ಬಿಹಾರ: ₹500 ವಿಷಯದಲ್ಲಿ ಜಡೆ ಎಳೆದು ಜಗಳವಾಡಿದ ಆರೋಗ್ಯ ಕಾರ್ಯಕರ್ತೆಯರು

ಬಿಹಾರ: ₹500 ವಿಷಯದಲ್ಲಿ ಜಡೆ ಎಳೆದು ಜಗಳವಾಡಿದ ಆರೋಗ್ಯ ಕಾರ್ಯಕರ್ತೆಯರು
ಬಿಹಾರದಲ್ಲಿ ಆರೋಗ್ಯ ಕಾರ್ಯಕರ್ತೆಯರ ಜಗಳ

ಘಟನೆ ಕುರಿತು ಮಾಹಿತಿ ಪಡೆದ ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಈ ಸಿಬ್ಬಂದಿ ವಿರುದ್ಧ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

TV9kannada Web Team

| Edited By: Rashmi Kallakatta

Jan 24, 2022 | 3:36 PM

ಪಟನಾ: ಬಿಹಾರದ (Bihar)ಜಮುಯಿ ಜಿಲ್ಲೆಯ ಇಬ್ಬರು ಆರೋಗ್ಯ ಕಾರ್ಯಕರ್ತೆಯರು ಪರಸ್ಪರ ಹೊಡೆದಾಡಿಕೊಂಡ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ನಂತರ ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ದೃಶ್ಯಾವಳಿಗಳು ಜಮುಯಿಯ ಲಕ್ಷ್ಮಿಪುರ ಬ್ಲಾಕ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತೆಯರು ಪರಸ್ಪರ ಕೂದಲನ್ನು ಹಿಡಿದು ಎಳೆದಾಡುವುದು ವಿಡಿಯೊದಲ್ಲಿದೆ. ಒಬ್ಬ ವ್ಯಕ್ತಿ ಮಧ್ಯಪ್ರವೇಶಿಸಿ ಅವರನ್ನು ತಡೆಯಲು ಪ್ರಯತ್ನಿಸುತ್ತಾನೆ. ಆದರೂ ಇಬ್ಬರೂ ಕೈಯಿಂದ ಹಾಗೂ ಚಪ್ಪಲಿಯಿಂದ ಹೊಡೆದುಕೊಂಡು ಜಗಳ ಮುಂದುವರಿಸುತ್ತಿರುವುದು ವಿಡಿಯೊದಲ್ಲಿದೆ. ಭಾನುವಾರ ಆಶಾ ಕಾರ್ಯಕರ್ತೆ ರಿಂತು ಕುಮಾರಿ ಅವರು ನವಜಾತ ಶಿಶುವನ್ನು ಆಕ್ಸಿಲಿಯರಿ ನರ್ಸ್ ಮಿಡ್‌ವೈಫ್ (ANM) ರಂಜನಾ ಕುಮಾರಿ ಅವರ ಬಳಿ ಬಿಸಿಜಿ ಲಸಿಕೆಗಾಗಿ (ಶಿಶುಗಳಲ್ಲಿ ಕ್ಷಯರೋಗವನ್ನು ತಡೆಗಟ್ಟಲು ಬಳಸಲಾಗುತ್ತದೆ) ಕೊಂಡೊಯ್ದ ವೇಳೆ ಈ ಜಗಳ ನಡೆದಿದೆ. ಆದರೆ, ಎಎನ್‌ಎಂ ಕಾರ್ಯಕರ್ತೆ ಲಸಿಕೆ ಹಾಕಲು ₹ 500 ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಹೆರಿಗೆ ವಾರ್ಡ್‌ ಬಳಿ ಇಬ್ಬರು ಆರೋಗ್ಯ ಸಿಬ್ಬಂದಿ ನಡುವೆ ವಾಗ್ವಾದ ನಡೆದು ಅದು ಜಗಳದ ಹಂತಕ್ಕೆ ತಲುಪಿದೆ.

ಘಟನೆ ಕುರಿತು ಮಾಹಿತಿ ಪಡೆದ ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಈ ಸಿಬ್ಬಂದಿ ವಿರುದ್ಧ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಜಮುಯಿಯಲ್ಲಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಸಹಾಯಕ ನರ್ಸ್ ಮತ್ತು ಮಿಡ್ ವೈಫ್ ಗೈರುಹಾಜರಾದುದಕ್ಕಾಗಿ ಜಗಳ ಮಾಡಿ ಹಲ್ಲೆ ನಡೆಸಿದ ವಿಡಿಯೊ ವೈರಲ್ ಆಗಿತ್ತು.

ಎಎನ್‌ಎಂಗಳು ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯ ವ್ಯವಸ್ಥೆಯ ಮುಂಚೂಣಿ ಕಾರ್ಯಕರ್ತೆಯರಾಗಿದ್ದು ವೈದ್ಯಕೀಯ ಸೇವೆಗಳನ್ನು ಅತ್ಯಂತ ದೂರದ ಮೂಲೆಗಳಿಗೆ ಕೊಂಡೊಯ್ಯುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ.

ಇದನ್ನೂ ಓದಿ: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಕ್ಕೆ ಪ್ರಧಾನಿ ಮೋದಿ, ಕೇಂದ್ರ ಸಚಿವರಿಂದ ಶುಭ ಹಾರೈಕೆ

Follow us on

Related Stories

Most Read Stories

Click on your DTH Provider to Add TV9 Kannada