AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿರುಚಿದರೆ ಇನ್ನಷ್ಟು ಹುಡುಗರನ್ನು ಕರೆಯುತ್ತೇನೆಂದರು; ಬಂಗಾಳದ ಅತ್ಯಾಚಾರದ ಭಯಾನಕತೆ ನೆನಪಿಸಿಕೊಂಡ ಸಂತ್ರಸ್ತೆ

ಪಶ್ಚಿಮ ಬಂಗಾಳದ ದುರ್ಗಾಪುರದ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ ಅಂದು ನಡೆದ ಭಯಾನಕತೆಯನ್ನು ನೆನಪಿಸಿಕೊಂಡಿದ್ದಾರೆ. ದುರ್ಗಾಪುರದ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ ವೈದ್ಯರಿಗೆ ನೀಡಿದ ಹೇಳಿಕೆಯಲ್ಲಿ, ತನ್ನ ಹಾಸ್ಟೆಲ್ ಪಕ್ಕದ ಕಾಡಿನೊಳಗೆ ಪುರುಷರು ತನ್ನನ್ನು ಹೇಗೆ ಬೆನ್ನಟ್ಟಿ ಬಂದರು, ಹೇಗೆಲ್ಲ ಬಲವಂತಪಡಿಸಿ ಹಲ್ಲೆ ನಡೆಸಿದರು ಎಂಬುದನ್ನು ವಿವರಿಸಿದ್ದಾರೆ.

ಕಿರುಚಿದರೆ ಇನ್ನಷ್ಟು ಹುಡುಗರನ್ನು ಕರೆಯುತ್ತೇನೆಂದರು; ಬಂಗಾಳದ ಅತ್ಯಾಚಾರದ ಭಯಾನಕತೆ ನೆನಪಿಸಿಕೊಂಡ ಸಂತ್ರಸ್ತೆ
Durgapur Gang Rape
ಸುಷ್ಮಾ ಚಕ್ರೆ
|

Updated on: Oct 14, 2025 | 4:15 PM

Share

ಕೊಲ್ಕತ್ತಾ, ಅಕ್ಟೋಬರ್ 14: ಪಶ್ಚಿಮ ಬಂಗಾಳದ ದುರ್ಗಾಪುರದ (Durgapur Horror) ಖಾಸಗಿ ಕಾಲೇಜಿನ ಬಳಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ವೈದ್ಯಕೀಯ ವಿದ್ಯಾರ್ಥಿನಿ ಚಿಕಿತ್ಸೆಯ ಸಮಯದಲ್ಲಿ ನಡೆದ ಹಲ್ಲೆಯನ್ನು ವಿವರಿಸಿದ್ದಾರೆ. ಅತ್ಯಾಚಾರ ನಡೆಸಿದ ಯುವಕರು ನನ್ನನ್ನು ಹತ್ತಿರದ ಕಾಡಿನೊಳಗೆ ಕರೆದುಕೊಂಡು ಹೋದರು ಎಂದ ಆಕೆ ಅವರು ತನ್ನ ಮೇಲೆ ಹೇಗೆಲ್ಲ ದಾಳಿ ಮಾಡಿ ಬಲವಂತಪಡಿಸಿದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಚಿಕಿತ್ಸೆ ನೀಡುತ್ತಿರುವ ವೈದ್ಯರ ಮುಂದೆ ಆಕೆ ಈ ಹೇಳಿಕೆ ನೀಡಿದ್ದಾರೆ. “ಅವರು ತಮ್ಮ ಕಾರನ್ನು ಬಿಟ್ಟು ನಮ್ಮ ಕಡೆಗೆ ಬರುತ್ತಿರುವುದನ್ನು ನಾವು ಗಮನಿಸಿದೆವು. ಆಗ ನಾವು ಕಾಡಿನ ಕಡೆಗೆ ಓಡಲು ಪ್ರಾರಂಭಿಸಿದೆವು. ನಂತರ ಆ ಮೂವರು ನಮ್ಮ ಹಿಂದೆ ಓಡಿ ಬಂದು ನನ್ನನ್ನು ಹಿಡಿದು ಕಾಡಿನೊಳಗೆ ಎಳೆದೊಯ್ದರು” ಎಂದು ಆ ಯುವತಿ ಹೇಳಿದ್ದಾರೆ.

ಇದನ್ನೂ ಓದಿ: ಹುಡುಗಿಯರು ರಾತ್ರಿ ಹೊರಗೆ ಹೋಗಬಾರದು; ಅತ್ಯಾಚಾರದ ಬಗ್ಗೆ ಮಮತಾ ಬ್ಯಾನರ್ಜಿ ಶಾಕಿಂಗ್ ಹೇಳಿಕೆ

“ಅವರು ನನ್ನನ್ನು ಹಿಂದಿನಿಂದ ಹಿಡಿದು, ನನ್ನ ಫೋನ್ ತೆಗೆದುಕೊಂಡು ನನ್ನ ಸ್ನೇಹಿತನಿಗೆ ಕರೆ ಮಾಡಲು ಹೇಳಿದರು. ಅವನು ಬರದಿದ್ದಾಗ, ಅವರು ನನ್ನನ್ನು ಮಲಗಲು ಒತ್ತಾಯಿಸಿದರು. ನಾನು ಕಿರುಚಿದೆ. ಆಗ ನಾನು ಶಬ್ದ ಮಾಡಿದರೆ, ಅವರು ಇನ್ನಷ್ಟು ಪುರುಷರನ್ನು ಕರೆಯುತ್ತೇವೆ ಎಂದು ಹೆದರಿಸಿದರು. ಆದ್ದರಿಂದ ನಾನು ಹೆದರಿ ಸುಮ್ಮನಾದೆ” ಎಂದು ಆಕೆ ವೈದ್ಯರಿಗೆ ಹೇಳಿದ್ದಾರೆ.

ಒಡಿಶಾದ ಜಲೇಶ್ವರದ 23 ವರ್ಷದ ಎರಡನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಶುಕ್ರವಾರ ರಾತ್ರಿ ಖಾಸಗಿ ವೈದ್ಯಕೀಯ ಕಾಲೇಜಿನ ಕ್ಯಾಂಪಸ್‌ನ ಹೊರಗೆ ಸಾಮೂಹಿಕ ಅತ್ಯಾಚಾರ ಮಾಡಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ