ರಾಜೀವ್ ಗಾಂಧಿ ಕುಟುಂಬದ ಕ್ಷಮೆ ಕೋರಿ, ನೋವು ಮರೆಯಲಿ ಎಂದ ನಳಿನಿ ಶ್ರೀಹರನ್
ರಾಜೀವ್ ಗಾಂಧಿ ಕುಟುಂವನ್ನು ಕ್ಷಮೆ ಕೋರಿ, ನೋವು ಮರೆಯಲಿ ಎಂದು ನಳಿನಿ ಶ್ರೀಹರನ್ ಹೇಳಿದ್ದಾರೆ. ನಳಿನಿ, ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 32 ವರ್ಷಗಳ ಕಾಲ ಜೈಲಿನಲ್ಲಿದ್ದು ಬಿಡುಗಡೆಗೊಂಡ ಅಪರಾಧಿ.
ರಾಜೀವ್ ಗಾಂಧಿ ಕುಟುಂವನ್ನು ಕ್ಷಮೆ ಕೋರಿ, ನೋವು ಮರೆಯಲಿ ಎಂದು ನಳಿನಿ ಶ್ರೀಹರನ್ ಹೇಳಿದ್ದಾರೆ. ನಳಿನಿ, ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 32 ವರ್ಷಗಳ ಕಾಲ ಜೈಲಿನಲ್ಲಿದ್ದು ಬಿಡುಗಡೆಗೊಂಡ ಅಪರಾಧಿ. ಗಾಂಧಿ ಕುಟುಂಬದವರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ, ಒಂದಲ್ಲಾ ಒಂದು ದಿನ ಈ ನೋವಿನಿಂದ ಹೊರಬರುತ್ತದೆ ಎಂದರು.
ಜೈಲಿನಿಂದ ಬಿಡುಗಡೆಯಾದ ಬಳಿಕ ಜಯಲಲಿತಾ ಅವರಿಗೆ ರಾಜೀವ್ ಗಾಂಧಿ ಹತ್ಯೆ ಅಪರಾಧಿ ನಳಿನಿ ಶ್ರೀಹರನ್ ಧನ್ಯವಾದ ಹೇಳಿದ್ದಾರೆ. ನನ್ನನ್ನು ಜೈಲಿನಿಂದ ಹೊರತರಲು ಮೊದಲು ಮುಂದಾಗಿದ್ದು ಜಯಲಲಿತಾ ಮೇಡಂ ಎಂದು ಹೇಳಿ. ಇದರೊಂದಿಗೆ ತಾನು ನಿರಪರಾಧಿ ಎಂದೂ ಘೋಷಿಸಿಕೊಂಡಿದ್ದಾರೆ.
ಗಾಂಧಿ ಕುಟುಂಬವನ್ನು ಭೇಟಿಯಾಗುವ ಯಾವುದೇ ಯೋಜನೆ ಇಲ್ಲ ಎಂದು ನಳಿನಿ ಹೇಳಿದ್ದಾರೆ. ನನ್ನ ಪತಿ ಎಲ್ಲಿಗೆ ಹೋದರೂ ನಾನು ಅಲ್ಲಿಗೆ ಹೋಗುತ್ತೇನೆ ಎಂದು ಅವರು ಹೇಳಿದರು.
32 ವರ್ಷಗಳ ಕಾಲ ನನ್ನನ್ನು ಬೆಂಬಲಿಸಿದ ತಮಿಳುನಾಡಿನ ಜನತೆಗೆ ನಾನು ಕೃತಜ್ಞನಾಗಿದ್ದೇನೆ ಎಂದು ನಳಿನಿ ಹೇಳಿದ್ದಾರೆ. ನಾನು ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡಕ್ಕೂ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ನನ್ನ ಕುಟುಂಬದೊಂದಿಗೆ ಇರಲು ಬಯಸುತ್ತೇನೆ. ಕುಟುಂಬ ಸದಸ್ಯರು ಈ ದಿನಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದರು.
ಡಿಎಂಕೆ ಪಕ್ಷ ಮತ್ತು ಸಿಎಂ ಸ್ಟಾಲಿನ್‌ಗೂ ಧನ್ಯವಾದ ಎಂದು ನಳಿನಿ ಹೇಳಿದ್ದಾರೆ. ಅವರು ಪೆರೋಲ್‌ಗೆ ನಮಗೆ ಸಹಾಯ ಮಾಡಿದರು. ನಾನು ಶಾಶ್ವತವಾಗಿ ಅಪರಾಧಿಯಂತೆ ಬದುಕಬೇಕಾಗುತ್ತದೆ ಎಂಬ ಸತ್ಯವನ್ನು ಸಹ ಒಪ್ಪಿಕೊಳ್ಳಬೇಕು.
ನಾನು ನಿರಪರಾಧಿ ಎಂದು ನಂಬಿದ್ದೇನೆ. ಇಲ್ಲದಿದ್ದರೆ, ಇಷ್ಟು ವರ್ಷಗಳಲ್ಲಿ ನಾನು ಈ ರಾತ್ರಿಗಳಲ್ಲಿ ಹೇಗೆ ನೆಮ್ಮದಿಯಿಂದ ಮಲಗುತ್ತಿದ್ದೆ. ರಾಜೀವ್ ಗಾಂಧಿ ಹತ್ಯೆಯ 6 ಅಪರಾಧಿಗಳ ಬಿಡುಗಡೆ
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಆರು ಅಪರಾಧಿಗಳನ್ನು ಶನಿವಾರ ಸಂಜೆ ತಮಿಳುನಾಡಿನ ವಿವಿಧ ಜೈಲುಗಳಿಂದ ಬಿಡುಗಡೆ ಮಾಡಲಾಗಿದೆ. ಇವರಲ್ಲಿ ನಳಿನಿ ಶ್ರೀಹರನ್, ಅವರ ಪತಿ ವಿ ಶ್ರೀಹರನ್, ಜೊತೆಗೆ ಸಂತನ್, ರಾಬರ್ಟ್ ಪಾಯಸ್, ಜಯಕುಮಾರ್ ಮತ್ತು ರವಿಚಂದ್ರನ್ ಸೇರಿದ್ದಾರೆ. ಅವರಲ್ಲಿ ಶ್ರೀಹರನ್ ಮತ್ತು ಸಂತನ್ ಶ್ರೀಲಂಕಾದ ಪ್ರಜೆಗಳು.
ನಳಿನಿ ಪೆರೋಲ್ ಮೇಲೆ ಬಂದಿದ್ದರು. ಶನಿವಾರ ವೆಲ್ಲೂರಿನ ಮಹಿಳಾ ಕಾರಾಗೃಹಕ್ಕೆ ತಲುಪುವ ಮೂಲಕ ಬಿಡುಗಡೆಯನ್ನು ಪೂರ್ಣಗೊಳಿಸಿದರು. ಇದಾದ ಬಳಿಕ ವೆಲ್ಲೂರು ಸೆಂಟ್ರಲ್ ಜೈಲು ತಲುಪಿದ ಆಕೆ, ತನ್ನ ಪತಿ ಶ್ರೀಹರನ್‌ನನ್ನು ನೋಡಿ ಭಾವುಕಳಾದಳು. ಎಲ್ಲ ಅಪರಾಧಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ನೀಡಿದೆ. ದಾಖಲೆ ಪತ್ರಗಳ ಕೆಲಸ ಮುಗಿಸಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ನಳಿನಿ ತನ್ನ ತಾಯಿಯನ್ನು ನೋಡಿಕೊಳ್ಳಲು ಪೆರೋಲ್‌ನಲ್ಲಿದ್ದರು, ತನ್ನ ತಾಯಿ ಪದ್ಮಾವತಿಯನ್ನು ನೋಡಿಕೊಳ್ಳಲು ನಳಿನಿಗೆ ಡಿಸೆಂಬರ್ 2021 ರಲ್ಲಿ ಒಂದು ತಿಂಗಳ ಪೆರೋಲ್ ನೀಡಲಾಗಿತ್ತು. ಇದನ್ನು ರಾಜ್ಯ ಸರ್ಕಾರವು ಕಾಲಕಾಲಕ್ಕೆ ವಿಸ್ತರಿಸಿತು. ಬಿಡುಗಡೆ ಬಳಿಕ ನಳಿನಿ ಮಾಧ್ಯಮದವರೊಂದಿಗೆ ಮಾತನಾಡಿದರು.
ನಮ್ಮ ಕುಟುಂಬ ತುಂಬಾ ಸಂತೋಷವಾಗಿದೆ, ನಾನು ನನ್ನ ಪ್ರೀತಿಪಾತ್ರರ ಜೊತೆ ಹೊಸ ಜೀವನವನ್ನು ಪ್ರಾರಂಭಿಸಲಿದ್ದೇನೆ ಎಂದು ಅವರು ಹೇಳಿದರು. ಇದಕ್ಕೂ ಮೊದಲು, ಈ ವರ್ಷ ಮೇ 18 ರಂದು, ಪ್ರಕರಣದಲ್ಲಿ ಅಪರಾಧಿಯಾಗಿದ್ದ ಪೆರಾರಿವಾಲನ್ ಅವರನ್ನು ನ್ಯಾಯಾಲಯವು ಖುಲಾಸೆಗೊಳಿಸಿತ್ತು. ಈ ಪ್ರಕರಣದಲ್ಲಿ ಪೆರಾರಿವಾಲನ್ ಸೇರಿದಂತೆ ಎಲ್ಲಾ ಅಪರಾಧಿಗಳು ಈಗಾಗಲೇ 31 ವರ್ಷಗಳ ಜೀವಾವಧಿ ಶಿಕ್ಷೆಯನ್ನು ಅನುಭವಿಸಿದ್ದಾರೆ.
1991ರಲ್ಲಿ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಲಾಗಿತ್ತು. 1991ರ ಮೇ 20ರಂದು ಎಲ್ಟಿಟಿಇ ಕೊಲೆಗಾರರ ತಂಡ ಚೆನ್ನೈನ ಚಿತ್ರಮಂದಿರದಲ್ಲಿ ಒಂದು ಸಿನಿಮಾ ವೀಕ್ಷಣೆ ಮಾಡಿತ್ತು, ಮರುದಿನ ಸಂಜೆ ಶ್ರೀಪೆರಂಬದೂರಿಗೆ ತೆರಳಿದ ಈ ತಂಡಕ್ಕೆ ಇವರ ಬಗ್ಗೆ ಏನೂ ತಿಳಿಯದ ಹರಿಬಾಭು ಎನ್ನುವ ಫೋಟೊಗ್ರಫರ್ ಒಬ್ಬ ಭೇಟಿಯಾದ. ರ್ಯಾಲಿಯಲ್ಲಿ ಕೈಯಲ್ಲಿ ಗಂಧದ ಹಾರ ಹಿಡಿದುಕೊಂಡಿದ್ದ ಧನು ನಿಂತಿದ್ದಳು.
ಆಕೆಯ ಕೇಸರಿ ಬಣ್ಣದ ಸಲ್ವಾರ್ನೊಳಗೆ ಭಯಾನಕ ಬಾಂಬ್ ಫಿಟ್ ಮಾಡಲಾಗಿತ್ತು. ಅಲ್ಲಿದ್ದ ಮಹಿಳಾ ಪೋಲೀಸ್ ವಿಐಪಿ ಸ್ಥಳದಲ್ಲಿ ಏನು ಮಾಡುತ್ತಿರುವೆ ಎಂದು ಗದರಿಸಿದಾಗ, ಆಕೆ ರಾಜೀವ್ ಗಾಂಧಿಗೆ ಹಾರ ಹಾಕುತ್ತಾಳೆ ಎಂದು ಫೋಟೊಗ್ರಫರ್ ಹರಿಬಾಬು ಹೇಳಿದ್ದ. ವೇದಿಕೆಯ ಬಳಿ ಕುರ್ತಾ ಪೈಜಾಮಾ ಧರಿಸಿದ್ದ ಶಿವರಾಸನ್ ಕೂಡ ನಿಂತಿದ್ದ.
ಕಾಯುತ್ತಿದ್ದ ಜನರ ಬಳಿ ರಾಜೀವ್ ಗಾಂಧಿ ತೆರಳಿದಾಗ ಧನು ಅವರ ಬಳಿ ಬಂದಳು. ಆಗ ಮತ್ತೆ ಅದೇ ಮಹಿಳಾ ಪೋಲೀಸ್ ಧನುವನ್ನು ತಳ್ಳಲು ಪ್ರಯತ್ನಿಸಿದ್ದಳು. ಆದರೆ ಖುದ್ದು ರಾಜೀವ್ ಆಕೆಯನ್ನು ತಡೆದು, ಇರಲಿ ಎಲ್ಲರಿಗೂ ಅವಕಾಶ ಸಿಗಲಿ ಎಂದರು.
ನಂತರ ಧನು ರಾಜೀವ್ ಕೊರಳಿಗೆ ಗಂಧದ ಹಾರ ಹಾಕಿ, ಕಾಲು ಮುಟ್ಟುವಂತೆ ಬಾಗಿದ್ದಳು, ನಂತರ ಮೇಲೆ ಏಳಲೇ ಇಲ್ಲ. ಬಟ್ಟೆಯ ಒಳಗಿದ್ದ ಬಾಂಬ್ನ ನಳಿಕೆ ಎಳೆದು ತನ್ನನ್ನೂ ಸೇರಿದಂತೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಸುತ್ತಲಿನ 16 ಜನರ ಸಾವಿಗೆ ಕಾರಣವಾಗಿದ್ದಳು.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ