Viral Video: ಚೆನ್ನೈನಲ್ಲಿ ಚಂಡೆ ಬಾರಿಸಿ ಸಂಭ್ರಮಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ರಾಜ್ಯಪಾಲ ಲಾ ಗಣೇಶನ್ ಅವರ ಕುಟುಂಬದ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಮತಾ ತಮಿಳುನಾಡಿಗೆ ತೆರಳಿದ್ದರು. ಈ ವೇಳೆ ತಾವು ಕೂಡ ಚಂಡೆ ಬಾರಿಸಿ ಮಮತಾ ಬ್ಯಾನರ್ಜಿ ಗಮನ ಸೆಳೆದಿದ್ದಾರೆ. ಈ ವಿಡಿಯೋ ಟ್ವಿಟ್ಟರ್ನಲ್ಲಿ ವೈರಲ್ ಆಗಿದೆ.
ಚೆನ್ನೈ: ತಮಿಳುನಾಡಿನ ಚೆನ್ನೈನಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲ ಲಾ ಗಣೇಶನ್ (La Ganesan) ಅವರ ಕುಟುಂಬದ ಸಮಾರಂಭಕ್ಕೆ ಆಗಮಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರನ್ನು ಚಂಡೆ ವಾದನದ ಮೂಲಕ ಬರಮಾಡಿಕೊಳ್ಳಲಾಯಿತು. ಈ ವೇಳೆ ತಾವು ಕೂಡ ಚಂಡೆ ಬಾರಿಸಿ ಮಮತಾ ಬ್ಯಾನರ್ಜಿ ಗಮನ ಸೆಳೆದಿದ್ದಾರೆ. ಈ ವಿಡಿಯೋ ಟ್ವಿಟ್ಟರ್ನಲ್ಲಿ ವೈರಲ್ ಆಗಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಷ್ಟು ಎನರ್ಜಿಟಿಕ್ ಎಂದು ಹೇಳಬೇಕಾಗಿಲ್ಲ. ರಬ್ಬರ್ ಚಪ್ಪಲಿ ಹಾಕಿಕೊಂಡು, ಬಿಳಿಯ ಸಾದಾ ಸೀರೆ ಉಟ್ಟುಕೊಂಡು ಸದಾ ಚಟುವಟಿಕೆಯಿಂದ ಓಡುತ್ತಿರುವ ಮಮತಾ ಬ್ಯಾನರ್ಜಿ ಸಾರ್ವಜನಿಕವಾಗಿ ಹೋದಾಗ ಜನರ ಜೊತೆ ಬೆರೆತು ಸಂಭ್ರಮಿಸುತ್ತಾರೆ. ಇತ್ತೀಚೆಗೆ ಬುಡಕಟ್ಟು ಜನಾಂಗದವರ ಜೊತೆ ಮಮತಾ ಬ್ಯಾನರ್ಜಿ ಡ್ಯಾನ್ಸ್ ಮಾಡುವ ವಿಡಿಯೋ ಕೂಡ ವೈರಲ್ ಆಗಿತ್ತು.
#WATCH | West Bengal CM Mamata Banerjee plays a drum as she arrives at the family function of West Bengal Governor La Ganesan, in Chennai, Tamil Nadu pic.twitter.com/SB03cBS3zk
— ANI (@ANI) November 3, 2022
ಇದನ್ನೂ ಓದಿ: Viral Video: ಕೊಲ್ಕತ್ತಾದಲ್ಲಿ ಡೋಲು ಬಾರಿಸಿ ದುರ್ಗಾ ಪೂಜೆಗೆ ಚಾಲನೆ ನೀಡಿದ ಸಿಎಂ ಮಮತಾ ಬ್ಯಾನರ್ಜಿ; ವಿಡಿಯೋ ವೈರಲ್
ಪಶ್ಚಿಮ ಬಂಗಾಳದಲ್ಲಿ ಯಾವುದೇ ರೀತಿಯ ಪೂಜೆ, ಉತ್ಸವಗಳು ನಡೆದರೂ ದೀದಿ ಖಂಡಿತ ಹೋಗುತ್ತಾರೆ. ಬಂಗಾಳದ ಕಾರ್ಯಕ್ರಮವೊಂದರಲ್ಲಿ ಮಮತಾ ಬ್ಯಾನರ್ಜಿ ಕೋಲಾಟ ಆಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ಪಶ್ಚಿಮ ಬಂಗಾಳ ರಾಜ್ಯಪಾಲ ಲಾ ಗಣೇಶನ್ ಅವರ ಕುಟುಂಬದ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಮತಾ ತಮಿಳುನಾಡಿಗೆ ತೆರಳಿದ್ದರು. ಅಲ್ಲಿ ಅವರಿಗೆ ಆತ್ಮೀಯ ಸ್ವಾಗತ ದೊರೆಯಿತು. ಸಾಂಪ್ರದಾಯಿಕ ವಾದ್ಯಗಳೊಂದಿಗೆ ಅವರನ್ನು ಆಹ್ವಾನಿಸಲಾಯಿತು. ಎಲ್ಲರಿಗೂ ನಮಸ್ಕರಿಸುತ್ತಾ ಮುಂದೆ ಹೋದ ದೀದಿ ಚಂಡೆ ವಾದ್ಯದವರ ಬಳಿ ಬಂದು ನಿಂತರು. ಸ್ವಲ್ಪ ಹೊತ್ತು ಅವರನ್ನು ಹುರಿದುಂಬಿಸಿದ ಮಮತಾ ಬ್ಯಾನರ್ಜಿ ತಾವು ಕೂಡ ಚಂಡೆ ಬಾರಿಸಲು ಆರಂಭಿಸಿದರು.
மணிப்பூர் ஆளுநர் இலா கணேசனின் இல்ல நிகழ்ச்சியில் பங்கேற்க வந்த மேற்கு வங்காள முதலமைச்சர் மம்தா பானர்ஜி செண்டை மேளம் வாசித்து உற்சாகத்தோடு நிகழ்ச்சியில் கலந்து கொண்டுள்ளார்.@News18TamilNadu @karthickselvaa pic.twitter.com/70sEPlKm5T
— Abinesh Arjunan (@The_Abinesh) November 3, 2022
ಈ ವೇಳೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಮನೆಗೂ ತೆರಳಿದ ಮಮತಾ ಬ್ಯಾನರ್ಜಿ 20 ನಿಮಿಷ ಅವರ ಕುಟುಂಬದವರ ಜೊತೆ ಕಾಲ ಕಳೆದಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಚೆನ್ನೈನಲ್ಲಿ ಭೇಟಿಯಾದ ಮಮತಾ ಬ್ಯಾನರ್ಜಿ, ಇದೊಂದು ಸೌಜನ್ಯದ ಭೇಟಿ. ಸ್ಟಾಲಿನ್ ನನ್ನ ಸಹೋದರನಿದ್ದಂತೆ. ಹೀಗಾಗಿ, ಅವರ ಮನೆಯಲ್ಲಿ ಕಾಫಿ ಕುಡಿದು ಬಂದಿದ್ದೇನೆ. ಇಬ್ಬರು ರಾಜಕೀಯ ನಾಯಕರು ಒಟ್ಟಿಗೆ ಇರುವಾಗ ನಾವು ಏನನ್ನಾದರೂ ಮಾತನಾಡಬಹುದು. ರಾಜಕೀಯಕ್ಕಿಂತ ಅಭಿವೃದ್ಧಿ ದೊಡ್ಡದು ಎಂದು ನಾನು ಭಾವಿಸುತ್ತೇನೆ. ಹೀಗಾಗಿ ನಾವು ರಾಜ್ಯದ ಅಭಿವೃದ್ಧಿ ಬಗ್ಗೆಯೂ ಚರ್ಚಿಸಬಹುದು. ಕೇವಲ ರಾಜಕೀಯ ಚರ್ಚೆ ನಡೆಯುತ್ತದೆ ಎಂದು ನೀವು ಭಾವಿಸಿದರೆ ಅದು ತಪ್ಪು ಎಂದಿದ್ದಾರೆ.