AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಡನ್ ಮೆಟ್ರೊ ನಿಲ್ದಾಣದಲ್ಲಿ ಬಂಗಾಳಿ ಭಾಷೆಯ ಫಲಕ; ಇದು ‘ಸಂಸ್ಕೃತಿ ಮತ್ತು ಪರಂಪರೆಯ ವಿಜಯ’ ಎಂದ ಮಮತಾ

ಲಂಡನ್ ಟ್ಯೂಬ್ ರೈಲು ಬೆಂಗಾಲಿಯನ್ನು ವೈಟ್‌ಚಾಪಲ್ ನಿಲ್ದಾಣದಲ್ಲಿ ಫಲಕದಲ್ಲಿ ಬಳಸಿದೆಎಂದು ಹೇಳಲು ಹೆಮ್ಮೆಪಡುತ್ತೇನೆ, ಇದು 1,000 ವರ್ಷಗಳಷ್ಟು ಹಳೆಯದಾದ ಬಂಗಾಳಿ ಭಾಷೆಯ ಜಾಗತಿಕ ಪ್ರಾಮುಖ್ಯತೆ ಮತ್ತು ಬಲವನ್ನು ಸೂಚಿಸುತ್ತದೆ ಎಂದ ಮಮತಾ ಬ್ಯಾನರ್ಜಿ.

ಲಂಡನ್ ಮೆಟ್ರೊ ನಿಲ್ದಾಣದಲ್ಲಿ ಬಂಗಾಳಿ ಭಾಷೆಯ ಫಲಕ; ಇದು 'ಸಂಸ್ಕೃತಿ ಮತ್ತು ಪರಂಪರೆಯ ವಿಜಯ' ಎಂದ ಮಮತಾ
ಬಂಗಾಳಿ ಭಾಷೆಯಲ್ಲಿ ಫಲಕ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Mar 14, 2022 | 7:52 PM

Share

ಲಂಡನ್: ವೈಟ್‌ಚಾಪೆಲ್ ಸ್ಟೇಷನ್‌ನಲ್ಲಿ (Whitechapel Station) ಲಂಡನ್ ಮೆಟ್ರೋ ನಿಲ್ದಾಣದಲ್ಲಿ ಬಂಗಾಳಿ ಭಾಷೆಯ ಫಲಕ ಅಳವಡಿಸಿರುವುದರ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಹೆಮ್ಮೆ ವ್ಯಕ್ತಪಡಿಸಿದ್ದಾರೆ.  ಇದನ್ನು “ಸಂಸ್ಕೃತಿ ಮತ್ತು ಪರಂಪರೆಯ ವಿಜಯ” ಎಂದು ಅವರು ಕರೆದಿದ್ದಾರೆ. ಲಂಡನ್ ಟ್ಯೂಬ್ ರೈಲು ಬೆಂಗಾಲಿಯನ್ನು ವೈಟ್‌ಚಾಪಲ್ ನಿಲ್ದಾಣದಲ್ಲಿ ಫಲಕದಲ್ಲಿ ಬಳಸಿದೆ ಎಂದು ಹೇಳಲು ಹೆಮ್ಮೆಪಡುತ್ತೇನೆ, ಇದು 1,000 ವರ್ಷಗಳಷ್ಟು ಹಳೆಯದಾದ ಬಂಗಾಳಿ (Bengali) ಭಾಷೆಯ ಜಾಗತಿಕ ಪ್ರಾಮುಖ್ಯತೆ ಮತ್ತು ಬಲವನ್ನು ಸೂಚಿಸುತ್ತದೆ ಎಂದು ಮಮತಾ ಟ್ವೀಟ್ ಮಾಡಿದ್ದಾರೆ.  ಬಂಗಾಳಿ ವಲಸಿಗರು ಸಾಮಾನ್ಯ ಸಾಂಸ್ಕೃತಿಕ ದಿಕ್ಕುಗಳಲ್ಲಿ ಹೇಗೆ ಒಟ್ಟಾಗಿ ಕೆಲಸ ಮಾಡಬೇಕು ಎಂಬುದನ್ನು ಈ ಕ್ರಮವು ಒತ್ತಿಹೇಳುತ್ತದೆ ಎಂದು ಬ್ಯಾನರ್ಜಿ ಹೇಳಿದರು.  ಕೌನ್ಸಿಲ್ ಮತ್ತು ಸಮುದಾಯ ನೇತೃತ್ವದ ಅಭಿಯಾನದ ನಂತರ ಲಂಡನ್ ಬರೋ ಆಫ್ ಟವರ್ ಹ್ಯಾಮ್ಲೆಟ್ಸ್ ಕೌನ್ಸಿಲ್ ಇಂಗ್ಲಿಷ್ ಮತ್ತು ಬೆಂಗಾಲಿಯಲ್ಲಿ ಬರೆಯಲಾದ ಸೈನ್‌ಬೋರ್ಡ್‌ಗಳನ್ನು ಬಳಸಿದೆ ಎಂದು ಹೇಳಿಕೆಯೊಂದು ತಿಳಿಸಿದೆ.

ಟವರ್ ಹ್ಯಾಮ್ಲೆಟ್ಸ್ ಮೇಯರ್ ಜಾನ್ ಬಿಗ್ಸ್ ಕೂಡ ಈ ಕ್ರಮವನ್ನು ಶ್ಲಾಘಿಸಿದ್ದಾರೆ. ವೈಟ್‌ಚಾಪೆಲ್ ನಿಲ್ದಾಣದಲ್ಲಿ ಈಗ ದ್ವಿಭಾಷಾ ಫಲಕ ಇಂಗ್ಲಿಷ್ ಮತ್ತು ಬಾಂಗ್ಲಾ ಎರಡರಲ್ಲೂ ಸ್ಥಾಪಿಸಿರುವುದನ್ನು ನೋಡಲು ಸಂತೋಷವಾಗಿದೆ ” ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಲಂಡನ್‌ನ ವೈಟ್‌ಚಾಪಲ್ ಪ್ರದೇಶದಲ್ಲಿ ಬಾಂಗ್ಲಾದೇಶ ಮತ್ತು ಭಾರತದಿಂದ ಹಲವಾರು ಬಂಗಾಳಿ ವಲಸಿಗರು ನೆಲೆಸಿದ್ದಾರೆ.

ಇದನ್ನೂ ಓದಿ: ಹೋಳಿ ಹಬ್ಬದ ನಂತರವೇ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚನೆ: ಮೂಲಗಳು

Published On - 7:50 pm, Mon, 14 March 22