ದೆಹಲಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿತ; 8 ಜನರ ರಕ್ಷಣೆ, ಇನ್ನೂ ಹಲವರು ಸಿಲುಕಿರುವ ಶಂಕೆ
ದೆಹಲಿಯಲ್ಲಿ ಕುಸಿದ ಕಟ್ಟಡದ ಅವಶೇಷಗಳಡಿ ಸಾಕಷ್ಟು ಜನ ಸಿಲುಕಿರುವ ಸಾಧ್ಯತೆಗಳು ಇರುವುದರಿಂದ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಇಲ್ಲಿಯವರೆಗೆ, 8 ಜನರನ್ನು ರಕ್ಷಿಸಲಾಗಿದೆ. ಇವರೆಲ್ಲರೂ ಸೈಟ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾಗಿದ್ದಾರೆ.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕಾಶ್ಮೀರಿ ಗೇಟ್ (Kashmir Gate) ಬಳಿಯ ನಿಕೋಲ್ಸನ್ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು (Building Collapse) ಬಿದ್ದಿದೆ. ಈ ದುರಂತದಲ್ಲಿ ಅವಶೇಷಗಳಡಿ ಇನ್ನೂ 6ರಿಂದ 8 ಮಂದಿ ಸಿಲುಕಿರುವ ಶಂಕೆ ಇದೆ ಎಂದು ದೆಹಲಿ ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ) ತಂಡಗಳನ್ನು ಸ್ಥಳಕ್ಕೆ ಕರೆಸಲಾಗಿದೆ.
ನಿಕೋಲ್ಸನ್ ರಸ್ತೆಯಲ್ಲಿ ಕಟ್ಟಡ ಕುಸಿತದ ಬಗ್ಗೆ ಸಾರ್ವಜನಿಕರಿಂದ ಮಾಹಿತಿಯನ್ನು ಸ್ವೀಕರಿಸಲಾಗಿದೆ ಎಂದು ದೆಹಲಿ ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತ ಸಾಗರ್ ಕಲ್ಸಿ ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ ಮತ್ತು ಡಿಡಿಎಂಎ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತಲುಪಿದ್ದಾರೆ. ಅವಶೇಷಗಳಡಿ ಸಾಕಷ್ಟು ಜನ ಸಿಲುಕಿರುವ ಸಾಧ್ಯತೆಗಳು ಇರುವುದರಿಂದ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಇಲ್ಲಿಯವರೆಗೆ, 8 ಜನರನ್ನು ರಕ್ಷಿಸಲಾಗಿದೆ. ಇವರೆಲ್ಲರೂ ಸೈಟ್‌ನಲ್ಲಿ ಕೆಲಸ ಮಾಡುತ್ತಿದ್ದವರು ಎಂದು ಅವರು ಹೇಳಿದ್ದಾರೆ.
Delhi | An under-construction building collapses at Nicholson Road near Kashmiri Gate, few persons feared trapped: Delhi Fire Service
— ANI (@ANI) March 14, 2022
ಇದನ್ನೂ ಓದಿ: ಬೆಂಕಿಯಿಂದ ಪಾರಾಗಲು ಮೂರು ವರ್ಷದ ಮಗುವನ್ನು ಕಟ್ಟಡದಿಂದ ಕೆಳಗೆ ಎಸೆದ ತಂದೆ; ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ
ಉತ್ತರ ಕನ್ನಡ: ಶಾಲೆಯ ಕಟ್ಟಡದ ಮೇಲ್ಛಾವಣಿ ಪ್ಲಾಸ್ಟರಿಂಗ್ ಕುಸಿತ; ಐದು ಜನ ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯ
Published On - 6:47 pm, Mon, 14 March 22