Pet Animals: ನೋಯ್ಡಾದಲ್ಲಿ ಸಾಕು ಪ್ರಾಣಿಗಳಿಂದ ಯಾರಿಗಾದರೂ ತೊಂದರೆಯಾದರೆ 10 ಸಾವಿರ ರೂ. ದಂಡ ತೆರಬೇಕು
ನೋಯ್ಡಾದಲ್ಲಿ ಸಾಕು ಪ್ರಾಣಿಗಳಿಂದ ಯಾರಿಗಾದರೂ ತೊಂದರೆಯುಂಟಾದರೆ 10 ಸಾವಿರ ರೂ. ದಂಡ ತೆರಬೇಕು ಎನ್ನುವ ಹೊಸ ನಿಯಮವೊಂದನ್ನು ಜಾರಿಗೆ ತರಲಾಗಿದೆ.
ನೋಯ್ಡಾದಲ್ಲಿ ಸಾಕು ಪ್ರಾಣಿಗಳಿಂದ ಯಾರಿಗಾದರೂ ತೊಂದರೆಯುಂಟಾದರೆ 10 ಸಾವಿರ ರೂ. ದಂಡ ತೆರಬೇಕು ಎನ್ನುವ ಹೊಸ ನಿಯಮವೊಂದನ್ನು ಜಾರಿಗೆ ತರಲಾಗಿದೆ. ನೋಯ್ಡಾದಲ್ಲಿ ನಾಯಿಯ ಹಾವಳಿ ಹೆಚ್ಚುತ್ತಿದೆ ಈ ಮಧ್ಯೆ ನೋಯ್ಡಾ ಪ್ರಾಧಿಕಾರವು ಸಾಕುಪ್ರಾಣಿಗಳ ಬಗ್ಗೆ ನೀತಿಯನ್ನು ರೂಪಿಸಿದೆ.
ಪ್ರಾಧಿಕಾರವು ಹೊರಡಿಸಿರುವ ಮಾರ್ಗಸೂಚಿ ಪ್ರಕಾರ, ಸಾಕುಪ್ರಾಣಿಗಳ ಮಾಲೀಕರು ತಮ್ಮ ನಾಯಿ ಅಥವಾ ಬೆಕ್ಕುಗಳನ್ನು ಮುಂದಿನ ವರ್ಷದ ಜನವರಿ 31ರೊಳಗೆ ನೋಂದಾಯಿಸಿಕೊಳ್ಳಬೇಕು ಇಲ್ಲವಾದಲ್ಲಿ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಇದಲ್ಲದೆ ಸಾಕು ನಾಯಿ ಅಥವಾ ಬೆಕ್ಕುಗಳಿಂದ ಇತರರಿಗೆ ಯಾವುದೇ ರೀತಿಯ ತೊಂದರೆಯುಂಟಾದರೆ 10 ಸಾವಿರ ರೂ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದೆ. ಭಾರತದ ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿಗಳ ಅನುಗುಣವಾಗಿ ನೋಯ್ಡಾ ಪ್ರಾಧಿಕಾರದ 207ನೇ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ನಗರದಲ್ಲಿ ನಾಯಿ ಕಚ್ಚುವಿಕೆಯ ಹಲವಾರು ನಿದರ್ಶನಗಳಿರುವ ಹಿನ್ನೆಲೆಯಲ್ಲಿ ಸಾಕುಪ್ರಾಣಿಗಳನ್ನು ಸಾಕುವುದು ಹಾಗೂ ಬೀದಿ ಬದಿಯಲ್ಲಿ ಆಹಾರ ನೀಡುವುದನ್ನು ನೀತಿಯನ್ನು ಪ್ರಾಧಿಕಾರ ಅನುಮೋದಿಸಿದೆ. ಪ್ರಾಧಿಕಾರದ ಹೊಸ ನೀತಿಯ ಪ್ರಕಾರ ಸಾಕು ನಾಯಿಗಳು ಅಥವಾ ಬೆಕ್ಕುಗಳ ನೋಂದಣಿಯು ಜನವರಿ 31, 2023ರವರೆಗೆ ಇರಲಿದ್ದು, ನೋಂದಣಿಯಾಗದಿದ್ದಲ್ಲಿ ದಂಡವನ್ನು ವಿಧಿಸಲಾಗುತ್ತದೆ. ಸಾಕು ನಾಯಿಗಳಿಗೆ ಆಂಟಿರೇಬಿಸ್ ಲಸಿಕೆಯನ್ನು ಕಡ್ಡಾಯಗೊಳಿಸಲಾಗಿದ್ದು, ಉಲ್ಲಂಘಿಸಿದರೆ ಪ್ರತಿ ತಿಂಗಳು 2 ಸಾವಿರ ರೂ. ದಂಡ ವಿಧಿಸಲು ಅವಕಾಶವಿದೆ.
ಬೀದಿ ನಾಯಿಗಳಿಗೆ ಶ್ವಾನಧಾಮವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ. ಸಾರ್ವಜನಿಕ ಜಾಗದಲ್ಲಿ ನಾಯಿಯು ಗಲೀಜು ಮಾಡಿದರೆ ಅದರ ಹೊಣೆಯನ್ನು ಮಾಲೀಕ ಹೊರಬೇಕಾಗುತ್ತದೆ. ಹಾಗೇಯೇ ಅವರೇ ಅದನ್ನು ಸ್ವಚ್ಛಗೊಳಿಸಬೇಕು, ಹಾಗೂ ಒಂದೊಮ್ಮೆ ಸಾಕು ನಾಯಿ ಯಾರಿಗಾದರೂ ಕಚ್ಚಿದರೆ ರೋಗಿಯ ಚಿಕಿತ್ಸೆಯನ್ನು ಕೂಡ ಮಾಲೀಕನೇ ನೋಡಿಕೊಳ್ಳಬೇಕಾಗುತ್ತದೆ ಎಂದು ಹೇಳಲಾಗಿದೆ.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ