ಆರೋಪಿ ವಿಕಾಸ್ ಬರಾಲಾರನ್ನು ಸಹಾಯಕ ಅಡ್ವೊಕೇಟ್ ಜನರಲ್ ಆಗಿ ನೇಮಿಸಿದ ಹರಿಯಾಣ ಸರ್ಕಾರ
ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ವಿಕಾಸ್ ಬರಾಲಾರನ್ನು ಹರಿಯಾಣ ಸರ್ಕಾರವು ಸಹಾಯಕ ಅಡ್ವೊಕೇಟ್ ಜನರಲ್ ಆಗಿ ನೇಮಿಸಿದೆ. 2017ರಲ್ಲಿ ಲೈಂಗಿಕ ಕಿರುಕುಳದ ಆರೋಪಿ ಮತ್ತು ಹಿರಿಯ ಬಿಜೆಪಿ ನಾಯಕ ಸುಭಾಷ್ ಬರಾಲಾ ಅವರ ಪುತ್ರ ವಿಕಾಸ್ ಬರಾಲಾ ಅವರನ್ನು ಹರಿಯಾಣ ಸರ್ಕಾರವು ಸಹಾಯಕ ಅಡ್ವೊಕೇಟ್ ಜನರಲ್ ಆಗಿ ನೇಮಿಸಿದೆ. ನ್ಯಾಯಾಂಗ ಇಲಾಖೆ ಜುಲೈ 18 ರಂದು ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಹರ್ಯಾಣ ರಾಜ್ಯದ ಹೆಚ್ಚುವರಿ ಅಡ್ವೊಕೇಟ್ ಜನರಲ್, ಹಿರಿಯ ಉಪ ಅಡ್ವೊಕೇಟ್ ಜನರಲ್, ಉಪ ಅಡ್ವೊಕೇಟ್ ಜನರಲ್ ಮತ್ತು ಸಹಾಯಕ ಅಡ್ವೊಕೇಟ್ ಜನರಲ್ ಹುದ್ದೆಗಳಿಗೆ 97 ಹೊಸ ನೇಮಕಾತಿಗಳಲ್ಲಿ ವಿಕಾಸ್ ಕೂಡ ಒಬ್ಬರು.

ಹರಿಯಾಣ, ಜುಲೈ 23: ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ವಿಕಾಸ್ ಬರಾಲಾರನ್ನು ಹರಿಯಾಣ ಸರ್ಕಾರವು ಸಹಾಯಕ ಅಡ್ವೊಕೇಟ್ ಜನರಲ್ ಆಗಿ ನೇಮಿಸಿದೆ. 2017ರಲ್ಲಿ ಲೈಂಗಿಕ ಕಿರುಕುಳದ ಆರೋಪಿ ಮತ್ತು ಬಿಜೆಪಿ ಹಿರಿಯ ನಾಯಕ ಸುಭಾಷ್ ಬರಾಲಾ ಅವರ ಪುತ್ರ ವಿಕಾಸ್ ಬರಾಲಾ ಅವರನ್ನು ಹರಿಯಾಣ ಸರ್ಕಾರವು ಸಹಾಯಕ ಅಡ್ವೊಕೇಟ್ ಜನರಲ್ ಆಗಿ ನೇಮಿಸಿದೆ.
ನ್ಯಾಯಾಂಗ ಇಲಾಖೆ ಜುಲೈ 18 ರಂದು ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಹರ್ಯಾಣ ರಾಜ್ಯದ ಹೆಚ್ಚುವರಿ ಅಡ್ವೊಕೇಟ್ ಜನರಲ್, ಹಿರಿಯ ಉಪ ಅಡ್ವೊಕೇಟ್ ಜನರಲ್, ಉಪ ಅಡ್ವೊಕೇಟ್ ಜನರಲ್ ಮತ್ತು ಸಹಾಯಕ ಅಡ್ವೊಕೇಟ್ ಜನರಲ್ ಹುದ್ದೆಗಳಿಗೆ 97 ಹೊಸ ನೇಮಕಾತಿಗಳಲ್ಲಿ ವಿಕಾಸ್ ಕೂಡ ಒಬ್ಬರು.
ವಿಕಾಸ್ ಮತ್ತು ಅವರ ಸ್ನೇಹಿತ ಆಶಿಶ್ ಕುಮಾರ್ ವಿರುದ್ಧ ಆಗಸ್ಟ್ 5, 2017 ರಂದು ಸೆಕ್ಷನ್ 354D (ಹಿಂಬಾಲಿಸುವುದು), 341, 365 (ಅಪಹರಣ ಪ್ರಯತ್ನ), ಮತ್ತು ಐಪಿಸಿ 511 ರ ಅಡಿಯಲ್ಲಿ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಯಿತು.
ಹರಿಯಾಣದ ಮಾಜಿ ಐಎಎಸ್ ಅಧಿಕಾರಿ ವಿ.ಎಸ್. ಕುಂಡು ಅವರ ಪುತ್ರಿ ವರ್ಣಿಕಾ ಕುಂಡು ಅವರು ದೂರು ದಾಖಲಿಸಿದ್ದು, ಚಂಡೀಗಢದಲ್ಲಿ ತಡರಾತ್ರಿ ತಮ್ಮ ವಾಹನವನ್ನು ಬೆನ್ನಟ್ಟಿ ಬಲವಂತವಾಗಿ ಒಳಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸ್ ಠಾಣೆ ಸೆಕ್ಟರ್ 26 ರಲ್ಲಿ ಎಫ್‌ಐಆರ್ ಸಂಖ್ಯೆ 156 ಎಂದು ದಾಖಲಾಗಿದ್ದ ಈ ಪ್ರಕರಣವು ಆ ಸಮಯದಲ್ಲಿ ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು. ವಿಚಾರಣೆ ಇಂದಿಗೂ ಬಾಕಿ ಉಳಿದಿದೆ, ಮುಂದಿನ ವಿಚಾರಣೆಯನ್ನು ಆಗಸ್ಟ್ 2, 2025 ರಂದು ರಕ್ಷಣಾ ಸಾಕ್ಷ್ಯಗಳ ದಾಖಲಾತಿಗಾಗಿ ನಿಗದಿಪಡಿಸಲಾಗಿದೆ. ವಿಕಾಸ್ ಪ್ರಕರಣದ ದೂರುದಾರರಾದ ವರ್ಣಿಕಾ ಕುಂಡು, ಈ ರೀತಿಯ ಬೆಳವಣಿಗೆಗಳು ಭಾರತೀಯ ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಅಲುಗಾಡಿಸುತ್ತಿವೆ ಎಂದು ದಿ ಕ್ವಿಂಟ್ಗೆ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಒಡಿಶಾ: ಲೈಂಗಿಕ ಕಿರುಕುಳ ತಾಳಲಾರದೆ ಬೆಂಕಿ ಹಚ್ಚಿಕೊಂಡಿದ್ದ ವಿದ್ಯಾರ್ಥಿನಿ ಸಾವು
ನ್ಯಾಯದ ಬಗ್ಗೆ ನನ್ನ ಭರವಸೆ ಇನ್ನೂ ಜೀವಂತವಾಗಿದ್ದರೂ, ನ್ಯಾಯಾಂಗದ ಮೇಲಿನ ನನ್ನ ನಂಬಿಕೆ ಅಲುಗಾಡುತ್ತಿದೆ, ಹರಿಯಾಣ ಸರ್ಕಾರವು ಉತ್ತರಿಸಬೇಕಾದ ಪ್ರಶ್ನೆಗಳಿವೆ ಎಂದು ಅವರು ಹೇಳಿದರು. ಗಂಭೀರ ಆರೋಪ ಎದುರಿಸುತ್ತಿರುವ ಈ ವ್ಯಕ್ತಿಗೆ ಸರ್ಕಾರ ಇಷ್ಟೊಂದು ಜವಾಬ್ದಾರಿಯುತ ಕಾನೂನು ಸ್ಥಾನವನ್ನು ಹೇಗೆ ನೀಡಿತು ಎಂದು ಪ್ರಶ್ನಿಸುತ್ತಿದ್ದಾರೆ. ಸಹಾಯಕ ಅಡ್ವೊಕೇಟ್ ಜನರಲ್ ರಾಜ್ಯ ಸರ್ಕಾರದ ಅತಿದೊಡ್ಡ ಕಾನೂನು ಪ್ರತಿನಿಧಿಯಾಗಿದ್ದು, ನ್ಯಾಯಾಲಯದಲ್ಲಿ ಸರ್ಕಾರವನ್ನು ಪ್ರತಿನಿಧಿಸುತ್ತಾರೆ.
ವಿಕಾಸ್ ಬರಾಲಾ ಅವರಿಗೆ ಪಂಜಾಬ್- ಹರಿಯಾಣ ಹೈಕೋರ್ಟ್ ಜಾಮೀನು ನೀಡಿತ್ತು. ಈ ಪ್ರಕರಣದಲ್ಲಿ ಅವರು 5 ತಿಂಗಳು ಜೈಲಿನಲ್ಲಿದ್ದರು. ನವೆಂಬರ್ 2017ರಲ್ಲಿ ಜಾಮೀನು ತಿರಸ್ಕರಿಸಲಾಗಿತ್ತು. ಅದಾದ ಬಳಿಕ ಮತ್ತೆ ಕೋರ್ಟ್ಗೆ ಮೊರೆ ಹೋಗಿದ್ದರು. 2018ರ ಜನವರಿಯಲ್ಲಿ ಜಾಮೀನು ನೀಡಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




