ನವದೆಹಲಿ, ನವೆಂಬರ್ 6: ಕಿರುತೆರೆ ಧಾರಾವಾಹಿ ‘ಅನುಪಮಾ’ದಲ್ಲಿ ರೂಪಾಲಿ ಗಂಗೂಲಿಯವರ ಪಾತ್ರ ಬಹಳ ಜನಮನ್ನಣೆ ಪಡೆದಿದೆ. ‘ಅನುಪಮಾ’ ದೀಪಾವಳಿ (Anupamaa style diwali) ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಕ್ಕೆ ಖುದ್ದು ಪ್ರಧಾನಿ ನರೇಂದ್ರ ಮೋದಿ (Narendra Modi) ಕೂಡ ಫಿದಾ ಆಗಿದ್ದಾರೆ. ಇದರೊಂದಿಗೆ, ಅವರೂ ‘ಅನುಪಮಾ’ ಅಭಿಮಾನಿಯಾಗಿದ್ದಾರೆ ಮತ್ತು ‘ಅನುಪಮಾ’ ರೀತಿಯಲ್ಲಿ ಜನರು ದೀಪಾವಳಿಯನ್ನು ಆಚರಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ವಿಚಾರವಾಗಿ ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದ್ದಲ್ಲದೆ, ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ‘ಅನುಪಮಾ’ ದೀಪಾವಳಿಯ ವಿಶೇಷತೆ ಏನು? ಇಲ್ಲಿದೆ ವಿವರ.
ಈ ವೀಡಿಯೋ, ದೀಪಾವಳಿ ಹಬ್ಬದ ಸಮಯದಲ್ಲಿ ಭಾರತೀಯ ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸಲು ಮತ್ತು ದೇಶದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಜಗತ್ತಿಗೆ ಪ್ರಚುರಪಡಿಸುವ ಸರ್ಕಾರದ ಪ್ರಯತ್ನಗಳಿಗೆ ಸಂಬಂಧಿಸಿದ್ದಾಗಿದೆ. ವಿಡಿಯೋದಲ್ಲಿ ‘ಅನುಪಮಾ’ ದೀಪಾವಳಿ ತಯಾರಿಯಲ್ಲಿ ನಿರತರಾಗಿದ್ದಾರೆ. ಬೂಂದಿ ಲಡ್ಡುಗಳನ್ನು ಮಾಡುತ್ತಾ ತನ್ನ ಮನೆಯಲ್ಲಿ ದೀಪಾವಳಿಯ ತಯಾರಿಯ ಬಗ್ಗೆ ಎಲ್ಲರಿಗೂ ಹೇಳುತ್ತಿದ್ದಳು. ಇದರೊಂದಿಗೆ, ಅವರು ಭಾರತದ ಶಕ್ತಿಯ ಬಗ್ಗೆ ಜನರಿಗೆ ಹೇಳುತ್ತಿದ್ದಾರೆ, ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೊದ ಕೊನೆಯಲ್ಲಿ ಹೊಗಳಿದ್ದಾರೆ.
‘ಅನುಪಮಾ’ ಅವರ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ. ಇದರಲ್ಲಿ ನೀವು ಕೇಂದ್ರ ಸರ್ಕಾರದ ‘ವೋಕಲ್ ಫಾರ್ ಲೋಕಲ್’, ‘ಮೇಕ್ ಇನ್ ಇಂಡಿಯಾ’, ‘ಡಿಜಿಟಲ್ ಇಂಡಿಯಾ’ ಮತ್ತು ‘ಆತ್ಮನಿರ್ಭರ್ ಭಾರತ್’ಗಳ ಒಂದು ನೋಟವನ್ನು ಪಡೆಯುತ್ತೀರಿ.
ಇದನ್ನೂ ಓದಿ: ಇರಾನ್ ಅಧ್ಯಕ್ಷರ ಜತೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ: ಇಸ್ರೇಲ್ – ಹಮಾಸ್ ಸಂಘರ್ಷದ ಬಗ್ಗೆ ಚರ್ಚೆ
ಈ ವೀಡಿಯೊದಲ್ಲಿ, ಅನುಪಮಾ ಅವರು ದೀಪಾವಳಿಯಂದು ಧರಿಸುವ ಹೊಸ ಬಟ್ಟೆ ಮತ್ತು ಶೂಗಳ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅವರ ಸ್ಮಾರ್ಟ್‌ಫೋನ್ ಕೂಡ ಭಾರತದಲ್ಲಿ ತಯಾರಿಸಲ್ಪಟ್ಟಿದೆ. ಆಕೆ ಅವುಗಳನ್ನು ಖರೀದಿಸಿದ ನಂತರ ಯುಪಿಐ ಮೂಲಕ ಪಾವತಿ ಮಾಡುತ್ತಾರೆ.
The #VocalForLocal movement is getting great momentum across the country. pic.twitter.com/9lcoGbAvoi
— Narendra Modi (@narendramodi) November 6, 2023
ದೇಶದ ಜನರು ತಮ್ಮ ಹಬ್ಬಗಳನ್ನು ಈ ರೀತಿ ಆಚರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಅವರು ದೀಪಾವಳಿಗೆ ‘ವೋಕಲ್ ಫಾರ್ ಲೋಕಲ್’ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು ಎಂದೂ ಮನವಿ ಮಾಡಿದ್ದಾರೆ. ಸಾಮಾನ್ಯ ಜನರು ತಮ್ಮ ಸೆಲ್ಫಿಗಳನ್ನು ಅಂತಹ ಉತ್ಪನ್ನಗಳು ಅಥವಾ ಕುಶಲಕರ್ಮಿಗಳೊಂದಿಗೆ ‘ನಮೋ ಆಪ್’ನಲ್ಲಿ ಹಂಚಿಕೊಳ್ಳಬಹುದಾಗಿದೆ. ಇದರಲ್ಲಿ ಆಯ್ದ ಕೆಲವನ್ನು ಪ್ರಧಾನಿಯವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:25 pm, Mon, 6 November 23