ಮಧ್ಯಪ್ರದೇಶ: ಆ ಊರಿಗೆ ವಾಹನವೇ ಬರೋದಿಲ್ಲ, ಮನೆಯಲ್ಲೇ ಅವಳಿ ಶಿಶುಗಳಿಗೆ ಜನ್ಮ ನೀಡಿದ ಮಹಿಳೆ, ಒಂದು ಮಗು ಸಾವು
ರಸ್ತೆ ಸರಿ ಇಲ್ಲ, ವಾಹನಗಳ ಓಡಾಟವಿಲ್ಲ, ಆಂಬ್ಯುಲೆನ್ಸ್ಗೆ ಬರಲೂ ದಾರಿಯೇ ಇಲ್ಲ, ಮನೆಯಲ್ಲೇ ಮಹಿಳೆಯೊಬ್ಬಳು ಅವಳಿ ಶಿಶುಗಳಿಗೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆದರೆ ಒಂದು ಮಗು ಬದುಕುಳಿಯಲಿಲ್ಲ. ಮರುದಿನ ದೇವಿಯ ಸ್ಥಿತಿ ಹದಗೆಟ್ಟಾಗ ಗ್ರಾಮಸ್ಥರು ಆಕೆಯನ್ನು ಹಾಸಿಗೆಯಿಂದ ಮಾಡಿದ ಜೋಲಿ ರೀತಿ ಮಾಡಿ ಹೊತ್ತುಕೊಂಡು ಹೋಗಿದ್ದಾರೆ. ಕೆಸರು ರಸ್ತೆಯಲ್ಲಿ ಎರಡು ಕಿ.ಮೀ ನಡೆಯಬೇಕಾಯಿತು. ನಂತರ ಹತ್ತಿರದ ಕೊರ್ಸರ್ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಆಟೋ ರಿಕ್ಷಾ ವ್ಯವಸ್ಥೆ ಮಾಡಲಾಯಿತು.

ಸಿಂಗ್ರೌಲಿ, ಜುಲೈ 23: ತುಂಬು ಗರ್ಭಿಣಿ(Pregnant)ಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ಆಂಬ್ಯುಲೆನ್ಸ್ ಸಿಗದ ಕಾರಣ ಮನೆಯಲ್ಲೇ ಅವಳಿ ಶಿಶುಗಳಿಗೆ ಜನ್ಮ ನೀಡಿದ್ದಾರೆ. ಆದರೆ ದುರಾದೃಷ್ಟವಶಾತ್ ಒಂದು ಮಗು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ನಡೆದಿದೆ. ಜನಿಸಿದ ಕೆಲವೇ ಗಂಟೆಗಳಲ್ಲಿ ಮಗು ಸಾವನ್ನಪ್ಪಿದೆ. ಆಸ್ಪತ್ರೆಗೆ ತೆರಳಲು ಎರಡು ಕಿ.ಮೀ ದೂರ ಮಹಿಳೆ ಹಾಗೂ ಶಿಶುವನ್ನು ಹೊತ್ತುಕೊಂಡು ಹೋಗಬೇಕಾಯಿತು.
ಸಿಂಗ್ರೌಲಿಯ ಧನಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೃಹಸ್ಪತಿ ಕೋಲ್ ಅವರ ಪತ್ನಿ ದೇವಿಗೆ ಸೋಮವಾರ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಗ್ರಾಮಕ್ಕೆ ಸರಿಯಾದ ರಸ್ತೆಯೂ ಇಲ್ಲ ವಾಹನ ಬರುವುದೂ ಕಷ್ಟ. ಕುಟುಂಬಕ್ಕೆ ಮನೆಯಲ್ಲಿಯೇ ಹೆರಿಗೆ ಮಾಡಿಸುವುದನ್ನು ಬಿಟ್ಟರೆ ಬೇರೆ ದಾರಿ ಇರಲಿಲ್ಲ. ಮಹಿಳೆ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಅದರಲ್ಲಿ ಒಂದು ಮಗು ಹುಟ್ಟಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದೆ.
ಮರುದಿನ ದೇವಿಯ ಸ್ಥಿತಿ ಹದಗೆಟ್ಟಾಗ ಗ್ರಾಮಸ್ಥರು ಆಕೆಯನ್ನು ಹಾಸಿಗೆಯಿಂದ ಮಾಡಿದ ಜೋಲಿ ರೀತಿ ಮಾಡಿ ಹೊತ್ತುಕೊಂಡು ಹೋಗಿದ್ದಾರೆ. ಕೆಸರು ರಸ್ತೆಯಲ್ಲಿ ಎರಡು ಕಿ.ಮೀ ನಡೆಯಬೇಕಾಯಿತು. ನಂತರ ಹತ್ತಿರದ ಕೊರ್ಸರ್ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಆಟೋ ರಿಕ್ಷಾ ವ್ಯವಸ್ಥೆ ಮಾಡಲಾಯಿತು.
ಮತ್ತಷ್ಟು ಓದಿ: Video: ಬಸ್ಸಿನಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದ ಲೇಡಿ ಕಂಡಕ್ಟರ್
ಮತ್ತೊಂದು ಮಗು ಕೂಡ 1 ಕೆಜಿಗಿಂತ ಕಡಿಮೆ ತೂಕವಿದ್ದು, ಅದನ್ನು ಉತ್ತಮ ಆರೈಕೆಗಾಗಿ ಬೈಧಾನ್‌ನ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು. ಕುಟುಂಬವು ಜಿಲ್ಲಾ ಆಸ್ಪತ್ರೆಗೆ ಹೋಗುವ ಬದಲು ಮನೆಗೆ ಮರಳಲು ನಿರ್ಧರಿಸಿತು ಎಂದು ವೈದ್ಯರು ತಿಳಿಸಿದ್ದಾರೆ.
ಬ್ಲಾಕ್ ವೈದ್ಯಕೀಯ ಅಧಿಕಾರಿ ಹರಿಶಂಕರ್ ಬೈನ್ಸ್ ಅವರು ವೈದ್ಯಕೀಯ ತಂಡವು ಕುಟುಂಬವನ್ನು ಭೇಟಿಯಾಗಿದ್ದಾರೆ. ಮಗುವಿನ ತೂಕ ಕಡಿಮೆ ಇರುವ ಕಾರಣ ಸರಿಯಾದ ವೈದ್ಯಕೀಯ ಆರೈಕೆಯ ಕೊರತೆಯಿಂದಾಗಿ ನವಜಾತ ಶಿಶುವಿನ ಜೀವಕ್ಕೆ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವೆ ರಾಧಾ ಸಿಂಗ್ ಅವರು ಚಿತ್ರಾಂಗಿ ಪ್ರದೇಶದವರೇ ಆಗಿರುವುದರಿಂದ ಮತ್ತಷ್ಟು ಪ್ರಶ್ನೆಗಳು ಎದ್ದಿವೆ. ಸಚಿವರ ಸ್ವಂತ ಹಳ್ಳಿಯಲ್ಲಿಯೂ ಸಹ ರಸ್ತೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿರುವಾಗ, ರಾಜ್ಯದ ಇತರ ಭಾಗಗಳಲ್ಲಿ ಅಭಿವೃದ್ಧಿಯನ್ನು ಹೇಗೆ ನಿರೀಕ್ಷಿಸಬಹುದು ಎಂದು ಎಂದು ಪ್ರಶ್ನೆ ಮಾಡಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




