ದೆಹಲಿ: ಪೊಲೀಸ್ ಠಾಣೆಯೊಳಗೆ ಗುಂಪೊಂದು ನುಗ್ಗಿ ದೆಹಲಿ ಪೊಲೀಸರನ್ನು ನಿರ್ದಯವಾಗಿ ಥಳಿಸಿದೆ. ಘಟನೆಯ ವಿಡಿಯೋವನ್ನು ಮತ್ತೊಬ್ಬ ಪೋಲೀಸರು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನವದೆಹಲಿಯ ಆನಂದ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.
ವೀಡಿಯೋದಲ್ಲಿ 10-12 ಜನರ ಗುಂಪೊಂದು ಪೊಲೀಸರನ್ನು ಸುತ್ತುವರೆದು ಹಲ್ಲೆ ನಡೆಸಿದ್ದಾರೆ. ಬಹಳಷ್ಟು ಜನ ತಮ್ಮ ಫೋನ್‌ಗಳಲ್ಲಿ ಈ ದೃಶ್ಯವನ್ನು ಮತ್ತು ವೀಡಿಯೊಗಳನ್ನು ಚಿತ್ರೀಕರಿಸುವುದನ್ನು ನೋಡಬಹುದಾದರೂ, ಯಾರೂ ದಾಳಿಕೋರರನ್ನು ತಡೆಯಲು ಪ್ರಯತ್ನಿಸುವುದಿಲ್ಲ. ಆನಂದ್ ವಿಹಾರ್ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್‌ಗೆ ಥಳಿಸಿದ್ದಾರೆ.
Viral video shows constable beaten by mob inside police station
ಇದನ್ನೂ ಓದಿRead @ANI Story | https://t.co/EkO8exGsQ1#DelhiCopBeaten #DelhiPolice #Delhi #CopBeaten pic.twitter.com/cIRqkUCkfa
— ANI Digital (@ani_digital) August 6, 2022
ಪೊಲೀಸರಿಗೆ ಏಕೆ ಥಳಿಸಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಘಟನೆ ಆಗಸ್ಟ್ 3 ರಂದು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾನ್‌ಸ್ಟೆಬಲ್ ಕ್ಷಮೆ ಕೇಳುತ್ತಲೇ ಇದ್ದಾನೆ, ಆದರೆ ಆತನಿಗೆ ಹೊಡೆಯುವುದನ್ನು ನಿಲ್ಲಿಸಲಿಲ್ಲ. ಪೊಲೀಸ್ಗೆ ಯಾರು ಥಳಿಸಿದರು ಎಂದು ಪತ್ತೆಯಾಗಿಲ್ಲ.
ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ಹಿಡಿಯಲು ಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.