ಮ್ಯಾಡ್ರಿಡ್‌ನಿಂದ ಬಾರ್ಸಿಲೋನಾಗೆ ಸೆಕೆಂಡ್ ಕ್ಲಾಸ್ ಕೋಚ್​​​ನಲ್ಲೇ ಪ್ರಯಾಣಿಸಿದ ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ ಅವರು ಭಾನುವಾರ ಮ್ಯಾಡ್ರಿಡ್ ಸಮಯದ ಪ್ರಕಾರ ಮಧ್ಯಾಹ್ನ 12 ಗಂಟೆಗೆ ಸ್ಥಳೀಯ ರೈಲು ನಿಲ್ದಾಣಕ್ಕೆ ಬಂದರು.ಅವರ ಜತೆಗೆ ಇತರ ಅಧಿಕಾರಿಗಳೂ ಇದ್ದರು. ನಿಗದಿತ ಸಮಯಕ್ಕೆ ರೈಲು ನಿಲ್ದಾಣವನ್ನು ಪ್ರವೇಶಿಸಿದ ಅವರು ಎಲ್ಲರೊಂದಿಗೆ ರೈಲು ಹತ್ತಿದರು. ಜಿಲ್ಲಾ ಪ್ರವಾಸವಾಗಲಿ, ವಿದೇಶ ಪ್ರವಾಸವಾಗಲೀ ಮುಖ್ಯಮಂತ್ರಿಗಳು ಜನರ ನಡುವೆ ಸಮಯ ಕಳೆಯಲು ಇಷ್ಟಪಡುತ್ತಾರೆ.

ಮ್ಯಾಡ್ರಿಡ್‌ನಿಂದ ಬಾರ್ಸಿಲೋನಾಗೆ ಸೆಕೆಂಡ್ ಕ್ಲಾಸ್ ಕೋಚ್​​​ನಲ್ಲೇ ಪ್ರಯಾಣಿಸಿದ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Follow us
|

Updated on:Sep 18, 2023 | 7:43 PM

ಕೋಲ್ಕತ್ತಾ ಸೆಪ್ಟೆಂಬರ್ 18: ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಮ್ಯಾಡ್ರಿಡ್‌ನಿಂದ ಬಾರ್ಸಿಲೋನಾಗೆ ರೈಲಿನಲ್ಲಿ ಪ್ರಯಾಣಿಸಿದ್ದಾರೆ.ವಿಶೇಷವೆಂದರೆ ಇವರು ರೈಲಿನಲ್ಲಿ ಎರಡನೇ ದರ್ಜೆಯ ಕೋಚ್​​ನಲ್ಲೇ ಪ್ರಯಾಣಿಸಿದ್ದು. ಸ್ಪೇನ್‌ನಲ್ಲಿರುವ ಭಾರತೀಯ ರಾಯಭಾರಿ ದಿನೇಶ್ ಪಟ್ನಾಯಕ್ ಅವರು ಮಮತಾ ಅವರಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸಲು ಪದೇ ಪದೇ ವಿನಂತಿಸಿದರೂ ಬಂಗಾಳದ ಸಿಎಂ ಇದಕ್ಕೆ ಒಪ್ಪಲಿಲ್ಲ. ನಾನು ಎರಡನೇ ದರ್ಜೆ ಕೋಚ್ ನಲ್ಲೇ ಪ್ರಯಾಣಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಭಾನುವಾರ ಮ್ಯಾಡ್ರಿಡ್ ಸಮಯದ ಪ್ರಕಾರ ಮಧ್ಯಾಹ್ನ 12 ಗಂಟೆಗೆ ಸ್ಥಳೀಯ ರೈಲು ನಿಲ್ದಾಣಕ್ಕೆ ಬಂದರು.ಅವರ ಜತೆಗೆ ಇತರ ಅಧಿಕಾರಿಗಳೂ ಇದ್ದರು. ನಿಗದಿತ ಸಮಯಕ್ಕೆ ರೈಲು ನಿಲ್ದಾಣವನ್ನು ಪ್ರವೇಶಿಸಿದ ಅವರು ಎಲ್ಲರೊಂದಿಗೆ ರೈಲು ಹತ್ತಿದರು. ಜಿಲ್ಲಾ ಪ್ರವಾಸವಾಗಲಿ, ವಿದೇಶ ಪ್ರವಾಸವಾಗಲೀ ಮುಖ್ಯಮಂತ್ರಿಗಳು ಜನರ ನಡುವೆ ಸಮಯ ಕಳೆಯಲು ಇಷ್ಟಪಡುತ್ತಾರೆ. ಹೀಗೆ ಎಲ್ಲರೊಂದಿಗೆ ಬೆರೆಯುವುದು ಅವರ ಸ್ವಭಾವ. ಬಹುಶಃ ಭಾರತೀಯ ರಾಯಭಾರಿಯ ಪತ್ನಿ, ಜೊತೆಗಿದ್ದ ಕೈಗಾರಿಕೋದ್ಯಮಿಗಳು ಫಸ್ಟ್ ಕ್ಲಾಸ್ ಆಯ್ಕೆ ಮಾಡಿದರೂ ಮಮತಾ ಮಾತ್ರ ಸೂಪರ್ಫಾಸ್ಟ್ ರೈಲಿನ ಸೆಕೆಂಡ್ ಕ್ಲಾಸ್ ಬೋಗಿಯಲ್ಲಿ ಪ್ರಯಾಣಿಸಿದರು.

ಮಮತಾ ಬ್ಯಾನರ್ಜಿ 12 ದಿನಗಳ ವಿದೇಶ ಪ್ರವಾಸದಲ್ಲಿದ್ದು, ಅಲ್ಲಿ ಅವರು ಹಲವಾರು ಉದ್ಯಮ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ವಿದೇಶಿ ಪ್ರವಾಸಿಗರನ್ನೂ ಭೇಟಿಯಾಗುತ್ತಿದ್ದಾರೆ. ಸೌರವ್ ಗಂಗೋಪಾಧ್ಯಾಯ ಅವರು ಲಾ ಲಿಗಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಎಂಒಯುಗೆ ಸಹಿ ಹಾಕಿದ್ದಾರೆ. ಅವರು ಬಂಗಾಳದಲ್ಲಿ ಅಕಾಡೆಮಿ ಮಾಡುತ್ತಿದ್ದಾರೆ. ರಿಯಲ್ ಮ್ಯಾಡ್ರಿಡ್ ಕ್ಲಬ್‌ಗೂ ಅವರು ಹೋಗಿದ್ದರು.

ಇದನ್ನೂ ಓದಿ: ಸೋನಿಯಾ ಗಾಂಧಿ ಅವರನ್ನು ತೆಲಂಗಾಣ ತಲ್ಲಿ ಎಂದು ಬಿಂಬಿಸಿದ್ದಕ್ಕೆ ಕಿಶನ್ ರೆಡ್ಡಿ ಆಕ್ಷೇಪ

ಮಮತಾ ಬ್ಯಾನರ್ಜಿ ಅವರು ಮ್ಯಾಡ್ರಿಡ್-ಬಾರ್ಸಿಲೋನಾದಲ್ಲಿ ವಲಸಿಗ ಭಾರತೀಯರನ್ನು ಭೇಟಿಯಾದರು. ಕ್ರೀಡೆಯಿಂದ ಶಿಕ್ಷಣದವರೆಗೆ, ವ್ಯಾಪಾರದಿಂದ ಹೂಡಿಕೆಯವರೆಗೆ ವಿವಿಧೆಡೆ ಮಮತಾ ಅವರ ವಿದೇಶ ಪ್ರವಾಸಕ್ಕೆ ಒತ್ತು ನೀಡಲಾಗುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:42 pm, Mon, 18 September 23

ತಾಜಾ ಸುದ್ದಿ
ಬೆಂಗಳೂರು ಛಿದ್ರ ಛಿದ್ರ ಮಾಡಿದ್ರೆ ಕೆಂಪೇಗೌಡರ ಶಾಪ ತಟ್ಟತ್ತೆ ಎಂದ ಬಿಜೆಪಿ
ಬೆಂಗಳೂರು ಛಿದ್ರ ಛಿದ್ರ ಮಾಡಿದ್ರೆ ಕೆಂಪೇಗೌಡರ ಶಾಪ ತಟ್ಟತ್ತೆ ಎಂದ ಬಿಜೆಪಿ
ಬೆಳಗಾವಿ: ನೆರೆಯ ಜೊತೆಗೆ ನದಿ ತೀರದ ಜನರಿಗೆ ಶುರುವಾಯ್ತು ಮೊಸಳೆಗಳ ಆತಂಕ
ಬೆಳಗಾವಿ: ನೆರೆಯ ಜೊತೆಗೆ ನದಿ ತೀರದ ಜನರಿಗೆ ಶುರುವಾಯ್ತು ಮೊಸಳೆಗಳ ಆತಂಕ
ಸದನದಲ್ಲಿ ತುಳು ಭಾಷೆ ಅಬ್ಬರ: ಇದೇನು ಮಂಗಳೂರು ಅಧಿವೇಶನವಾ ಎಂದ ಆರ್​ ಅಶೋಕ್
ಸದನದಲ್ಲಿ ತುಳು ಭಾಷೆ ಅಬ್ಬರ: ಇದೇನು ಮಂಗಳೂರು ಅಧಿವೇಶನವಾ ಎಂದ ಆರ್​ ಅಶೋಕ್
ದರ್ಶನ್​ ನೋಡಲು ಬಂದ ಸಾಧು ಕೋಕಿಲ ಈ ರೀತಿ ರಿಯಾಕ್ಷನ್​ ಕೊಟ್ಟಿದ್ದು ಯಾಕೆ?
ದರ್ಶನ್​ ನೋಡಲು ಬಂದ ಸಾಧು ಕೋಕಿಲ ಈ ರೀತಿ ರಿಯಾಕ್ಷನ್​ ಕೊಟ್ಟಿದ್ದು ಯಾಕೆ?
ಶಿವಕುಮಾರ್ ಮಾತು ಮತ್ತು ಕೃತಿ ನಡುವೆ ಅಜಗಜಾಂತರ ವ್ಯತ್ಯಾಸ: ಆಶ್ವಥ್ ನಾರಾಯಣ
ಶಿವಕುಮಾರ್ ಮಾತು ಮತ್ತು ಕೃತಿ ನಡುವೆ ಅಜಗಜಾಂತರ ವ್ಯತ್ಯಾಸ: ಆಶ್ವಥ್ ನಾರಾಯಣ
ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ;ಸಿಎಂ
ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ;ಸಿಎಂ
ಕನ್ನಡಿಗರಿಗೆ ಮೋಸ ಮಾಡಿದ ನಿರ್ಮಲಾ ಸೀತಾರಾಮನ್ ರಾಜೀನಾಮೆ ಸಲ್ಲಿಸಲಿ: ವಾಟಾಳ್
ಕನ್ನಡಿಗರಿಗೆ ಮೋಸ ಮಾಡಿದ ನಿರ್ಮಲಾ ಸೀತಾರಾಮನ್ ರಾಜೀನಾಮೆ ಸಲ್ಲಿಸಲಿ: ವಾಟಾಳ್
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ಶಿವಭಕ್ತನ ಪ್ರಾಣ ಉಳಿಸಿದ ಮುಸ್ಲಿಂ ಯೋಧ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ಶಿವಭಕ್ತನ ಪ್ರಾಣ ಉಳಿಸಿದ ಮುಸ್ಲಿಂ ಯೋಧ
ನಾನು ಓಡಿ ಹೋಗಲ್ಲ, ಹಾಸನದ ರಾಜಕಾರಣ ಎಂದಿನಂತೆ ನಡೆಯಲಿದೆ: ಸೂರಜ್ ರೇವಣ್ಣ
ನಾನು ಓಡಿ ಹೋಗಲ್ಲ, ಹಾಸನದ ರಾಜಕಾರಣ ಎಂದಿನಂತೆ ನಡೆಯಲಿದೆ: ಸೂರಜ್ ರೇವಣ್ಣ
ಗೆಳೆಯ ದರ್ಶನ್ ಕಾಣಲು ಬಂದು ನಿರಾಶರಾಗಿ ತೆರಳಿದ ಸಾಧು
ಗೆಳೆಯ ದರ್ಶನ್ ಕಾಣಲು ಬಂದು ನಿರಾಶರಾಗಿ ತೆರಳಿದ ಸಾಧು