ಉತ್ತರಾಖಂಡದಲ್ಲಿ ಬದುಕು ಮತ್ತು ಮರಣಾನಂತರದ ಬದುಕು ಸುಧಾರಿಸುವ ಭರವಸೆ ಘೋಷಿಸಿದ ಕೇಜ್ರಿವಾಲ್
ಚುನಾವಣೆ ಕಾವು ಹೆಚ್ಚಿರುವ ಸಂದರ್ಭದಲ್ಲಿ ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಗುಡುಗಿದ ಕೇಜ್ರಿವಾಲ್, "ನಾವು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಮ್ಮನ್ನು ನೋಡುತ್ತಿಲ್ಲ. ನಾವು ಜನರಲ್ಲಿ ನಮ್ಮನ್ನು ನೋಡುತ್ತೇವೆ. ಅವರು ಇಲ್ಲಿಯವರೆಗೆ ಭ್ರಷ್ಟಾಚಾರದಲ್ಲಿ ಮಾತ್ರ ತೊಡಗಿಸಿಕೊಂಡಿದ್ದಾರೆ ಎಂದಿದ್ದಾರೆ.
ದೆಹಲಿ: 2022 ರಲ್ಲಿ ತನ್ನ ಮುಂದಿನ ಸರ್ಕಾರವನ್ನು ಆಯ್ಕೆ ಮಾಡಲು ಸಜ್ಜಾಗುತ್ತಿರುವ ಉತ್ತರಾಖಂಡದಲ್ಲಿ (Uttarakhand) ಅರವಿಂದ ಕೇಜ್ರಿವಾಲ್ (Arvind Kejriwal) ಇಂದು ತಮ್ಮ ದೆಹಲಿಯ ಸಾಧನೆಯನ್ನು ವಿವರಿಸಿದ್ದಾರೆ ಮತ್ತು “ಜೀವನ ಮತ್ತು ಮರಣಾನಂತರದ ಜೀವನಕ್ಕಾಗಿ” ಕೆಲವು ದೊಡ್ಡ ಭರವಸೆಗಳನ್ನು ನೀಡಿದ್ದಾರೆ. “ಹಮೇ ವೋಟ್ ದೋ… ಹಮ್ ಆಪ್ಕಾ ಲೋಕ್ ಭಿ ಸುಧಾರ್ ದೇಂಗೆ ಔರ್ ಪರ್ಲೋಕ್ ಭಿ… (ನಮಗೆ ಮತ ನೀಡಿ, ನಿಮ್ಮ ಜೀವನ ಮತ್ತು ಮರಣಾನಂತರದ ಜೀವನವನ್ನು ನಾವು ಸುಧಾರಿಸುತ್ತೇವೆ)” ಎಂದು 53 ವರ್ಷದ ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ. ಎಎಪಿ (AAP) ಅಧಿಕಾರಕ್ಕೇರಿದರೆ “ದೇವರ ನಾಡು” ಅಥವಾ “ದೇವಭೂಮಿ” ಎಂದು ಕರೆಯಲಾಗುವ ಉತ್ತರಾಖಂಡಕ್ಕೆ ಉಚಿತ ತೀರ್ಥ ಯಾತ್ರೆ ನೀಡುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ. ನಾನು ರಾಮಲಲ್ಲಾನ ದರ್ಶನಕ್ಕಾಗಿ ಇತ್ತೀಚೆಗೆ ಅಯೋಧ್ಯೆಗೆ ಹೋಗಿದ್ದೆ. ರಾಮ್ ಲಲ್ಲಾ ಭೇಟಿ ಮಾಡುವ ಅವಕಾಶವನ್ನು ಪಡೆಯಲು ಎಲ್ಲರಿಗೂ ಸಹಾಯ ಮಾಡುವ ಸಾಮರ್ಥ್ಯಕ್ಕಾಗಿ ನಾನು ಪ್ರಾರ್ಥಿಸಿದೆ. ದೆಹಲಿಯಲ್ಲಿ ನಾವು ಈಗಾಗಲೇ ಅಂತಹ ಯೋಜನೆಯನ್ನು ಪರಿಚಯಿಸಿದ್ದೇವೆ. ನಾವು ಇಲ್ಲಿಯೂ ಆಯ್ಕೆಯಾದರೆ ಅಯೋಧ್ಯೆಗೆ ಉಚಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳುತ್ತೇವೆ. ಮುಸ್ಲಿಂ ಸಹೋದರರಿಗೆ ನಾವು ಅಜ್ಮೀರ್ ಷರೀಫ್‌ಗೆ ಪ್ರಯಾಣವನ್ನು ಏರ್ಪಡಿಸುತ್ತೇವೆ ಮತ್ತು ಸಿಖ್ ಸಹೋದರರಿಗೆ ಪವಿತ್ರ ಕರ್ತಾರ್‌ಪುರ ಕಾರಿಡಾರ್‌ಗೆ ಪ್ರಯಾಣದ ವ್ಯವಸ್ಥೆ ಮಾಡುತ್ತೇವೆ ಎಂದು ಕೇಜ್ರಿವಾಲ್ ಹೇಳಿದರು. ಉಚಿತ ವಿದ್ಯುತ್ ಮತ್ತು ಉದ್ಯೋಗ ಖಾತರಿ ಯೋಜನೆಯು ಅವರ ಚುನಾವಣಾ ಭರವಸೆಗಳ ಪಟ್ಟಿಯಲ್ಲಿದೆ. ಚುನಾವಣೆ ಕಾವು ಹೆಚ್ಚಿರುವ ಸಂದರ್ಭದಲ್ಲಿ ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಗುಡುಗಿದ ಕೇಜ್ರಿವಾಲ್, “ನಾವು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಮ್ಮನ್ನು ನೋಡುತ್ತಿಲ್ಲ. ನಾವು ಜನರಲ್ಲಿ ನಮ್ಮನ್ನು ನೋಡುತ್ತೇವೆ. ಅವರು ಇಲ್ಲಿಯವರೆಗೆ ಭ್ರಷ್ಟಾಚಾರದಲ್ಲಿ ಮಾತ್ರ ತೊಡಗಿಸಿಕೊಂಡಿದ್ದಾರೆ ಎಂದಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಐದು ರಾಜ್ಯಗಳ ಚುನಾವಣೆಗೆ ಮುನ್ನ ತನ್ನ ರಾಷ್ಟ್ರೀಯ ಹೆಜ್ಜೆಗುರುತನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವ ಎಎಪಿ, ಕೇಜ್ರಿವಾಲ್ ಅವರ ಆಟೋ ಸವಾರಿಯ ಚಿತ್ರಗಳನ್ನು ಸಹ ಟ್ವೀಟ್ ಮಾಡಿದೆ.
हरिद्वार की पावन धरती पर देवभूमि के अपने भाइयों-बहनों के साथ रोड-शो | LIVE https://t.co/VzqQg8PWJF
— Arvind Kejriwal (@ArvindKejriwal) November 21, 2021
ತಮ್ಮ ದೆಹಲಿಯ ಸಾಧನೆಯನ್ನು ವಿವರಿಸುತ್ತಾ ಕೇಜ್ರಿವಾಲ್, ರಾಜ್ಯದ ಆಟೋ ಮತ್ತು ಟ್ಯಾಕ್ಸಿ ಚಾಲಕರನ್ನು ಉದ್ದೇಶಿಸಿ ಮಾತನಾಡಿದ್ದು,”2020 ರ ದೆಹಲಿ ಚುನಾವಣೆಯಲ್ಲಿ, ನಾನು ಕೆಲಸ ಮಾಡದಿದ್ದರೆ ನನಗೆ ಮತ ಹಾಕಬೇಡಿ ಎಂದು ಹೇಳಿದ್ದೆ. ಯಾರೂ ಇದನ್ನು ಚುನಾವಣೆಯ ಮೊದಲು ಹೇಳಲು ಧೈರ್ಯ ಮಾಡುವುದಿಲ್ಲ. ಇಂದು ನಮಗೆ ಅವಕಾಶ ಕೊಡಿ ಎಂದು ನಾನು ಕೇಳುತ್ತೇನೆ, ನೀವು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಮತ ಹಾಕುವುದನ್ನು ನಿಲ್ಲಿಸಿ.
ರಾಷ್ಟ್ರ ರಾಜಧಾನಿಯಲ್ಲಿ, ಆಟೋ ಚಾಲಕರು “ನನ್ನನ್ನು ತಮ್ಮ ಸಹೋದರ ಎಂದು ಪರಿಗಣಿಸುತ್ತಾರೆ” ಎಂದು ಹೇಳಿದ ಅವರು ತಮ್ಮ ಸರ್ಕಾರವು 1.5 ಲಕ್ಷ ಆಟೋ ಚಾಲಕರ ಖಾತೆಗಳಿಗೆ ₹ 150 ಕೋಟಿಯನ್ನು ವರ್ಗಾಯಿಸಿದೆ ಎಂದು ಹೇಳಿದ್ದಾರೆ. “ಇಡೀ ದೇಶದಲ್ಲಿ, ಜನರ ಬಗ್ಗೆ ಕಾಳಜಿ ವಹಿಸುವ ಇಂಥಾ ಯಾವುದೇ ಪಕ್ಷವಿಲ್ಲ ಎಂದು ಅವರು ಹೇಳಿದ್ದಾರೆ.
ನಮ್ಮ ಪಕ್ಷವು “ವ್ಯವಸ್ಥಿತ ಬದಲಾವಣೆಯನ್ನು ತರುತ್ತದೆ, ಮುಖರಹಿತ ಆರ್‌ಟಿಒ ಸೇವೆಗಳನ್ನು ಪರಿಚಯಿಸುತ್ತದೆ, ಅಪಘಾತ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನೀಡುತ್ತದೆ ಮತ್ತು ಫಿಟ್‌ನೆಸ್ ಶುಲ್ಕವನ್ನು ನಿಲ್ಲಿಸುತ್ತದೆ” ಎಂದು ಕೇಜ್ರಿವಾಲ್ ಭರವಸೆ ನೀಡಿದರು.
ಇದನ್ನೂ ಓದಿ: ಸಮಯವೇ ಉತ್ತರಿಸುತ್ತದೆ: ಉತ್ತರಪ್ರದೇಶ ಚುನಾವಣೆ ಮುಂಚಿತವಾಗಿ ಮೈತ್ರಿ ಬಗ್ಗೆ ಒವೈಸಿ ಪ್ರತಿಕ್ರಿಯೆ