ದೆಹಲಿಯ ಅಲಿಪುರ್​​ನಲ್ಲಿ ಗೋಡೆ ಕುಸಿದು ಐವರು ದುರ್ಮರಣ; 9 ಮಂದಿಗೆ ಗಾಯ

ಮಾಧ್ಯಮಗಳ ವರದಿ ಪ್ರಕಾರ 14 ಮಂದಿಯನ್ನು ಅವಶೇಷಗಳ ಅಡಿಯಿಂದ ತೆಗೆಯಲಾಗಿದೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇದರಲ್ಲಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ.

ದೆಹಲಿಯ ಅಲಿಪುರ್​​ನಲ್ಲಿ ಗೋಡೆ ಕುಸಿದು ಐವರು ದುರ್ಮರಣ; 9 ಮಂದಿಗೆ ಗಾಯ
ದೆಹಲಿಯಲ್ಲಿ ಗೋಡೆ ಕುಸಿತ
Edited By: ರಶ್ಮಿ ಕಲ್ಲಕಟ್ಟ

Updated on: Jul 15, 2022 | 6:51 PM

ದೆಹಲಿ: ದೆಹಲಿಯ (Delhiಅಲಿಪುರ್​​ನಲ್ಲಿ (Alipur) ನಿರ್ಮಾಣ ಹಂತದಲ್ಲಿರುವ ವೇರ್​​ಹೌಸ್​​ನ ಗೋಡೆ ಕುಸಿದು (wall collapses) 5 ಮಂದಿ ಸಾವಿಗೀಡಾಗಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ 14 ಮಂದಿಯನ್ನು ಅವಶೇಷಗಳ ಅಡಿಯಿಂದ ತೆಗೆಯಲಾಗಿದೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇದರಲ್ಲಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಅಲಿಪುರದ ಚೌಹಾನ್ ಧರಂಕಥಾ ಬಳಿ ಬಾಕೌಲಿ ಗ್ರಾಮದಲ್ಲಿ ನಡೆದಿದೆ. ಅವಶೇಷಗಳನ್ನು ಅಲ್ಲಿಂದ ತೆರವು ಮಾಡಲಾಗಿದೆ. ಈ ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅತೀವ ದುಃಖ ವ್ಯಕ್ತಪಡಿಸಿದ್ದಾರೆ. ದೆಹಲಿಯ ಅಲಿಪುರದಲ್ಲಿ ನಡೆದ ದುರಂತ ಅತೀವ ನೋವುಂಟು ಮಾಡಿದೆ. ಈ ದುರಂತದಲ್ಲಿ ಸಾವಿಗೀಡಾದವರಿಗೆ ಸಂತಾಪಗಳು, ಗಾಯಗೊಂಡವರು ಶೀಘ್ರದಲ್ಲೇ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.


ಇದಕ್ಕಿಂತ ಮೊದಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಾವಿಗೀಡಾದವರಿಗೆ ಸಂತಾಪ ಸೂಚಿಸಿದ್ದು ಜಿಲ್ಲಾಡಳಿ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ ಎಂದು ಹೇಳಿದ್ದಾರೆ.ವರದಿಗಳ ಪ್ರಕಾರ ರಕ್ಷಣಾ ಕಾರ್ಯ ಮುಂದುವರಿದಿದ್ದು, ಇನ್ನೂ ಕೆಲವರು ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ.

Published On - 6:37 pm, Fri, 15 July 22

Web contact

TV9 Kannada

Read More
Follow Us