ನವದೆಹಲಿ: ಒಡಿಶಾ ಸಿಎಂ ನವೀನ್ ಪಟ್ನಾಯಕ್ (Naveen Patnaik) ಅವರ ಆರೋಗ್ಯ ಸ್ಥಿತಿ ಹಠಾತ್ ಕ್ಷೀಣಿಸುತ್ತಿದೆ. ಈ ಬಗ್ಗೆ ಚುನಾವಣಾ ಫಲಿತಾಂಶದ ನಂತರ ತನಿಖೆ ನಡೆಸಲು ವಿಶೇಷ ಸಮಿತಿ ರಚಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಬುಧವಾರ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ “ನಾನು ತುಂಬಾ ಆರೋಗ್ಯವಾಗಿದ್ದೇನೆ. ನಾನು ನಮ್ಮ ರಾಜ್ಯದ ಜನರ ಸೇವೆಯನ್ನು ಮುಂದುವರೆಸುತ್ತೇನೆ” ಎಂದು ಹೇಳಿದ್ದಾರೆ. ಹಾಗೇ, ನವೀನ್ ಪಟ್ನಾಯಕ್ ಅವರ ನಂತರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬುದರ ಕುರಿತೂ ಚರ್ಚೆಗಳು ನಡೆಯುತ್ತಿವೆ.
ಬಿಜು ಜನತಾ ದಳದ ಮುಖ್ಯಸ್ಥರಾದ ನವೀನ್ ಪಟ್ನಾಯಕ್ ದೇಶದ ಎರಡನೇ ಅತಿ ಹೆಚ್ಚು ಅವಧಿಯ ಮುಖ್ಯಮಂತ್ರಿಯಾಗಿದ್ದಾರೆ. ನವೀನ್ ಪಟ್ನಾಯಕ್ ಅವರ ಆರೋಗ್ಯ ದುರ್ಬಲ ಸ್ಥಿತಿಯಲ್ಲಿದೆ ಎಂದು ಹೇಳಲಾದ ಸಾಮಾಜಿಕ ಮಾಧ್ಯಮದ ವೀಡಿಯೊವನ್ನು ಪ್ರಸ್ತಾಪಿಸಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ಈ ಬಗ್ಗೆ ಮಾತನಾಡಿದ್ದರು. ಒಡಿಶಾದ ಬಾಲಸೋರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ಮೋದಿ, 77 ವರ್ಷದ ಮುಖ್ಯಮಂತ್ರಿ ನವೀನ್ ಬಾಬು ಅವರ ಆರೋಗ್ಯ ಹಠಾತ್ ಹದಗೆಟ್ಟಿದೆ. ಇದರ ಹಿಂದೆ ಯಾರದಾದರೂ ಷಡ್ಯಂತ್ರವಿದೆಯೇ ಎಂಬ ಅನುಮಾನವಿದೆ ಎಂದು ಹೇಳಿದ್ದರು. ಒಡಿಶಾ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸುವುದಾಗಿ ಪ್ರಧಾನಿ ಹೇಳಿದ್ದರು.
#WATCH | On PM Narendra Modi, Odisha CM Naveen Patnaik says, “I have done that (dialling PM Modi) often. The Prime Minister has said in recent public meetings that I am a good friend of his. So, if he heard these rumours and was concerned about it, was it not his duty to pick up… pic.twitter.com/OfMIERNYcC
— ANI (@ANI) May 30, 2024
ಇದನ್ನೂ ಓದಿ: ಸಿಎಂ ನವೀನ್ ಪಟ್ನಾಯಕ್ ಆರೋಗ್ಯದ ತನಿಖೆಗೆ ವಿಶೇಷ ಸಮಿತಿ ರಚನೆ; ಪ್ರಧಾನಿ ಮೋದಿ
ಇದಾದ ಬಳಿಕ ಪ್ರತಿಕ್ರಿಯಿಸಿದ ನವೀನ್ ಪಟ್ನಾಯಕ್, “ನಾನು ಪರಿಪೂರ್ಣವಾಗಿ ಆರೋಗ್ಯವಾಗಿದ್ದೇನೆ. ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿದ್ದೇನೆ. ನಾನು ಅವರ ಉತ್ತಮ ಸ್ನೇಹಿತ ಎಂದು ಅವರು ಈ ಹಿಂದೆ ಸಾರ್ವಜನಿಕವಾಗಿ ಹೇಳಿದ್ದಾರೆ. ಹಾಗಿದ್ದರೆ ನನ್ನ ಆರೋಗ್ಯದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದರ ಬದಲು ಫೋನ್ ಮಾಡಲು ವಿಚಾರಿಸಬಹುದಿತ್ತು. ಒಡಿಶಾ ಮತ್ತು ದೆಹಲಿಯ ಹಲವಾರು ಬಿಜೆಪಿ ನಾಯಕರು ನನ್ನ ಆರೋಗ್ಯದ ಬಗ್ಗೆ ವದಂತಿಗಳನ್ನು ಹರಡುತ್ತಿದ್ದಾರೆ” ಎಂದು ಟೀಕಿಸಿದ್ದರು.
#WATCH | On allegations by the opposition and former BJD leaders that “VK Pandian takes decisions on behalf of CM Patnaik”, Odisha CM Naveen Patnaik says, “…This is ridiculous and I have said it often before, this is an old allegation and it holds no weight.” pic.twitter.com/FTNZSoEqOe
— ANI (@ANI) May 30, 2024
ಈ ಹಿಂದೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ನವೀನ್ ಪಟ್ನಾಯಕ್ ಅವರ ಕೈ ನಡುಗುತ್ತಿರುವಂತೆ ಕಾಣುವ ವೀಡಿಯೊವನ್ನು ಹಂಚಿಕೊಂಡಿದ್ದರು. ನವೀನ್ ಪಟ್ನಾಯಕ್ ಅವರ ದೀರ್ಘಾವಧಿಯ ಸಹಾಯಕ ಮತ್ತು ಈಗ ಬಿಜೆಡಿಗೆ ಸೇರ್ಪಡೆಗೊಂಡ ಮಾಜಿ ಐಎಎಸ್ ಅಧಿಕಾರಿ ವಿ.ಕೆ ಪಾಂಡಿಯನ್ ಕೂಡ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದರು. ವಿ.ಕೆ ಪಾಂಡಿಯನ್ ಅವರು ಒಡಿಶಾ ರಾಜ್ಯ ಸರ್ಕಾರವನ್ನು ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಪದೇ ಪದೇ ಟೀಕೆ ಮಾಡುತ್ತಿದೆ.
ಇದನ್ನೂ ಓದಿ: ಮೋದಿಯವರು ಫೋನ್ ಮಾಡಿ ನನ್ನ ಆರೋಗ್ಯದ ಬಗ್ಗೆ ವಿಚಾರಿಸಬಹುದಿತ್ತು: ನವೀನ್ ಪಟ್ನಾಯಕ್
ವಿ.ಕೆ. ಪಾಂಡಿಯನ್ ಅವರೇ ಬಿಜೆಡಿಯಲ್ಲಿ ನವೀನ್ ಪಟ್ನಾಯಕ್ ಅವರ ಉತ್ತರಾಧಿಕಾರಿ ಎಂಬ ಚರ್ಚೆಗಳೂ ನಡೆದಿವೆ. ಈ ಬಗ್ಗೆ ANI ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ನವೀನ್ ಪಟ್ನಾಯಕ್, ವಿಕೆ ಪಾಂಡಿಯನ್ ಅವರನ್ನು ನನ್ನ “ಗೇಟ್ ಕೀಪರ್” ಮತ್ತು ನನ್ನ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ಆರೋಪಗಳಿವೆ. ಇದು ಹಾಸ್ಯಾಸ್ಪದವಾಗಿದೆ. ಇದು ಹಳೆಯ ಆರೋಪ ಮತ್ತು ಇದರಲ್ಲಿ ಸತ್ಯಾಂಶವಿಲ್ಲ. ವಿಕೆ ಪಾಂಡಿಯನ್ ನನ್ನ ಉತ್ತರಾಧಿಕಾರಿಯಲ್ಲ. ನನ್ನ ಉತ್ತರಾಧಿಕಾರಿ ಯಾರಾಗಬೇಕೆಂಬುದನ್ನು ಒಡಿಶಾದ ಜನರೇ ನಿರ್ಧರಿಸುತ್ತಾರೆ” ಎಂದು ನವೀನ್ ಪಟ್ನಾಯಕ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ