West Bengal Election 2021 Opinion Poll LIVE: ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಮುನ್ನಡೆ; ಮತದಾರರ ಮನದಾಳ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಮಾರ್ಚ್ 27ರಂದು ಮೊದಲ ಹಂತದ ಮತದಾನ ನಡೆಯಲಿದೆ. ಮತ್ತೊಮ್ಮೆ ಅಧಿಕಾರಕ್ಕೆ ಬರಲೇಬೇಕು ಎಂಬ ಜಿದ್ದಿನಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹೋರಾಡುತ್ತಿದೆ. ಈ ಬಾರಿ ಕಮಲ ಅರಳಿಸಿಯೇ ಸಿದ್ಧ ಎಂದು ಬಿಜೆಪಿ ತೊಡೆತಟ್ಟಿದೆ.

West Bengal Election 2021 Opinion Poll LIVE: ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಮುನ್ನಡೆ; ಮತದಾರರ ಮನದಾಳ
ಮಮತಾ ಬ್ಯಾನರ್ಜಿ- ಸುವೇಂದು ಅಧಿಕಾರಿ ಚುನಾವಣೆಯಲ್ಲಿ ಭರ್ಜರಿ ಹಣಾಹಣಿ ನಡೆಸಿದ್ದರು.
Follow us
| Updated By: guruganesh bhat

Updated on:Mar 27, 2021 | 3:00 PM

West Bengal Election 2021 Opinion Poll LIVE: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣಾ ಪೂರ್ವ ಸಮೀಕ್ಷೆಯನ್ನು Tv9 ಚುನಾವಣಾ ಅಧ್ಯಯನ ತಂಡ ಪ್ರಸ್ತುತ ಪಡಿಸುತ್ತಿದೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯು ಈ ಬಾರಿ ರಾಜ್ಯದ ಗಡಿಮೀರಿ ಇಡೀ ದೇಶದ ಗಮನ ಸೆಳೆದಿದೆ. ಮತ್ತೊಮ್ಮೆ ಅಧಿಕಾರಕ್ಕೆ ಬರಲೇಬೇಕು ಎಂಬ ಜಿದ್ದಿನಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್  (TMC) ಹೋರಾಡುತ್ತಿದೆ. ಈ ಬಾರಿ ಕಮಲ ಅರಳಿಸಿಯೇ ಸಿದ್ಧ ಎಂದು ಬಿಜೆಪಿ ತೊಡೆತಟ್ಟಿದೆ. ಎಡಪಕ್ಷಗಳ ಒಂದು ಕಾಲದ ಭದ್ರಕೋಟೆಯೂ ಆಗಿದ್ದ ಪಶ್ಚಿಮ ಬಂಗಾಳದಲ್ಲಿ ಕೆಂಪುಪಡೆಯ ಕಾರ್ಯಕ್ಷಮತೆ ಹೇಗಿರಬಹುದು ಎಂಬ ಕುತೂಹಲವೂ ಅಲ್ಲಲ್ಲಿ ವ್ಯಕ್ತವಾಗುತ್ತಿದೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಚುನಾವಣೆ ಮಾರ್ಚ್ 27ರಂದು ಆರಂಭವಾಗಲಿದ್ದು 5 ಜಿಲ್ಲೆಗಳ 30 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಬಂಕುರಾ ಜಿಲ್ಲೆಯಲ್ಲಿ 4 , ಪಶ್ಚಿಮ ಮಿಡ್ನಾಪುರದಲ್ಲಿ 6, ಝಾಗ್ರಾಂನಲ್ಲಿ 4, ಪೂರ್ವ ಮಿಡ್ನಾಪುರ್​ನಲ್ಲಿ 7 ಮತ್ತು ಪುರುಲಿಯಾದ 4 ವಿಧಾನಸಭಾ ಕ್ಷೇತ್ರಗಳಲ್ಲಿ ಮಾರ್ಚ್ 27ರಂದು ಮತದಾನ ನಡೆಯಲಿದೆ. ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ವಿವರ ಮತ್ತು ಚುನಾವಣಾ ಕ್ಷೇತ್ರಗಳ ಮಾಹಿತಿ ಆಧರಿಸಿ ಟಿವಿ9 ಚುನಾವಣಾ ಅಧ್ಯಯನ ತಂಡವು ಜಿದ್ದಾಜಿದ್ದಿ ಪೈಪೋಟಿ ನಡೆಯಲಿರುವ ಐದು ಪ್ರಮುಖ ಸೀಟುಗಳನ್ನು ಗುರುತಿಸಿದೆ. ಝಾಗ್ರಾಮ್ ಜಿಲ್ಲೆಯ ಝಾಗ್ರಾಮ್, ಪಶ್ಚಿಮ ಮಿಡ್ನಾಪುರದ ಮೇದಿನಿಪುರ್, ಬಂಕುರಾ ಜಿಲ್ಲೆಯ ರಾಣಿಬಂಧ್, ಪುರುಲಿಯಾದ ಬಾಘಮುಂಡಿ, ಪೂರ್ವ ಮಿಡ್ನಾಪುರದ ಪೊರ್ನ ಖೆಜುರಿ ಇವು ಪ್ರಮುಖ ಚುನಾವಣಾ ಕ್ಷೇತ್ರಗಳಾಗಿವೆ.

Published On - 2:48 pm, Sat, 27 March 21