ದಾವಣಗೆರೆ ಪಾಲಿಕೆಯ 28, 37ನೇ ವಾರ್ಡ್ಗೆ ಉಪ ಚುನಾವಣೆ; ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ದಂಪತಿಗೆ ಭರ್ಜರಿ ಗೆಲುವು
ಚುನಾವಣೆಯಲ್ಲಿ ಕಾಂಗ್ರೆಸ್ನ ಗಣೇಶ್ 1,884 ಮತ ಪಡೆದಿದ್ದರೆ, ಬಿಜೆಪಿಯ ಶ್ರೀನಿವಾಸ 2,565 ಮತ ಪಡೆದಿದ್ದಾರೆ. ಇನ್ನು ಕಾಂಗ್ರೆಸ್ನ ರೇಖಾರಾಣಿ 1,303 ಪಡೆದಿದ್ದರೆ, ಶ್ವೇತಾ 2,096 ಮತಗಳನ್ನ ಪಡೆದು ಜಯಗೊಂಡಿದ್ದಾರೆ.

ದಾವಣಗೆರೆ: ಪಾಲಿಕೆಯ 28, 37ನೇ ವಾರ್ಡ್ಗೆ ನಡೆದ ಉಪ ಚುನಾವಣೆಯಲ್ಲಿ (By Election) ಕಾಂಗ್ರೆಸ್ ತೊರೆದು ಬಿಜೆಪಿ (BJP) ಸೇರಿದ್ದ ದಂಪತಿಗೆ ಭರ್ಜರಿ ಗೆಲುವು ಸಿಕ್ಕಿದೆ. ಉಪ ಚುನಾವಣೆಯಲ್ಲಿ ಶ್ರೀನಿವಾಸ, ಶ್ವೇತಾ ದಂಪತಿ ಮರು ಆಯ್ಕೆಯಾಗಿದ್ದಾರೆ. 28ನೇ ವಾರ್ಡ್ನಲ್ಲಿ ಬಿಜೆಪಿ ಅಭ್ಯರ್ಥಿ ಜೆ.ಎನ್.ಶ್ರೀನಿವಾಸ ಮತ್ತು 37ನೇ ವಾರ್ಡ್ನಲ್ಲಿ ಬಿಜೆಪಿ ಅಭ್ಯರ್ಥಿ ಶ್ವೇತಾ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ನ ಗಣೇಶ್ 1,884 ಮತ ಪಡೆದಿದ್ದರೆ, ಬಿಜೆಪಿಯ ಶ್ರೀನಿವಾಸ 2,565 ಮತ ಪಡೆದಿದ್ದಾರೆ. ಇನ್ನು ಕಾಂಗ್ರೆಸ್ನ ರೇಖಾರಾಣಿ 1,303 ಪಡೆದಿದ್ದರೆ, ಶ್ವೇತಾ 2,096 ಮತಗಳನ್ನ ಪಡೆದು ಜಯಗೊಂಡಿದ್ದಾರೆ.
ಈ ಹಿಂದೆ ಕಾಂಗ್ರೆಸ್ನಿಂದ ಗೆದ್ದ ಜೆ ಎನ್ ಶ್ರೀನಿವಾಸ ಹಾಗೂ ಅವರ ಪತ್ನಿ ಶ್ವೇತಾ ಶ್ರೀನಿವಾಸ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದ ಹಿನ್ನೆಲೆ ಉಪ ಚುನಾವಣೆ ನಡೆದಿತ್ತು. ಫಲಿತಾಂಶದಲ್ಲಿ 681 ಮತಗಳ ಅಂತರದಿಂದ ಶ್ರೀನಿವಾಸ ಮತ್ತು 793 ಮತಗಳ ಅಂತರದಿಂದ ಶ್ವೇತಾ ಮತ್ತೆ ಆಯ್ಕೆಯಾಗಿದ್ದಾರೆ.
ಅಭ್ಯರ್ಥಿಗಳ ಪರ ಮತಯಾಚಿಸಿದ್ದ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ: ಉಪ ಚುನಾವಣೆ ಹಿನ್ನೆಲೆ ಮೇ 16ರಂದು ಕಾಂಗ್ರೆಸ್ನಿಂದ ರೋಡ್ ಶೋ ನಡೆದಿತ್ತು. ರೋಡ್ ಶೋದಲ್ಲಿ ಅಭ್ಯರ್ಥಿಗಳಾದ ಹುಲ್ಮನೆ ಗಣೇಶ್ ಹಾಗೂ ರೇಖಾ ರಾಣಿ ಪರ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಮತ ಯಾಚನೆ ಮಾಡಿದ್ದರು. ದಾವಣಗೆರೆ ನಗರದ ಕೆಟಿಜೆ ನಗರದ ಕೊರಚರ ಹಟ್ಟಿಯಿಂದ ಆರಂಭವಾದ ರೋಡ್ ಶೋ ಸಿದ್ದ ಗಂಗಾ ಶಾಲೆ ಪ್ರದೇಶ, ಡಾಂಗೆ ಪಾರ್ಕ ಹಾಗೂ ಭಗತ್ ಸಿಂಗ್ ನಗರದ ಬಹುತೇಕ ಪ್ರದೇಶದಲ್ಲಿ ಮಲ್ಲಿಕಾರ್ಜುನ ರೋಡ್ ಶೋ ನಡೆಸಿದ್ದರು.
ಇದನ್ನೂ ಓದಿ: ಗೋವಾದ ಮಾಪ್ಸಾ ಬಳಿ ಭೀಕರ ಕಾರು ಅಪಘಾತ: ಬೆಳಗಾವಿಯ ಮೂವರು ಯುವಕರ ದುರ್ಮರಣ
ಕಾಂಗ್ರೆಸ್ ಪರ ಜೆಡಿಎಸ್ ಅಭ್ಯರ್ಥಿಯಿಂದಲೂ ಪ್ರಚಾರ: ಈ ರೋಡ್ ಶೋದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ಜೆಡಿಎಸ್ ಅಭ್ಯರ್ಥಿಯೂ ಆಗಮಿಸಿದ್ದರು. ಜೆಡಿಎಸ್ ಅಭ್ಯರ್ಥಿ ಸಮೀವುಲ್ಲಾ ವಾರ್ಡ್ ನಂ 28 ರಲ್ಲಿ ಸುತ್ತಾಡಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದರು. ಪಾರ್ಕ್ ಭಗತ್ ಸಿಂಗ್ ನಗರ ಸೇರಿದಂತೆ ಹತ್ತಾರು ಕಡೆ ಸುತ್ತಾಡಿ ಕಾಂಗ್ರೆಸ್ ಅಭ್ಯರ್ಥಿ ಹುಲ್ಮನೆ ಗಣೇಶ್ ಪರ ಸಮೀವುಲ್ಲಾ ಪ್ರಚಾರ ಮಾಡಿದ್ದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲ ಕ್ಲಿಕ್ ಮಾಡಿ
Published On - 12:24 pm, Sun, 22 May 22