IRCTC ಹೊಸ ರೂಲ್ಸ್; ಇನ್ಮುಂದೆ ವೇಟಿಂಗ್‌ ಲಿಸ್ಟ್‌ ಪ್ರಯಾಣಿಕರು ರೈಲಿನ ಎಸಿ, ಸ್ಲೀಪರ್‌ ಕೋಚ್‌ನಲ್ಲಿ ಪ್ರಯಾಣಿಸುವಂತಿಲ್ಲ

ಭಾರತೀಯ ರೈಲ್ವೇ ದೇಶದ ಅತಿದೊಡ್ಡ ಸಾರಿಗೆ ವ್ಯವಸ್ಥೆಯಾಗಿದ್ದು, ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ರೈಲಿನಲ್ಲಿಯೇ ಪ್ರಯಾಣಿಸುತ್ತಾರೆ. ಇದೀಗ ಐಆರ್‌ಸಿಟಿಸಿ ರೈಲು ಪ್ರಯಾಣಿಕರಿಗೆ ಹೊಸ ನಿಯಮವೊಂದನ್ನು ಜಾರಿಗೊಳಿಸಿದ್ದು, ಇನ್ನು ಮುಂದೆ ವೇಟಿಂಗ್‌ ಲಿಸ್ಟ್‌ ಪ್ರಯಾಣಿಕರು ಎಸಿ ಹಾಗೂ ಸ್ಲೀಪರ್‌ ಕೋಚ್‌ಗಳನ್ನು ಪ್ರಯಾಣಿಸುವಂತಿಲ್ಲ ಎಂದು ಹೇಳಿದೆ. ಮೇ 1, 2025 ರಿಂದ ಈ ರೂಲ್ಸ್‌ ಜಾರಿಗೆ ಬಂದಿದ್ದು, ನಿಯಮ ಉಲ್ಲಂಘಿಸಿದ ಪ್ರಯಾಣಿಕರಿಗೆ ಭಾರೀ ಮೊತ್ತದ ದಂಡ ಬೀಳಲಿದೆ.

IRCTC ಹೊಸ ರೂಲ್ಸ್; ಇನ್ಮುಂದೆ ವೇಟಿಂಗ್‌ ಲಿಸ್ಟ್‌ ಪ್ರಯಾಣಿಕರು ರೈಲಿನ ಎಸಿ, ಸ್ಲೀಪರ್‌ ಕೋಚ್‌ನಲ್ಲಿ ಪ್ರಯಾಣಿಸುವಂತಿಲ್ಲ
ಐಆರ್‌ಸಿಟಿಸಿ ಹೊಸ ನಿಯಮ
Image Credit source: Getty Images
Edited By:

Updated on: May 05, 2025 | 11:18 AM

ಬಹುತೇಕ ಹೆಚ್ಚಿನವರು ರೈಲು (Train) ಪ್ರಯಾಣವನ್ನೇ ಇಷ್ಟಪಡುತ್ತಾರೆ. ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುವ ಕಾರಣ ಭಾರತೀಯ ರೈಲ್ವೆ (Indian Railway) ರೈಲು ಪ್ರಯಾಣವನ್ನು ಸುಗಮಗೊಳಿಸುವ ಸಲುವಾಗಿ ಒಂದಷ್ಟು ಬದಲಾವಣೆಗಳನ್ನು, ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸುತ್ತಿರುತ್ತವೆ. ಇದೀಗ ಭಾರತೀಯ  ಭಾರತೀಯ ರೈಲ್ವೆ ಮೇ 1, 2025 ರಿಂದ ಹೊಸ ನಿಯಮವೊಂದನ್ನು (New Rules) ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ ಇನ್ಮುಂದೆ ವೇಟಿಂಗ್‌ ಲಿಸ್ಟ್‌ ಪ್ರಯಾಣಿಕರು ಎಸಿ ಹಾಗೂ ಸ್ಲೀಪರ್‌ ಕೋಚ್‌ನಲ್ಲಿ ಪ್ರಯಾಣಿಸುವಂತಿಲ್ಲ. ಬದಲಿಗೆ ಸಾಮಾನ್ಯ ಕೋಚ್‌ಗಳಲ್ಲಿ ಮಾತ್ರ ಪ್ರಯಾಣಿಸಬಹುದು.  ಈ ಹೊಸ ನಿಯಮ ದೃಢೀಕೃತ ಟಿಕೆಟ್‌ ಹೊಂದಿರುವವರಿಗೆ ದಟ್ಟಣೆಯನ್ನು ತಪ್ಪಿಸಲು ಹಾಗೂ ಉತ್ತಮ ಸೌಕರ್ಯಗಳನ್ನು ಒದಗಿಸುವ ಮೂಲಕ ಅವರ ಪ್ರಯಾಣದ ಅನುಭವವನ್ನು ಉತ್ತಮ ಗೊಳಿಸುವ ಗುರಿಯನ್ನು ಹೊಂದಿದೆ.

ಐಆರ್‌ಸಿಟಿಸಿ ಹೊಸ ನಿಯಮ:

ಈ ಮೊದಲು ಆನ್‌ಲೈನ್‌ನಲ್ಲಿ ಅಥವಾ ಕೌಂಟರ್‌ನಲ್ಲಿ ಖರೀದಿಸಲಾದ ವೇಟಿಂಗ್ ಲಿಸ್ಟ್ ಟಿಕೆಟ್‌ಗಳನ್ನು ಹೊಂದಿರುವ ಪ್ರಯಾಣಿಕರು ಎಸಿ ಹಾಗೂ ಸ್ಲೀಪರ್‌ ಕೋಚ್‌ಗಳಲ್ಲಿಯೂ ಪ್ರಯಾಣಿಸುತ್ತಿದ್ದರು. ಆದರೆ ಐಆರ್‌ಸಿಟಿಸಿ ಮೇ 1 ರಿಂದ ಹೊಸ ನಿಯಮವೊಂದನ್ನು ಜಾರಿಗೊಳಿಸಿದ್ದು, ಈ ನಿಯಮದ ಪ್ರಕಾರ ಇನ್ನು ಮುಂದೆ ವೇಟಿಂಗ್‌ ಲಿಸ್ಟ್‌ ಪ್ರಯಾಣಿಕರಿಗೆ ಎಸಿ, ಸ್ಲೀಪರ್‌ ಕೋಚ್‌ನಲ್ಲಿ ಪ್ರಯಾಣಿಸಲು ಅವಕಾಶವಿಲ್ಲ. ಬದಲಿಗೆ ವೇಟಿಂಗ್‌ ಲಿಸ್ಟ್‌ ಪ್ರಯಾಣಿಕರು ಸಾಮಾನ್ಯ ಕೋಚ್‌ಗಳಲ್ಲಿ ಮಾತ್ರ ಪ್ರಯಾಣಿಸಬೇಕು ಎಂದು ಟೈಮ್ಸ್‌ ಆಪ್‌ ಇಂಡಿಯಾ ವರದಿ ತಿಳಿಸಿದೆ.

ಇದನ್ನೂ ಓದಿ: ದಕ್ಷಿಣ ಭಾರತದ ಸ್ಟೈಲ್​​ನಲ್ಲಿ ಕಾಂಗರೂ ಬಿರಿಯಾನಿ, ಮಾಡುವ ವಿಧಾನ ಇಲ್ಲಿದೆ ನೋಡಿ

ಇದನ್ನೂ ಓದಿ
ದಕ್ಷಿಣ ಭಾರತದ ಸ್ಟೈಲ್​​ನಲ್ಲಿ ಕಾಂಗರೂ ಬಿರಿಯಾನಿ
ಹಾಲನ್ನು ಕುಡಿಯುವ ಮೊದಲು ಕುದಿಸುವ ಅಗತ್ಯ ಇದೆಯೇ?
ಅಹಂಕಾರದ ಮಾತುಗಳಿಂದ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ
ಈ ಕಾರಣದಿಂದಲೇ ಪರೀಕ್ಷೆಯಲ್ಲಿ ಹೆಣ್ಣು ಮಕ್ಕಳು ಫಸ್ಟ್ ಬರುವುದಂತೆ

ನಿಯಮ ಉಲ್ಲಂಘಿಸಿದರೆ ದಂಡ:

ವೇಟಿಂಗ್‌ ಲಿಸ್ಟ್‌ ಪ್ರಯಾಣಿಕರಿಗೆ ಎಸಿ, ಸ್ಲೀಪಿಂಗ್‌ ಕೋಚ್‌ಗಳಲ್ಲಿ ಪ್ರಯಾಣಿಸಲು ಅವಕಾಶವಿಲ್ಲ. ಒಂದು ವೇಳೆ ಪ್ರಯಾಣಿಕರು ಈ ನಿಯಮವನ್ನು ಉಲ್ಲಂಘಿಸಿದರೆ ದಂಡ ಪಾವತಿ ಮಾಡಬೇಕು. ಹೌದು ಈ ನಿಯಮವನ್ನು ಉಲ್ಲಂಘಿಸುವ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಯಿಂಟ್‌ನಿಂದ ಮುಂದಿನ ನಿಲ್ದಾಣಕ್ಕೆ ಶುಲ್ಕದ ಜೊತೆಗೆ ಸ್ಲೀಪರ್ ಕ್ಲಾಸ್‌ನಲ್ಲಿ ಪ್ರಯಾಣಿಸುವವರಿಗೆ  250 ಮತ್ತು AC ಕ್ಲಾಸ್‌ನಲ್ಲಿ ಪ್ರಯಾಣಿಸುವವರಿಗೆ 440 ವರೆಗೆ ದಂಡ ವಿಧಿಸಬಹುದು.ಇನ್ನೂ ಟಿಟಿಇಗಳಿಗೆ ಈ ನಿಯಮಗಳನ್ನು ಕಟ್ಟುನಿಟ್ಟಾಗಿ  ಪಾಲಿಸುವಂತೆ ಸೂಚಿಸಲಾಗಿದೆ.

ಈ ಹೊಸ ನಿಯಮ ದೃಢೀಕೃತ ಟಿಕೆಟ್‌ಗಳನ್ನು ಹೊಂದಿರುವ ಪ್ರಯಾಣಿಕರಿಗೆ ರೈಲಿನಲ್ಲಿ ಉಂಟಾಗುವ ದಟ್ಟಣೆಯನ್ನು ಕಡಿಮೆ ಮಾಡುವ ಮತ್ತು ಉತ್ತಮ ವಸತಿ ಸೌಕರ್ಯಗಳನ್ನು ಒದಗಿಸುವ ಮೂಲಕ ಆರಾಮದಾಕ ಪ್ರಯಾಣದ ಅನುಭವವನ್ನು ಪಡೆಯುವ ಗುರಿಯನ್ನು ಹೊಂದಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:42 pm, Sat, 3 May 25

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us