ಪ್ರಧಾನಿ ಮೋದಿಯರ ನಾಯಕತ್ವದಲ್ಲಿ ನಂಬಿಕೆಯಿಡೋಣ, ಅವರೊಂದಿಗೆ ನಿಲ್ಲೋಣ: ಶಿವಸೇನೆ ಮುಖಂಡ ಸಂಜಯ್ ರಾವತ್

| Updated By: ಡಾ. ಭಾಸ್ಕರ ಹೆಗಡೆ

Updated on: Apr 27, 2021 | 8:53 PM

ಎನ್​ಡಿಒ ಒಕ್ಕೂಟದಿಂದ ಹೊರಬಿದ್ದ ನಂತರ ಸಂಜಯ್ ರಾವತ್​, ಒಂದಲ್ಲ ಒಂದು ವಿಚಾರಕ್ಕೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಲೇ ಇದ್ದರು. ಆದರೆ ಇಂದು ರಾವತ್​ ಬೇರೆಯದೇ ವರಸೆ ತೋರಿಸಿದ್ದು, ಎಲ್ಲರೂ ಪ್ರಧಾನಿ ಮೋದಿಯವರನ್ನ ಬೆಂಬಲಿಸಿ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯರ ನಾಯಕತ್ವದಲ್ಲಿ ನಂಬಿಕೆಯಿಡೋಣ, ಅವರೊಂದಿಗೆ ನಿಲ್ಲೋಣ: ಶಿವಸೇನೆ ಮುಖಂಡ ಸಂಜಯ್ ರಾವತ್
ಸಂಜಯ್​ ರಾವತ್​
Follow us on

ಮುಂಬೈ: ಶಿವಸೇನೆ ನಾಯಕ ಸಂಜಯ್ ರಾವತ್​ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸಿ ಮಾತನಾಡಿದ್ದಾರೆ. ಭಾರತದಲ್ಲಿ ಎದುರಾಗಿರುವ ಕೊವಿಡ್​ 19 ಸವಾಲು ಎದುರಾಗಿದೆ. ಇದೇ ವಿಚಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶಕ್ಕೆ ಅವಮಾನ ಕೂಡ ಆಗುತ್ತಿದೆ. ಈ ಹೊತ್ತಲ್ಲಿ ನಾವೆಲ್ಲ ಅಭಿಪ್ರಾಯ ಬೇಧಗಳನ್ನು ಮರೆತು, ಪ್ರಧಾನಿ ನರೇಂದ್ರ ಮೋದಿಯವರೊಟ್ಟಿಗೆ ನಿಲ್ಲಲೇಬೇಕಾಗಿದೆ ಎಂದು ಹೇಳಿದ್ದಾರೆ.

ನಮ್ಮ ದೇಶದ ಪ್ರಧಾನ ನಾಯಕನಿಗಾಗಲಿ, ಸರ್ಕಾರಕ್ಕೇ ಆಗಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಮಾನ ಆಗುತ್ತಿದ್ದರೆ ನಾವು ಸುಮ್ಮನೆ ಕುಳಿತುಕೊಳ್ಳಬಾರದು. ನಮ್ಮನಮ್ಮೊಳಿಗೆ ಭಿನ್ನಾಭಿಪ್ರಾಯ ಮರೆತು ಒಟ್ಟಾಗಬೇಕು. ನಮ್ಮ ದೇಶದ ಕೊರೊನಾ ಪರಿಸ್ಥಿತಿಯನ್ನು ಹೇಗೆ ಚಿತ್ರಿಸಲಾಗುತ್ತಿದೆ.. ತೋರಿಸಲಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದು ನಮ್ಮ ದೇಶದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದು ಭಾರತವನ್ನು ಅಪಖ್ಯಾತಿಗೊಳಿಸುವ ಸಂಚು ಇರಬಹುದು. ಇಲ್ಲಿನ ಆರ್ಥಿಕತೆ ನಾಶ ಮಾಡುವ ಪಿತೂರಿಯೂ ಆಗಿರಬಹುದು. ಈ ಹೊತ್ತಲ್ಲಿ ನಾವೆಲ್ಲರೂ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಿಲ್ಲಬೇಕು. ದೇಶದ ಪ್ರಧಾನ ನಾಯಕ ತೆಗೆದುಕೊಳ್ಳುವ ನಿರ್ಧಾರಕ್ಕೆ, ಅವರು ಹೋಗುವ ದಾರಿಗೆ ನಾವೂ ಬದ್ಧರಾಗಿಬೇಕು ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಪ್ರಧಾನಿ ಮೋದಿಯವರಲ್ಲಿ ನಂಬಿಕೆ ಇಡಬೇಕು
ಇನ್ನು ರಾಜಕಾರಣಿಗಳ ಚುನಾವಣಾ ಪ್ರಚಾರ ಸಭೆ ಕುರಿತಂತೆ ಚುನಾವಣಾ ಆಯೋಗಕ್ಕೆ ಚಾಟಿ ಬೀಸಿದ್ದ ಮದ್ರಾಸ್ ಹೈಕೋರ್ಟ್​ ಹೇಳಿಕೆಗಳನ್ನು ಸ್ವಾಗತಿಸಿದ ಸಂಜಯ್ ರಾವತ್, ಪ್ರಧಾನಿ ನರೇಂದ್ರ ಮೋದಿಯವರು ಖಂಡಿತವಾಗಿಯೂ ಮದ್ರಾಸ್ ಹೈಕೋರ್ಟ್​ನ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ನಾವು ಅವರ ನಾಯಕತ್ವದಲ್ಲಿ ನಂಬಿಕೆ ಇಡೋಣ ಎಂದು ರಾವತ್​ ತಿಳಿಸಿದರು.

ಎನ್​ಡಿಒ ಒಕ್ಕೂಟದಿಂದ ಹೊರಬಿದ್ದ ನಂತರ ಸಂಜಯ್ ರಾವತ್​, ಒಂದಲ್ಲ ಒಂದು ವಿಚಾರಕ್ಕೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಲೇ ಇದ್ದರು. ಆದರೆ ಇಂದು ಏಕಾಏಕಿ ಪ್ರಧಾನಿಯವರನ್ನು ಹೊಗಳಿದ್ದಾರೆ.

ಇದನ್ನೂ ಓದಿ: ಕೊವಿಡ್ 2ನೇ ಅಲೆಗೆ ಚುನಾವಣಾ ಆಯೋಗವೇ ಹೊಣೆ; ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು: ಮದ್ರಾಸ್ ಹೈಕೋರ್ಟ್

ಸುಧಾಕರ್ ಮಂತ್ರಿ ಅಷ್ಟೇ ಅವರೊಬ್ಬರೇ ಎಲ್ಲವೂ ಅಲ್ಲ, ಜಿಲ್ಲಾ ಮಂತ್ರಿಗಳು ಏನು ಮಾಡುತ್ತಿದ್ದಾರೆ: ಸಿದ್ದರಾಮಯ್ಯ

ಕೊವಿಡ್​ ಸೋಂಕು ಹಳ್ಳಿ ಪ್ರವೇಶಿಸದಂತೆ ಗಡಿಯಲ್ಲೇ ಕಾವಲು ಕಾಯುತ್ತಿರುವ ಮಹಿಳೆಯರು; ಶ್ರಮಕ್ಕೆ ಸಿಕ್ಕಿದೆ ಸಾರ್ಥಕತೆ

Published On - 6:48 pm, Tue, 27 April 21