ಕೊಲ್ಕತ್ತಾ: ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನ್ಕರ್ ಅವರು ರಾಜ್ಯದಲ್ಲಿ ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವಿನ ಯುದ್ಧ ನಡೆಯುತ್ತಿದೆ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಮಂಗಳವಾರ ಹೇಳಿದೆ. ಟಿಎಂಸಿ ವಕ್ತಾರ ಮತ್ತು ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರಾಯ್ ಅವರು ರಾಜ್ಯಪಾಲರು “ಅಭೂತಪೂರ್ವ ರೀತಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿದಿನವೂ ದೂಷಣೆ ನಡೆಸುತ್ತಿದ್ದಾರೆ” ಎಂದು ಆರೋಪಿಸಿದರು.
ರಾಜ್ಯಪಾಲರು ಬಿಜೆಪಿಯ ವಕ್ತಾರರಂತೆ ರಾಜ್ಯ ಸರ್ಕಾರದ ವಿರುದ್ಧ ವಿಷಕಾರಿ ಮತ್ತು ಆಧಾರರಹಿತ ಟೀಕೆಗಳನ್ನು ಮಾಡುತ್ತಿದ್ದಾರೆ. ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಲ್ಲಿ ನಡೆಯುತ್ತಿರುವಂತೆ ಬಂಗಾಳದಲ್ಲಿ ಯುದ್ಧ ನಡೆಯುತ್ತಿದೆ ಎಂದು ತೋರಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಇದು ನಿರ್ದಿಷ್ಟ ಯೋಜನೆಯ ಭಾಗವಾಗಿದೆ ಎಂದು ಹೇಳಿದ ಟಿಎಂಸಿ ಸಂಸದರು ರಾಜ್ಯಪಾಲರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಚಿತ್ರಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದ ಕಾರಣ ಕೇಂದ್ರದ ಬಿಜೆಪಿ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ “ಪಿತೂರಿ ನಡೆಸುತ್ತಿದೆ” ಎಂದು ಟಿಎಂಸಿ ವಕ್ತಾರರು ಆರೋಪಿಸಿದ್ದಾರೆ.
ಮಂಗಳವಾರ ರಾಷ್ಟ್ರ ರಾಜಧಾನಿಗೆ ತೆರಳಿ ಶುಕ್ರವಾರ ಮರಳಲಿದ್ದಾರೆ ಎಂದು ರಾಜ್ಯಪಾಲರು ಟ್ವೀಟ್ ಮಾಡಿದ್ದರು. ಆದರೆ ಅವರು ನವದೆಹಲಿ ಭೇಟಿಗೆ ಕಾರಣಗಳನ್ನು ನಿರ್ದಿಷ್ಟಪಡಿಸಿರಲಿಲ್ಲ.
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಸೋಮವಾರ ಹಲವಾರು ಬಿಜೆಪಿ ಶಾಸಕರ ನಿಯೋಗವನ್ನು ರಾಜ್ಯಪಾಲರ ನೇತೃತ್ವದಲ್ಲಿ ಕರೆದೊಯ್ದರು. ಅವರ ಕಾನೂನುಬಾಹಿರ ಮತ್ತು ಪೊಲೀಸರ “ಪಕ್ಷಪಾತದ ನಿಲುವು” ಕುರಿತು ಮಧ್ಯಪ್ರವೇಶಿಸಲು ಸಭೆ ನಡೆಸಿದರು. ಸಭೆಯ ನಂತರ ಧನ್ಕರ್ ಅವರು ಸುವೇಂದು ಅಧಿಕಾರಿಯನ್ನು ಭೇಟಿಯಾಗಿ ರಾಜ್ಯದಲ್ಲಿ ಆತಂಕಕಾರಿಯಾದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಹೇಳಿದ್ದಾರೆ.
ಜುಲೈ 2019 ರಲ್ಲಿ ರಾಜ್ಯಪಾಲರ ಕಚೇರಿಯನ್ನು ವಹಿಸಿಕೊಂಡಾಗಿನಿಂದ ಧನ್ಕರ್ ಮತ್ತು ತೃಣಮೂಲ ಸರ್ಕಾರ ಹಲವಾರು ವಿಷಯಗಳ ಕುರಿತು ವಾಗ್ದಾಳಿ ನಡೆಸುತ್ತಲೇ ಇದೆ.
ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಕರ್ ಅವರು ಮಂಗಳವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ನಡೆದ ಮತದಾನದ ನಂತರದ ಹಿಂಸಾಚಾರದ ಬಗ್ಗೆ ಅವರು ಮೌನವಾಗಿದ್ದಾರೆ ಮತ್ತು ಸಂತ್ರಸ್ತ ಜನರಿಗೆ ಪುನರ್ವಸತಿ ಮತ್ತು ಪರಿಹಾರ ನೀಡಲು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ನಾಲ್ಕು ದಿನಗಳ ಭೇಟಿಯಲ್ಲಿ ದೆಹಲಿಗೆ ತೆರಳುವ ಕೆಲವೇ ಗಂಟೆಗಳ ಮೊದಲು, ರಾಜ್ಯಪಾಲರು ಮುಖ್ಯಮಂತ್ರಿಯೊಂದಿಗೆ ಈ ವಿಷಯಗಳ ಬಗ್ಗೆ ಶೀಘ್ರವಾಗಿ ಸಂವಾದ ಕೋರಿ ಬರೆದಿದ್ದಾರೆ.
Constrained to conveyed @MamataOfficial that continued silence & inaction over post poll violence, violation of human rights & dignity of women, destruction of property, perpetuation of miseries on political opponents- worst since independence, ill augurs for democracy. pic.twitter.com/zoNewdpEob
— Governor West Bengal Jagdeep Dhankhar (@jdhankhar1) June 15, 2021
ಚುನಾವಣೋತ್ತರ ಹಿಂಸಾಚಾರದಲ್ಲಿ ರಕ್ತಪಾತ, ಮಾನವ ಹಕ್ಕುಗಳ ಉಲ್ಲಂಘನೆ, ಮಹಿಳೆಯರ ಘನತೆಯ ಮೇಲೆ ಅತಿರೇಕದ ಹಲ್ಲೆ, ಆಸ್ತಿಯನ್ನು ನಾಶಮಾಡುವುದು, ರಾಜಕೀಯ ವಿರೋಧಿಗಳ ಮೇಲೆ ದಾಳಿ ಇವು ಕೆಟ್ಟದು ಮತ್ತು ಇದು ಪ್ರಜಾಪ್ರಭುತ್ವಕ್ಕೆ ಕೆಟ್ಟದ್ದಾಗಿದೆ ಎಂದು ನಿಮ್ಮ ನಿರಂತರ ಮೌನ ಮತ್ತು ನಿಷ್ಕ್ರಿಯತೆಯನ್ನು ಗಮನಿಸಲು ನಾನು ನಿರ್ಬಂಧಿತನಾಗಿದ್ದೇನೆ ಎಂದು ಧನ್ಕರ್ ಹೇಳಿದ್ದಾರೆ. ಈ ಪತ್ರವವನ್ನು ಅವರು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ನಿಮ್ಮ ಮೌನ, ಜೊತೆಗೆ ಜನರ ದುಃಖವನ್ನು ನಿವಾರಿಸಲು ಪುನರ್ವಸತಿ ಮತ್ತು ಪರಿಹಾರದಲ್ಲಿ ತೊಡಗಿಸಿಕೊಳ್ಳಲು ಯಾವುದೇ ಕ್ರಮಗಳಿಲ್ಲದಿರುವುದು ನೋಡಿದರೆ ಇದೆಲ್ಲವೂ ರಾಜ್ಯದಿಂದ ಪ್ರೇರಿತ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದು ಧನ್ಕರ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದ ಮುಂದಿನ ವಿಧಾನಸಭಾ ಚುನಾವಣೆವರೆಗೆ ಟಿಎಂಸಿ ಜತೆ ಇರಲಿದ್ದಾರೆ ಪ್ರಶಾಂತ್ ಕಿಶೋರ್