ಸನ್‌ರೂಫ್ ಮೇಲಿಂದ ಪಟಾಕಿ ಸಿಡಿಸಿದ ಜನ; ಮದುವೆ ದಿಬ್ಬಣದ ಕಾರಿಗೆ ಹೊತ್ತಿಕೊಂಡ ಬೆಂಕಿ
ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಮದುವೆ ದಿಬ್ಬಣದ ಮೆರವಣಿಗೆ ವೇಳೆ ಕಾರಿನ ಸನ್‌ರೂಫ್ ಮೇಲಿಂದಲೇ ಪಟಾಕಿಗಳನ್ನು ಸಿಡಿಸಲಾರಂಭಿಸಿದ್ದಾರೆ. ಈ ವೇಳೆ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ನೊಯ್ಡಾ: ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಮದುವೆ ಸಂಭ್ರಮಾಚರಣೆ ವೇಳೆ ವ್ಯಕ್ತಿಯೊಬ್ಬ ಕಾರಿನ ಸನ್‌ರೂಫ್‌ನಿಂದ ಪಟಾಕಿ ಸಿಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಮದುವೆ ಸಂಭ್ರಮಾಚರಣೆ ವೇಳೆ ವ್ಯಕ್ತಿಯೋರ್ವ ಅಜಾಗರೂಕತೆಯಿಂದ ಸನ್‌ರೂಫ್ ಮೂಲಕ ಪಟಾಕಿ ಸಿಡಿಸಿದ ಕಾರಣ ಕಾರಿಗೆ ಬೆಂಕಿ ತಗುಲಿದೆ.
ಫತೇಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಗಂಡೇವಾಡ ಗ್ರಾಮದಲ್ಲಿ ನವೆಂಬರ್ 22ರಂದು ರಾತ್ರಿ ವರನ ಮದುವೆ ಮೆರವಣಿಗೆ ಡೆಹ್ರಾಡೂನ್‌ಗೆ ಹೊರಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಮದುವೆಯ ಬೆಂಗಾವಲು ಪಡೆಯ ಭಾಗವಾಗಿದ್ದ ಅಲಂಕೃತ ಖಾಸಗಿ ವಾಹನದ ಸನ್‌ರೂಫ್ ಮೂಲಕ ವ್ಯಕ್ತಿ ಪಟಾಕಿಗಳನ್ನು ಹೊಡೆಯುವುದನ್ನು ಕಾಣಬಹುದು. ಆದರೆ ಕೂಡಲೇ ಪಟಾಕಿಗಳಿಂದ ಬೆಂಕಿ ಕಿಡಿಗಳು ಗಾಳಿಯಲ್ಲಿ ಹಾರಿದ ನಂತರ ಕಾರಿನಲ್ಲಿ ಜ್ವಾಲೆ ಉಂಟಾಯಿತು.
ಇದನ್ನೂ ಓದಿ: ಚಳಿಗಾಲ ಹಾಗೂ ದೀಪಾವಳಿ ಪಟಾಕಿ ಎಫೆಕ್ಟ್: ಬೆಂಗಳೂರಿನಲ್ಲಿ ವೈರಲ್ ಸೋಂಕು ಏರಿಕೆ!
ಮಾಧ್ಯಮ ವರದಿಗಳ ಪ್ರಕಾರ, ಕಾರಿನೊಳಗೆ ಪಟಾಕಿ ಪೆಟ್ಟಿಗೆಗಳಿದ್ದವು. ಸನ್‌ರೂಫ್ ಮೂಲಕ ಪಟಾಕಿ ಸಿಡಿಸಿದಾಗ ಕಾರಿನೊಳಗೆ ಕಿಡಿಗಳು ತಗುಲಿದ ನಂತರ ಬೆಂಕಿ ಹೊತ್ತಿಕೊಂಡಿದೆ. ಹೆಚ್ಚಿನ ಸ್ಥಳೀಯ ನಿವಾಸಿಗಳು ಸುರಕ್ಷತೆಗಾಗಿ ಓಡಿಹೋದರು. ಆದರೆ ಅವರಲ್ಲಿ ಒಬ್ಬರು ವ್ಯಕ್ತಿಗೆ ಸಹಾಯ ಮಾಡಲು ಕಾರಿನ ಕಡೆಗೆ ಹೋದರು. ಆದರೆ, ಅವರು ಅಷ್ಟರಲ್ಲಾಗಲೇ ಸುರಕ್ಷಿತ ಸ್ಥಳಕ್ಕೆ ಧಾವಿಸಿದ್ದರು. ಕಾರಿಗೆ ಬೆಂಕಿ ಹೊತ್ತಿಕೊಳ್ಳುವಷ್ಟರಲ್ಲಿ ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Fireworks at a wedding ceremony proved costly
Car caught fire during fireworks
The entire car was burnt to ashes due to the fire
The youth was bursting fireworks from the sunroof of the car pic.twitter.com/KQ7yxCAy0q
— Siraj Noorani (@sirajnoorani) November 27, 2024
ಈ ಘಟನೆಯಲ್ಲಿ ಪಟಾಕಿ ಸಿಡಿಸುವ ವ್ಯಕ್ತಿ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ವರನ ಸಹೋದರ ರಕ್ಷಿಸಿ ವೈದ್ಯಕೀಯ ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಬಳಿಕ ಪೊಲೀಸರು ಅದನ್ನು ವಶಪಡಿಸಿಕೊಂಡು ಆರೋಪಿಯ ನಿರ್ಲಕ್ಷ್ಯಕ್ಕೆ ದಂಡ ವಿಧಿಸಿದ್ದಾರೆ.
ಇದನ್ನೂ ಓದಿ: ರಾಮನಗರ: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಭೀಕರ ಅಪಘಾತ, ಮೂವರು ಸಾವು
ಕಳೆದ ತಿಂಗಳು ಚಂಡೀಗಢದಲ್ಲಿ ಖಾಸಗಿ ವಾಹನದ ಮೇಲ್ಛಾವಣಿಯಿಂದ ಪಟಾಕಿ ಸಿಡಿಸುವ ಸಂದರ್ಭ ಇದೇ ರೀತಿಯ ಘಟನೆ ನಡೆದಿದ್ದು, ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ