ತಿರುವನಂತಪುರಂ: ಕೇರಳದ ಮಧ್ಯ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಆಲಪ್ಪುಳ, ಕೊಟ್ಟಾಯಂ, ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಗಳಲ್ಲಿ ಹಲವು ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಅಧಿಕೃತ ಹವಾಮಾನ ಇಲಾಖೆಯು ರಾಜ್ಯದ ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌ಗಳನ್ನು ನೀಡಿದೆ. ಗುರುವಾರ ತಡರಾತ್ರಿ ಒಡಿಶಾದಾದ್ಯಂತ ಭೂಕುಸಿತಕ್ಕೆ ಕಾರಣವಾದ ಡಾನಾ ಚಂಡಮಾರುತದ ಪ್ರಭಾವದಿಂದಾಗಿ ಅಕ್ಟೋಬರ್ 27ರವರೆಗೆ ಭಾರೀ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರೀ ಮಳೆಯ ಎಚ್ಚರಿಕೆಯ ಕಾರಣದಿಂದ ಕೊಟ್ಟಾಯಂ ಜಿಲ್ಲಾಡಳಿತ ನಿರ್ಬಂಧಗಳನ್ನು ವಿಧಿಸಿದ್ದು, ಶನಿವಾರದವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ. ಜನಪ್ರಿಯ ಪ್ರವಾಸಿ ತಾಣಗಳಾದ ಇಲವೀಜಪೂಂಚಿರಾ ಮತ್ತು ಇಲ್ಲಿಕಲ್ ಕಲ್ಲುಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಘೋಷಿಸಿದ್ದಾರೆ. ಚಾರಣಿಗರು ಎತ್ತರದ ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಭೂಕುಸಿತದ ಪೀಡಿತ ಪ್ರದೇಶಗಳಲ್ಲಿ ಈ ಹಿಂದೆ ಭೂಕುಸಿತದ ನಿದರ್ಶನಗಳಿದ್ದಲ್ಲಿ ಆ ಕಡೆ ಹೋಗದಂತೆ ಸೂಚಿಸಲಾಗಿದೆ. ಎರಟ್ಟುಪೆಟ್ಟಾ-ವಾಗಮೋನ್ ರಸ್ತೆ ಮತ್ತು ಇತರ ಗುಡ್ಡಗಾಡು ಪ್ರದೇಶಗಳಲ್ಲಿ ರಾತ್ರಿ ಪ್ರಯಾಣವನ್ನೂ ನಿಷೇಧಿಸಲಾಗಿದೆ. ಈ ಜಿಲ್ಲೆಯಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ಶನಿವಾರದವರೆಗೆ ಸ್ಥಗಿತಗೊಳಿಸಲಾಗಿದೆ.
As Cyclone Dana makes landfall, @IndiaCoastGuard has mobilized 11 ships, 05 aircraft and 14 Disaster Relief Teams #DRTs to tackle the challenges ahead. Focused on immediate assistance and search & rescue, our teams are ready to ensure community safety. So far, no loss of life or… pic.twitter.com/ri9cG97uvn
— Indian Coast Guard (@IndiaCoastGuard) October 25, 2024
ಇದನ್ನೂ ಓದಿ: Dana Cyclone: ಒಡಿಶಾ ಕರಾವಳಿಗೆ ಅಪ್ಪಳಿಸಿದ ಡಾನಾ ಚಂಡಮಾರುತ; ಭಾರಿ ಮಳೆ, ಹಲವೆಡೆ ಭೂಕುಸಿತ
ಡಾನಾ ಚಂಡಮಾರುತದ ಪರಿಣಾಮವು ಕನಿಷ್ಠ ಮುಂದಿನ 1 ವಾರದವರೆಗೆ ಮುಂದುವರಿಯುತ್ತದೆ. ಮುಂದಿನ ದಿನಗಳಲ್ಲಿ ಭಾರಿ ಅಲೆಗಳು ಮತ್ತು ಪ್ರಕ್ಷುಬ್ಧ ಸಮುದ್ರ ಇರುವುದರಿಂದ ಮೀನುಗಾರರ ಕುಗ್ರಾಮಗಳ ಜನರು ಸಮುದ್ರಕ್ಕೆ ಇಳಿಯದಂತೆ ನಾವು ಸಲಹೆ ನೀಡುತ್ತೇವೆ. ಚೆಲ್ಲಾನಂ ಕರಾವಳಿಯ ಸಮೀಪದಲ್ಲಿ ವಾಸಿಸುವ ಜನರು ಸ್ವಲ್ಪ ಮಟ್ಟಿಗೆ ಉಪ್ಪು ನೀರು ನುಗ್ಗುವ ಸಾಧ್ಯತೆಯಿರುವುದರಿಂದ ಎಚ್ಚರಿಕೆ ವಹಿಸಬೇಕು ಎಂದು ತಿರುವನಂತಪುರಂನ ಹವಾಮಾನ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
#ବଗପାଟିଆରେ_ଜୁଆର_ପାଣି
ବୁଡିଗଲା ସାତଭାୟା ଥଇଥାନ ସ୍ଥଳୀ ବଗପାଟିଆ । ପାଣି ଘେରରେ ୫୭୧ ପରିବାର ।#cyclone_Dana pic.twitter.com/jn0aC30Mxv— AIR NEWS CUTTACK (ଆକାଶବାଣୀ ସମାଚାର କଟକ) (@airnewscuttack) October 25, 2024
ಇದನ್ನೂ ಓದಿ: Dana Cyclone: ಒಡಿಶಾ ಕರಾವಳಿಗೆ ಅಪ್ಪಳಿಸಿದ ಡಾನಾ ಚಂಡಮಾರುತ; ಭಾರಿ ಮಳೆ, ಹಲವೆಡೆ ಭೂಕುಸಿತ
ಕೊಲ್ಲಂ ಮತ್ತು ತಿರುವನಂತಪುರಂನ ಗ್ರಾಮೀಣ ಮತ್ತು ಕರಾವಳಿ ಪ್ರದೇಶಗಳಲ್ಲಿ ಅಧಿಕ ಮಳೆ ಸುರಿಯುತ್ತಿದೆ. ಕರಮಾನ ನದಿಯ ಎರಡೂ ಬದಿಯಲ್ಲಿ ವಾಸಿಸುವ ಜನರು ಜಾಗರೂಕರಾಗಿರಲು ತಿಳಿಸಲಾಗಿದೆ. ಶುಕ್ರವಾರ ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಪಾಲಕ್ಕಾಡ್, ಮಲಪ್ಪುರಂ ಮತ್ತು ಕೋಯಿಕ್ಕೋಡ್ ನಲ್ಲಿ ಹಳದಿ ಅಲರ್ಟ್ ಜಾರಿಯಲ್ಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ