ಭೋಪಾಲ್: ಕಳೆದ ಕೆಲವು ದಿನಗಳಿಂದ ಪ್ರವಾಹದ ಅಬ್ಬರಕ್ಕೆ ಮಧ್ಯ ಪ್ರದೇಶದ ಉತ್ತರ ಭಾಗದ ಜನರ ಜೀವನ ದುಸ್ತರವಾಗಿದೆ. ರಸ್ತೆಗಳು ಜಲಾವೃತವಾಗಿದ್ದು ಇದರ ನಡುವೆಯೇ ಶವಯಾತ್ರೆಯೊಂದು ಸಾಗುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಗುಣ ಎಂಬಲ್ಲಿನ ಭದ್ರೌರ ಹಳ್ಳಿಯಲ್ಲಿ ಈ ವಿಡಿಯೊವನ್ನು ಶುಕ್ರವಾರ ರೆಕಾರ್ಡ್ ಮಾಡಲಾಗಿದೆ. ಅದರಲ್ಲಿ ಆ ದಿನ ನಿಧನರಾದ ಕಮರ್ಲಾಲ್ ಶಾಕ್ಯವರ್ ಅವರ ಮೃತದೇಹವನ್ನು ಗ್ರಾಮಸ್ಥರು ಅಂತ್ಯ ಸಂಸ್ಕಾರಕ್ಕೆ ಕರೆದೊಯ್ಯುತ್ತಿರುವ ದೃಶ್ಯವಾಗಿದೆ ಇದು.
ನೀರಿನ ಮಟ್ಟ ಕುಸಿಯಬಹುದು ಎಂದು ಶ್ಯಾಕವರ್ ಕುಟುಂಬ ಮತ್ತು ಸ್ನೇಹಿತರು ಗಂಟೆಗಟ್ಟಲೆ ಕಾಯುತ್ತಿದ್ದರು. ಆದರೆ ನೀರಿನ ಮಟ್ಟ ಕುಸಿಯದೇ ಇದ್ದಾಗ ಅವರು ಮೃತದೇಹವನ್ನು ಹೊತ್ತೊಯ್ಯಲು ನಿರ್ಧರಿಸಿದರು. ಈಜು ಬಲ್ಲವರೇ ಚಟ್ಟಕ್ಕೆ ಹೆಗಲುಕೊಟ್ಟರು ಎಂದು ಎನ್ಡಿಟಿವಿ ವರದಿ ಮಾಡಿದೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಆಘಾತ ಮತ್ತು ಟೀಕೆಗಳನ್ನು ಹುಟ್ಟುಹಾಕಿದೆ. ವಿಶೇಷವಾಗಿ ಅಭಿವೃದ್ಧಿಯ ಕೊರತೆ ಮತ್ತು ಮೂಲಸೌಕರ್ಯದ ಕೊರತೆ ಬಗ್ಗೆ ಜನ ಟೀಕಿಸಿದ್ದಾರೆ. ಭದೌರವು ಗುಣದಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿದೆ.
ಒಳಚರಂಡಿ ವ್ಯವಸ್ಥೆಗಳು ಮತ್ತು ರಸ್ತೆಗಳನ್ನು ಸುಧಾರಿಸುವ ಸರ್ಕಾರಿ ಯೋಜನೆಗಳು ಅನುಷ್ಠಾನಗೊಂಡಿಲ್ಲ ಅಥವಾ ಸರಿಯಾಗಿಲ್ಲ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಭದೌರಾ ನಿವಾಸಿಗಳು ಬಳಸಿದ ಸ್ಮಶಾನವು ಪ್ರವಾಹಕ್ಕೆ ಒಳಗಾಗಲಿಲ್ಲ ಎಂದು ವರದಿಗಳು ಹೇಳಿವೆ.
A funeral procession waded through waist height water to reach cremation ground in Guna around 1,250 villages are still reeling in the aftermath of floods the
death toll in the rain-related incidents in the flood-hit parts has risen to 24 @ndtv @ndtvindia pic.twitter.com/KBmCxK7J3J— Anurag Dwary (@Anurag_Dwary) August 8, 2021
ಗ್ವಾಲಿಯರ್, ಶಿವಪುರಿ, ಗುಣ, ಶಿಯೋಪುರ್, ಡಾಟಿಯಾ, ಅಶೋಕನಗರ, ಭಿಂದ್ ಮತ್ತು ಮೊರೆನಾಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಇಂತಹ ಸುಮಾರು 1,250 ಹಳ್ಳಿಗಳು ಇನ್ನೂ ಸಂಕಷ್ಟದಲ್ಲಿವೆ. ಆಗಸ್ಟ್ 1 ರಿಂದ 7 ರ ನಡುವೆ ಪ್ರಾಣ ಕಳೆದುಕೊಂಡವರ ಸಂಖ್ಯೆ 24 ಕ್ಕೆ ತಲುಪಿದೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಶನಿವಾ ಶಿಯೋಪುರದಲ್ಲಿ ನಿವಾಸಿಗಳಿಂದ ಬೃಹತ್ ಪ್ರತಿಭಟನೆಗಳನ್ನು ಎದುರಿಸಬೇಕಾಯಿತು. ಜನರು ತೋಮರ್ ಅವರ ವಾಹನವನ್ನು ತಡೆಯಲು ಪ್ರಯತ್ನಿಸಿದರು, ಅದರ ಮೇಲೆ ಮಣ್ಣನ್ನು ಎಸೆದರು ಮತ್ತು ಕಪ್ಪು ಬಾವುಟಗಳನ್ನು ತೋರಿಸಿದರು. ಕೆಲವು ಪ್ರತಿಭಟನಾಕಾರರು ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿ ತೋಮರ್ ನ್ನು ನೂಕಲು ಪ್ರಯತ್ನಿಸಿದರು.
ಇದನ್ನೂ ಓದಿ: Viral Video: ಮಧ್ಯಪ್ರದೇಶದಲ್ಲಿ ಭೀಕರ ಪ್ರವಾಹ; ನೋಡನೋಡುತ್ತಲೇ ಕೊಚ್ಚಿ ಹೋದ ಸೇತುವೆ
(Video of a funeral procession In Flooded Street Of Madhya Pradesh’s Bhadaura village(