AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವೀನ್ ಪಟ್ನಾಯಕ್ ಮತ್ತೆ ಸಿಎಂ ಆದರೆ ತಕ್ಷಣ ಜನರಿಗೆ ಉಚಿತ ವಿದ್ಯುತ್​ ನೀಡುವ ಆದೇಶಕ್ಕೆ ಮೊದಲ ಸಹಿ

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ರಾಜ್ಯದ ಸಿಎಂ ಆಗಿ ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸಿದ ಬಳಿಕ ಜನರಿಗೆ ಉಚಿತವಾಗಿ ವಿದ್ಯುತ್ ನೀಡುವ ಯೋಜನೆಗೆ ಮೊದಲು ಸಹಿ ಹಾಕಲಿದ್ದಾರೆ ಎಂದು ಆಪ್ತ ಸಹಾಯಕ ಪಾಂಡಿಯನ್ ಸ್ಪಷ್ಟಪಡಿಸಿದ್ದಾರೆ.

ನವೀನ್ ಪಟ್ನಾಯಕ್ ಮತ್ತೆ ಸಿಎಂ ಆದರೆ ತಕ್ಷಣ ಜನರಿಗೆ ಉಚಿತ ವಿದ್ಯುತ್​ ನೀಡುವ ಆದೇಶಕ್ಕೆ ಮೊದಲ ಸಹಿ
ನವೀನ್ ಪಟ್ನಾಯಕ್
ನಯನಾ ರಾಜೀವ್
|

Updated on: May 16, 2024 | 8:05 AM

Share

ನವೀನ್​ ಪಟ್ನಾಯಕ್(Naveen Patnaik) ಮತ್ತೊಮ್ಮೆ ಒಡಿಶಾದ ಮುಖ್ಯಮಮತ್ರಿಯಾಗುತ್ತಿದ್ದಂತೆ ಜನರಿಗೆ ಉಚಿತ ವಿದ್ಯುತ್ ನೀಡುವ ಆದೇಶಕ್ಕೆ ಮೊದಲು ಸಹಿ ಹಾಕಲಿದ್ದಾರೆ ಎಂದು ಅವರ ಆಪ್ತ ಸಹಾಯಕ ವಿಕೆ ಪಾಂಡಿಯನ್ ಹೇಳಿದ್ದಾರೆ. ಅವರ ಮೊದಲ ಆದೇಶವು ಒಡಿಶಾದ 90 ಪ್ರತಿಶತ ಜನಸಂಖ್ಯೆಗೆ ಉಚಿತ ವಿದ್ಯುತ್ ಪೂರೈಕೆಯಾಗುವ ಕುರಿತು ಇರುತ್ತದೆ ಎಂದು ಹೇಳಿದ್ದಾರೆ.

ದಿಯೋಗಢ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಎಂ ಜೊತೆಗಿನ ಸಂಭಾಷಣೆಯ ಕಿರು ವೀಡಿಯೊವನ್ನು ಹಂಚಿಕೊಂಡ ಪಾಂಡಿಯನ್, ಜಗನ್ನಾಥ ಮತ್ತು ಜನರ ಆಶೀರ್ವಾದವು ನವೀನ್ ಪಟ್ನಾಯಕ್ ಅವರನ್ನು ಜೂನ್ 9ರಂದು ಮತ್ತೆ ಪ್ರಮಾಣವಚನ ಸ್ವೀಕರಿಸುವಂತೆ ಮಾಡುತ್ತದೆ.

ಮೊದಲ ಆದೇಶವು ಒಡಿಶಾದ 90 ಪ್ರತಿಶತ ಜನಸಂಖ್ಯೆಗೆ ಉಚಿತ ವಿದ್ಯುತ್ ಸರಬರಾಜು ಮತ್ತು ಸರ್ಕಾರಿ ನೌಕರರು ಸೇರಿದಂತೆ ಎಲ್ಲರಿಗೂ ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆ (ಬಿಎಸ್‌ಕೆವೈ) ವಿಸ್ತರಣೆಯಾಗಿದೆ ಎಂದರು. ರಾಜ್ಯ ಬಿಜೆಪಿ ನಾಯಕ ಸಮೀರ್ ಮೊಹಂತಿ ಅವರು ಬಿಜೆಡಿಯಿಂದ ಉಚಿತ ವಿದ್ಯುತ್ ಸರಬರಾಜು ಭರವಸೆಯ ಬಗ್ಗೆ ಸ್ಪಷ್ಟೀಕರಣವನ್ನು ಕೋರಿದ ನಂತರ ಸಿಎಂ ಮತ್ತು ಪಾಂಡಿಯನ್ ಅವರ ಈ ಕಿರು ವೀಡಿಯೊ ಬಂದಿದೆ.

ಮತ್ತಷ್ಟು ಓದಿ: ಲೋಕಸಭಾ ಚುನಾವಣೆ 2024: ಪಶ್ಚಿಮ ಬಂಗಾಳ ಜನತೆಗೆ 5 ಭರವಸೆಗಳ ಕೊಟ್ಟ ಮೋದಿ

ಎಲ್ಲರಿಗೂ ಉಚಿತ ವಿದ್ಯುತ್ ನೀಡುವುದಾಗಿ ಸುಳ್ಳು ಭರವಸೆ ನೀಡುವ ಮೂಲಕ ಬಿಜೆಡಿ ಜನರನ್ನು ವಂಚಿಸಿದೆ ಎಂದು ಆರೋಪಿಸಿರುವ ಮೊಹಾಂತಿ, ಉಚಿತ ವಿದ್ಯುತ್ ಪೂರೈಕೆಯ ಭರವಸೆಯಿಂದ ಎಷ್ಟು ಜನರಿಗೆ ಪ್ರಯೋಜನವಾಗಲಿದೆ ಎಂಬುದನ್ನು ಬಿಜೆಡಿ ಸ್ಪಷ್ಟಪಡಿಸಲಿ ಎಂದಿದ್ದರು.

ಬಿಜೆಡಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಂಗಳಿಗೆ 100 ಯೂನಿಟ್‌ಗಿಂತ ಕಡಿಮೆ ಬಳಕೆ ಮಾಡುವ ಎಲ್ಲಾ ಮನೆಗಳಿಗೆ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದೆ. 100-150 ಯೂನಿಟ್‌ಗಳ ನಡುವೆ ಬಳಸುವ ಕುಟುಂಬಗಳಿಗೆ 50 ಯೂನಿಟ್‌ಗಳು ಉಚಿತವಾಗಿರುತ್ತದೆ.

ಬಹುತೇಕ ಇಡೀ ಗ್ರಾಮೀಣ ಜನತೆ ಈ ಉಪಕ್ರಮಗಳಿಂದ ಪ್ರಯೋಜನ ಪಡೆಯುತ್ತಾರೆ. ಇದು ನಗರ ಪ್ರದೇಶದ ಕುಟುಂಬಗಳಿಗೂ ಪ್ರಯೋಜನವನ್ನು ನೀಡುತ್ತದೆ. ಈ ಯೋಜನೆಯು ಒಡಿಶಾದ 85-90 ಪ್ರತಿಶತ ಕುಟುಂಬಗಳನ್ನು ಒಳಗೊಳ್ಳುತ್ತದೆ. ರೈತರಿಗೆ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂಬುದನ್ನು ಪ್ರಣಾಳಿಕೆಯಲ್ಲಿ ಬರೆಯಲಾಗಿದೆ. ಮೇ13ರಂದು ಒಡಿಶಾದಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು, ಜೂನ್ 4ರಂದು ಫಲಿತಾಂಶ ಹೊರಬರಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ