ಹಾಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದಾವೊಲ್ ಅವರಿಗೆ ಉತ್ತರಾಧಿಕಾರಿ ರೂಪದಲ್ಲಿ, ಸಧ್ಯಕ್ಕೆ ಅವರ ಸಹಾಯಕರಾಗಿ ಅಂದರೆ ಭಾರತದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ (Deputy NSA) ಖಡಕ್ Indian Foreign Service ಅಧಿಕಾರಿ ವಿಕ್ರಮ್ ಮಿಶ್ರೀ (Vikram Misri) ದೇಶದಲ್ಲಿ ಸೇವೆ ಸಲ್ಲಿಸಲು (National Security Council Secretariat) ಮರಳಿದ್ದಾರೆ. ಈ ಹಿಂದೆ ಅವರು ಬೀಜಿಂಗ್ನಲ್ಲಿ ಭಾರತದ ದೂರವಾಸದಲ್ಲಿ ಇದ್ದರು. ವಿಕ್ರಮ್ ಮಿಶ್ರೀ ಮಾಜಿ ಪ್ರಧಾನ ಮಂತ್ರಿಗಳಾದ ಐಕೆ ಗುಜ್ರಾಲ್, ಮನಮೋಹನ್ ಸಿಂಗ್ ಮತ್ತು ಹಾಲಿ ಪ್ರಧಾನ ನರೇಂದ್ರ ಮೋದಿ ಅವರಿಗೆ ಆಪ್ತ ಕಾರ್ಯದರ್ಶಿಯಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದಾರೆ.
ಮೂಲತಃ ಶ್ರೀನಗರದವರಾದ 57 ವರ್ಷದ ಮಿಶ್ರೀ Indian Foreign Service ಯ 1989ನೇ ಬ್ಯಾಚ್ ಅಧಿಕಾರಿ. ಮ್ಯಾನ್ಮಾರ್, ಸ್ಪೇನ್ನಲ್ಲಿ ಭಾರತದ ಅಂಬಾಸಿಡರ್ ಆಗಿ ಸೇವೆ ಸಲ್ಲಿಸಿದ್ದಾರೆ. ಭಾರತ-ಚೀನಾದ ಸಂಬಂಧ ಬಿಕ್ಕಟ್ಟಿನಿಂದ ಕೂಡಿದ್ದಾಗ 2019ರಿಂದ ಬೀಜಿಂಗ್ನಲ್ಲಿ ಅಂಬಾಸಿಡರ್ ಆಗಿದ್ದರು.
ಭಾರತದ ವಿದೇಶ ವ್ಯವಹಾರಗಳ ಸಚಿವಾಲಯದಲ್ಲಿ ಸೇವೆ ಸಲ್ಲಿಸಿರುವ ವಿಕ್ರಮ್ ಮಿಶ್ರೀ, ಪ್ರಧಾನ ಮಂತ್ರಿ ಕಚೇರಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಯೂರೋಪ್, ಆಫ್ರಿಕಾ ಮತ್ತು ಉತ್ತರ ಅಮೆರಿಕಾದಲ್ಲಿ ಭಾರತದ ಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಶ್ರೀನಗರದಲ್ಲಿ ಹುಟ್ಟಿ ಬೆಳೆದ ವಿಕ್ರಮ್ ಮಿಶ್ರೀ, ಸಿಂಧಿಯಾ ಸ್ಕೂಲ್ ( Scindia School) ವಿದ್ಯಾರ್ಥಿ. ದೆಹಲಿ ಹಿಂದೂ ಕಾಲೇಜ್ನಲ್ಲಿ ಪದವಿ ವ್ಯಾಸಂಗ ಮಾಡಿದ್ದಾರೆ. ಎಂಬಿಎ ಪದವಿ ಸಹ ಪಡೆದಿದ್ದಾರೆ. ನಾಗರಿಕ ಸೇವೆಗಳಿಗೆ ಆಯ್ಕೆಯಾಗುವ ಮೊದಲು ಅವರು ಜಾಹಿರಾತು ಮತ್ತು ಸಿನಿಮಾ ತಯಾರಿಕೆಯಲ್ಲಿ ಮೂರು ವರ್ಷ ಕೆಲಸ ಮಾಡಿದ್ದರು. ಡಾಲಿ ಮಿಶ್ರೀ (Dolly Misri) ಅವರನ್ನು ಮದುವೆಯಾಗಿರುವ ವಿಕ್ರಮ್ ಮಿಶ್ರೀಗೆ ಇಬ್ಬರು ಮಕ್ಕಳಿದ್ದಾರೆ.
Exiting @EOIBeijing one final time on my last day at work as Ambassador and saying farewell to my core office support team. Grateful to them for all their support. pic.twitter.com/TetigC6MJ8
— Vikram Misri (@VikramMisri) December 11, 2021
ಇದನ್ನೂ ಓದಿ: Narada Muni: ತ್ರಿಲೋಕ ಸಂಚಾರಕ ನಾರದ ಮುನಿಯಾಗಿದ್ದು ಹೇಗೆ? ನಾರದ ಮುನಿ ಜನ್ಮ ರಹಸ್ಯ
Published On - 7:14 am, Tue, 28 December 21