್ತಾರೆ. ದೀದಿಯವರ ಪಕ್ಷದ ಎಲ್ಲಾ ಭ್ರಷ್ಟರು ಅಂತಿಮವಾಗಿ ಹಿಂತಿರುಗುತ್ತಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ