ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿಯನ್ನು ಪರಾಭವಗೊಳಿಸಿದ್ದಾರೆ. ಈ ಹಿಂದೆ ಟಿಎಂಸಿ ಪಕ್ಷದಲ್ಲಿದ್ದು, ಮಮತಾ ದೀದಿಯ ಆಪ್ತರಾಗಿದ್ದ ಸುವೇಂದು ಅಧಿಕಾರಿ ಚುನಾವಣೆಗೆ ಮುನ್ನ ಬಿಜೆಪಿ ಸೇರಿದ್ದರು. ಬಂಗಾಳದಲ್ಲಿ ಮತ ಎಣಿಕೆ ಆರಂಭವಾದಾಗ ಸುವೇಂದು ಅಧಿಕಾರಿ ಮುನ್ನಡೆ ಸಾಧಿಸಿದ್ದು, ಕೊನೇ ಗಳಿಗೆಯಲ್ಲಿ ಮಮತಾ 1,200 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.
ಮಮತಾ ಗೆಲುವಿಗೆ ಅಭಿನಂದನೆ
ಪಶ್ಚಿಮ ಬಂಗಾಳದಲ್ಲಿ 202 ಸೀಟುಗಳನ್ನು ಗಳಿಸಿರುವ ಟಿಎಂಸಿ ಪಕ್ಷಕ್ಕೆ ವಿವಿಧ ರಾಜಕೀಯ ಪಕ್ಷದ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.
ನಿಮ್ಮ ರೋಚಕ ಗೆಲುವಿಗೆ ಅಭಿನಂದನೆಗಳು. ಜನರ ಕಲ್ಯಾಣ ಮತ್ತು ಸಾಂಕ್ರಾಮಿಕ ರೋಗವನ್ನು ಒಟ್ಟಾಗಿ ನಿಭಾಯಿಸುವತ್ತ ನಮ್ಮ ಕೆಲಸವನ್ನು ಮುಂದುವರಿಸೋಣ ಎಂದು ಎನ್ಸಿಪಿ ನೇತಾರ ಶರದ್ ಪವಾರ್ ಟ್ವೀಟ್ ಮಾಡಿದ್ದಾರೆ.
Congratulations @MamataOfficial on your stupendous victory!
Let us continue our work towards the welfare of people and tackling the Pandemic collectively.— Sharad Pawar (@PawarSpeaks) May 2, 2021
ಬಿಜೆಪಿ ಸವಾಲನ್ನು ಸ್ವೀಕರಿಸಿದ್ದ ಟಿಎಂಸಿ ಇಲ್ಲಿ ಹೊರಗಿನವರಿಗೆ ಅವಕಾಶವಿಲ್ಲ. ಬಂಗಾಳಕ್ಕೆ ಬಂಗಾಳದ ಮಗಳೇ ಬೇಕು, ಖೇಲಾ ಹೋಬೆ (Khelahobe) ಎಂಬ ಘೋಷವಾಕ್ಯದೊಂದಿಗೆ ಚುನಾವಣೆ ಸ್ಪರ್ಧಿಸಿತ್ತು. ಮತ ಹಂಚಿಕೆಯ ಲೆಕ್ಕಾಚಾರ ನೋಡಿದರೆ ಟಿಎಂಸಿಗೆ ಶೇ 48.5 ಮತ್ತು ಬಿಜೆಪಿಗೆ ಶೇ 37.4 ಮತ ಲಭಿಸಿದೆ.
ದ್ವೇಷದ ರಾಜಕೀಯಕ್ಕೆ ಸೋಲು
ಪ್ರಜ್ಞಾವಂತ ಮತದಾರರು ಬಿಜೆಪಿಯ ದೀದಿ ಓ ದೀದಿ ಕೂಗಿಗೆ ತಕ್ಕ ಉತ್ತರ ನೀಡಿದ್ದಾರೆ. ದ್ವೇಷದ ರಾಜಕೀಯ ಇಲ್ಲಿ ಪರಾಭವಗೊಂಡಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.
प. बंगाल में भाजपा की नफ़रत की राजनीति को हराने वाली जागरुक जनता, जुझारू सुश्री ममता बनर्जी जी व टीएमसी के समर्पित नेताओं व कार्यकर्ताओं को हार्दिक बधाई!
ये भाजपाइयों के एक महिला पर किए गए अपमानजनक कटाक्ष ‘दीदी ओ दीदी’ का जनता द्वारा दिया गया मुँहतोड़ जवाब है।
# दीदी_जिओ_दीदी pic.twitter.com/wlnUmdfMwA
— Akhilesh Yadav (@yadavakhilesh) May 2, 2021
ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದು ಜನರನ್ನು ವಿಭಜನೆ ಮಾಡುವ ಶಕ್ತಿಗಳು ಮತದಾರರು ತಿರಸ್ಕರಿಸಿದ್ದಾರೆ ಎಂದಿದ್ದಾರೆ.
Congratulations to @MamataOfficial @AITCofficial @derekobrienmp
on their splendid victory today. Kudos to the people of West Bengal for rejecting disruptive & divisive forces.— Mehbooba Mufti (@MehboobaMufti) May 2, 2021
ಜಮ್ಮು ಕಾಶ್ಮೀರದ ಹಿರಿಯ ನೇತಾರ ಒಮರ್ ಅಬ್ದುಲ್ಲಾ ಅವರು ಪಶ್ಚಿಮ ಬಂಗಾಳದ ಐತಿಹಾಸಿಕ ವಿಜಯಕ್ಕೆ ಮಮತಾ ದೀದಿ ಮತ್ತು ಎಲ್ಲರಿಗೂ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ. ಬಿಜೆಪಿ ಮತ್ತು ಚುನಾವಣಾ ಆಯೋಗವು ನಿಮ್ಮ ಮೇಲೆ ಅಡುಗೆಮನ ಸಿಂಕ್ ಸೇರಿದಂತೆ ಎಲ್ಲವನ್ನೂ ಬಿಸಾಡಿತ್ತು. ಆದರೂ ನೀವು ಗೆಲುವು ಸಾಧಿಸಿದಿರಿ. ಮುಂದಿನ 5 ವರ್ಷಕ್ಕೆ ಆಲ್ ದಿ ಬೆಸ್ಟ್ ಎಂದಿದ್ದಾರೆ .
ವಿರೋಚಿತ ಗೆಲುವು ಸಾಧಿಸಿದ ಮಮತಾ ದೀದಿ ಅವರಿಗೆ ಅಭಿನಂದನೆಗಳು. ಎಂಥಾ ಹೋರಾಟವಾಗಿತ್ತು. ಪಶ್ಚಿಮ ಬಂಗಾಳದ ಜನತೆಗೆ ಅಭಿನಂದನೆಗಳು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
Congratulations @MamataOfficial didi for landslide victory. What a fight!
Congratulations to the people of WB
— Arvind Kejriwal (@ArvindKejriwal) May 2, 2021
ಬಂಗಾಳದ ಹೆಣ್ಣು ಹುಲಿಗೆ ಅಭಿನಂದನೆಗಳು
Congratulations Tigress of Bengal..
ओ दीदी,
दीदी ओ दीदी!
@MamataOfficial @derekobrienmp @MahuaMoitra pic.twitter.com/orDkTAuPr3— Sanjay Raut (@rautsanjay61) May 2, 2021
ಪುದುಚೇರಿ ಮತ್ತು ತಮಿಳುನಾಡು ಹೊರತುಪಡಿಸಿ, ಇತರ ರಾಜ್ಯಗಳಲ್ಲಿ ರಾಜಕೀಯ ಸನ್ನಿವೇಶದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ. “ಮಮತಾ ದೀದಿ ಅವರು ಬಿಜೆಪಿಯ ಸವಾಲನ್ನು ಸ್ವೀಕರಿಸಿದ್ದಾರೆ ಮತ್ತು ಒಂದು ಸ್ಥಾನದಿಂದ ಮಾತ್ರ ಸ್ಪರ್ಧಿಸಿದ್ದಾರೆ ಇದನ್ನು ನಾವು ಅಭಿನಂದಿಸಬೇಕಾಗಿದೆ. ಬಿಜೆಪಿ ಕಷ್ಟಪಟ್ಟು ದುಡಿದು ಅವರನ್ನು ಸೋಲಿಸಲು ಪ್ರಯತ್ನಿಸಿದರೂ ಮಮತಾ ಅವರನ್ನು ಸೋಲಿಸುವುದು ಸುಲಭವಲ್ಲ ”ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
( West Bengal Election Result 2021 Opposition Leaders Congratulates TMC Mamata Banerjee for 3rd Consecutive Win)
ಇದನ್ನೂ ಓದಿ: 1200 ಮತಗಳಿಂದ ಶಿಷ್ಯನನ್ನು ಸೋಲಿಸಿದ ಮಮತಾ ಬ್ಯಾನರ್ಜಿ; ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹ್ಯಾಟ್ರಿಕ್ ಸಾಧನೆ
West Bengal Election Result 2021: ಖೇಲಾ ಹೋಬೆಯಿಂದ ಖೇಲಾ ಹೊಯೆಚೆವರೆಗೆ ಟಿಎಂಸಿಯ ಚುನಾವಣಾ ಪಯಣ
Published On - 6:02 pm, Sun, 2 May 21