West Bengal: ಬಂಕುರಾದಲ್ಲಿ ಎರಡು ರೈಲುಗಳ ಮಧ್ಯೆ ಮುಖಾಮುಖಿ ಡಿಕ್ಕಿ, ಹಳಿ ತಪ್ಪಿದ 12 ಬೋಗಿಗಳು

ಪಶ್ಚಿಮ ಬಂಗಾಳದ ಓಂಡಾ ರೈಲು ನಿಲ್ದಾಣದ ಬಳಿ ಎರಡು ಗೂಡ್ಸ್​ ರೈಲುಗಳ ನಡುವೆ ಡಿಕ್ಕಿ ಸಂಭವಿಸಿದೆ. ಭಾನುವಚಾರ ಮುಂಜಾನೆ 4 ಗಂಟೆ ವೇಳೆಗೆ ಅಪಘಾತ ಸಂಭವಿಸಿದೆ.

West Bengal: ಬಂಕುರಾದಲ್ಲಿ ಎರಡು ರೈಲುಗಳ ಮಧ್ಯೆ ಮುಖಾಮುಖಿ ಡಿಕ್ಕಿ, ಹಳಿ ತಪ್ಪಿದ 12 ಬೋಗಿಗಳು
ರೈಲು

Updated on: Jun 25, 2023 | 8:36 AM

ಪಶ್ಚಿಮ ಬಂಗಾಳ(West Bengal)ದ ಓಂಡಾ ರೈಲು ನಿಲ್ದಾಣದ ಬಳಿ ಎರಡು ಗೂಡ್ಸ್​ ರೈಲುಗಳ ನಡುವೆ ಡಿಕ್ಕಿ ಸಂಭವಿಸಿದೆ. ಭಾನುವಚಾರ ಮುಂಜಾನೆ 4 ಗಂಟೆ ವೇಳೆಗೆ ಅಪಘಾತ ಸಂಭವಿಸಿದೆ. ಗೂಡ್ಸ್​ ರೈಲು ಮುಖ್ಯ ಮಾರ್ಗದ ಬದಲಿಗೆ ಲೂಪ್​ ಲೈನ್​ಗೆ ಪ್ರವೇಶಿಸಿತ್ತು ಮತ್ತು ಹಳಿಯಲ್ಲಿದ್ದ ಮತ್ತೊಂದು ಸರಕು ರೈಲಿಗೆ ಡಿಕ್ಕಿ ಹೊಡೆದಿದೆ.

12 ಬೋಗಿಗಳು ಹಳಿ ತಪ್ಪಿವೆ. ಜೂನ್ 2 ರಂದು ಬಾಲಸೋರ್​ನಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದರು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ರೈಲು ಅವಘಡ ಸಂಭವಿಸಿದೆ. ಖರಗ್​ಪುರ-ಬಂಕುರಾ-ಆದ್ರಾ ಮಾರ್ಗದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಮತ್ತಷ್ಟು ಓದಿ: Odisha Train Accident: ರೈಲು ಅಪಘಾತಕ್ಕೆ ಮೂಲ ಕಾರಣ ಹಾಗೂ ಕಾರಣಕರ್ತರನ್ನು ಪತ್ತೆಹಚ್ಚಲಾಗಿದೆ: ಅಶ್ವಿನಿ ವೈಷ್ಣವ್

ಇತ್ತೀಚಿನ ವರದಿಗಳ ಪ್ರಕಾರ ಗೂಡ್ಸ್​ ರೈಲಿನ ಲೋಕೊ ಪೈಲಟ್ ಗಾಯಗೊಂಡಿದ್ದಾರೆ, ರೈಲು ಮಾರ್ಗದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಅಧಿಕಾರಿಗಳು ಅಪಘಾತದ ಸ್ಥಳಕ್ಕೆ ತಲುಪಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us