AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಶ್ಚಿಮ ಬಂಗಾಳದ ಮುಂದಿನ ವಿಧಾನಸಭಾ ಚುನಾವಣೆವರೆಗೆ ಟಿಎಂಸಿ ಜತೆ ಇರಲಿದ್ದಾರೆ ಪ್ರಶಾಂತ್ ಕಿಶೋರ್

Prashant Kishor: ಮೂಲಗಳ ಪ್ರಕಾರ ಕಿಶೋರ್‌ನ ಸಂಘಟನೆಯು ಮೊದಲಿನಂತೆಯೇ ಮುಂದುವರಿಯುತ್ತದೆ. ಬಂಗಾಳ  ಚುನಾವಣೆ ನಂತರ  ರಾಜಕೀಯ  ಕಾರ್ಯತಂತ್ರ ನಿಪುಣ  ಪ್ರಶಾಂತ್ ಕಿಶೋರ್ ತನ್ನ ಕೆಲಸ ಬಿಟ್ಟು ಬೇರೆ ಕೆಲಸದಲ್ಲಿ ತೊಡಗುವುದಾಗಿ ಹೇಳಿಕೊಂಡಿದ್ದರು. ಇದಾಗಿ ಒಂದು ತಿಂಗಳ ನಂತರ ಈ ರೀತಿಯ ಬೆಳವಣಿಗೆ ನಡೆದಿದೆ.

ಪಶ್ಚಿಮ ಬಂಗಾಳದ ಮುಂದಿನ ವಿಧಾನಸಭಾ ಚುನಾವಣೆವರೆಗೆ ಟಿಎಂಸಿ ಜತೆ ಇರಲಿದ್ದಾರೆ ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jun 15, 2021 | 12:30 PM

Share

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ನಂತರ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ 2026 ರಲ್ಲಿ ಮುಂದಿನ ವಿಧಾನಸಭಾ ಚುನಾವಣೆಯವರೆಗೆ ಪ್ರಶಾಂತ್ ಕಿಶೋರ್ ಅವರ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿಯ (ಐ-ಪಿಎಸಿ) ಸಹಾಯ ಪಡೆಯಲಿದೆ. ಮೂಲಗಳ ಪ್ರಕಾರ ಕಿಶೋರ್‌ನ ಸಂಘಟನೆಯು ಮೊದಲಿನಂತೆಯೇ ಮುಂದುವರಿಯುತ್ತದೆ. ಬಂಗಾಳ  ಚುನಾವಣೆ ನಂತರ  ರಾಜಕೀಯ  ಕಾರ್ಯತಂತ್ರ ನಿಪುಣ  ಪ್ರಶಾಂತ್ ಕಿಶೋರ್ ತನ್ನ ಕೆಲಸ ಬಿಟ್ಟು ಬೇರೆ ಕೆಲಸದಲ್ಲಿ ತೊಡಗುವುದಾಗಿ ಹೇಳಿಕೊಂಡಿದ್ದರು. ಇದಾಗಿ ಒಂದು ತಿಂಗಳ ನಂತರ ಈ ರೀತಿಯ ಬೆಳವಣಿಗೆ ನಡೆದಿದೆ.

ಇತ್ತೀಚಿನ ಬಂಗಾಳ ಚುನಾವಣೆ ಕಿಶೋರ್‌ಗೆ ಕಠಿಣ ಪರೀಕ್ಷೆಯಾಗಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ) ಪೂರ್ವ ರಾಜ್ಯದಲ್ಲಿ ಅಧಿಕಾರಕ್ಕೇರದಂತೆ ತಡೆಯಲು ಯಶಸ್ವಿಯಾಗಿದ್ದರು. ಹಲವಾರು ಉನ್ನತ ಟಿಎಂಸಿ ನಾಯಕರು ಮತ್ತು ಬಂಗಾಳ ಚಿತ್ರರಂಗದ ಪರಿಚಿತ ಮುಖಗಳು ಬಿಜೆಪಿ ಸೇರುವ ಮೂಲಕ ಬಿಜೆಪಿಗೆ ಬಂಗಾಳದಲ್ಲಿ ಶಕ್ತಿ ವರ್ಧಿಸುವಂತೆ ಮಾಡಿದ್ದರು.

2019ರಲ್ಲಿ ಪ್ರಶಾಂತ್ ಕಿಶೋರ್ ಅವರನ್ನು ತೃಣಮೂಲ ಕಾಂಗ್ರೆಸ್​ ತನ್ನ ಚುನಾವಣಾ ಸಿದ್ಧತೆಯ ಮಾರ್ಗದರ್ಶನಕ್ಕಾಗಿ ನೇಮಿಸಿಕೊಂಡಿತ್ತು. ಟಿಎಂಸಿ ಕರೆಯನ್ನು ಒಪ್ಪಿಕೊಂಡ ಪ್ರಶಾಂತ್, ಬಿಜೆಪಿಯಂಥ ಬೃಹತ್ ಮತ್ತು ಚುರುಕಿನ ರಾಜಕೀಯ ಪಕ್ಷದ ಎದುರು ಪ್ರಾದೇಶಿಕ ಪಕ್ಷವನ್ನು ಗೆಲ್ಲಿಸಲು ತನ್ನಿಂದ ಸಾಧ್ಯವಿದೆ ಎಂದು ಈ ಬಾರಿ ನಿರೂಪಿಸಿದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಪ್ರಚಾರ ತಂತ್ರಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ನೋಡಿಕೊಳ್ಳುತ್ತಿದ್ದರು. ‘ಚುನಾವಣಾ ಚಾಣಕ್ಯ’ ಎಂದೇ ಬಿಜೆಪಿಯ ಅಭಿಮಾನಿಗಳು ಕರೆಯುವ ಅಮಿತ್​ ಶಾ ಹಲವು ರಾಜ್ಯಗಳಲ್ಲಿ ಪಕ್ಷವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದವರು. ಹಿಂದೆ ಬಿಜೆಪಿಯೊಂದಿಗೆ ಪ್ರಶಾಂತ್ ಕಿಶೋರ್ ಹೊಂದಿದ್ದ ಆಪ್ತ ಒಡನಾಟದ ನಂಟು ಕಡಿಯಲು ಅಮಿತ್​ ಶಾ ಪ್ರಭಾವವೇ ಕಾರಣ ಎಂಬ ಮಾತುಗಳಿವೆ. ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ಬಿಜೆಪಿಯ ತಂತ್ರಗಳನ್ನು ರೂಪಿಸಿದರೆ, ಪ್ರಶಾಂತ್ ಕಿಶೋರ್ ಟಿಎಂಸಿಯ ತಂತ್ರಗಳನ್ನು ರೂಪಿಸಿದ್ದರು. ಹೀಗಾಗಿಯೇ ಈಗ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸಾಧಿಸಿರುವ ಗೆಲುವು ಪ್ರಶಾಂತ್​ ಕಿಶೋರ್ ಪಾಲಿಗೆ ‘ಸಿಹಿಯಾದ ಸೇಡು’ ತೀರಿಸಿಕೊಂಡ ಖುಷಿಯನ್ನೂ ನೀಡಿದೆ ಎಂದು ಟಿಎಂಸಿಯ ಹಿರಿಯ ನಾಯಕರು ಹೇಳುತ್ತಾರೆ.

ಈ ಬಾರಿ ಪಶ್ಚಿಮ ಬಂಗಾಳ ಮಾತ್ರವೇ ಅಲ್ಲ. ಪ್ರಶಾಂತ್ ಕಿಶೋರ್ ಮತ್ತು ಅವರ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ (I-PAC) ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ) ಪಕ್ಷಕ್ಕೂ ಚುನಾವಣಾ ಸಲಹೆಗಳನ್ನು ನೀಡಿತ್ತು. 2018ರಲ್ಲಿ ಹಿರಿಯ ಮುತ್ಸದಿ ಎಂ.ಕರುಣಾನಿಧಿ ನಿಧನದ ನಂತರ ನಡೆದ ಮೊದಲ ಸಾರ್ವತ್ರಿಕ ಚುನಾವಣೆ ಇದು. ಈ ಬಾರಿ ಡಿಎಂಕೆ ನೆಮ್ಮದಿಯಾಗಿ ಅಧಿಕಾರ ಹಿಡಿಯುವಷ್ಟು ಬಹುಮತ ಪಡೆದು, ಅಧಿಕಾರಕ್ಕೆ ಬಂದಿದೆ. ಈ ಬಾರಿಯ ಚುನಾವಣೆ ಪ್ರಶಾಂತ್ ಕಿಶೋರ್ ಪಾಲಿಗೆ ‘ಹಂಸಗೀತೆ’ ಎಂದು ಹೇಳಲಾಗುತ್ತಿದೆ.  ಪಶ್ಚಿಮ ಬಂಗಾಳದ  ಚುನಾವಣೆ  ಫಲಿತಾಂಶ ಪ್ರಕಟವಾದ  ಬೆನ್ನಲ್ಲೇ  ಪ್ರಶಾಂತ್  ಕಿಶೋರ್ ಚುನಾವಣೆ ಗೆಲ್ಲಿಸಿಕೊಡುವ ತಮ್ಮ ಕಸುಬಿನಿಂದ ದೂರ ಉಳಿಯಲಿದ್ದೇನೆ ಎಂದು ಘೋಷಿಸಿದ್ದು ಬದುಕಿನಲ್ಲಿ ಬೇರೆ ಏನಾದರೂ ಮಾಡುತ್ತೇನೆ ಎಂದು ಹೇಳಿದ್ದರು.

2015 ರಲ್ಲಿ ಬಿಹಾರದಲ್ಲಿ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಮಹಾಘಟಬಂಧನ್ ಯಶಸ್ಸಿನ ಹಿಂದೆ ಪ್ರಶಾಂತ್ ಕಿಶೋರ್ ಇದ್ದರು. ಚುನಾವಣಾ ಕಾರ್ಯತಂತ್ರಜ್ಞರಾಗಿ ಅದು ಅವರ ಮೊದಲ ಗೆಲುವು ಆಗಿತ್ತು. ಇದಾದ ನಂತರ ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ, ತಮಿಳುನಾಡಿನ ಎಂ.ಕೆ.ಸ್ಟಾಲಿನ್ ಮತ್ತು ದೆಹಲಿಯ ಅರವಿಂದ್ ಕೇಜ್ರಿವಾಲ್ ಅವರನ್ನು ಅಧಿಕಾರಕ್ಕೆ ತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಕೆಲವು ವಾರಗಳ ಹಿಂದೆ ಪ್ರಶಾಂತ್ ಕಿಶೋರ್ ಮುಂಬೈನಲ್ಲಿ ಶರದ್ ಪವಾರ್ ಅವರನ್ನು ಭೇಟಿಯಾದರು. ಇದು ರಾಜಕೀಯ ವಲಯದಲ್ಲಿ ಊಹಾಪೋಹಗಳಿಗೆ ಕಾರಣವಾಗಿದೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕರು ಮತ್ತು ಕಿಶೋರ್ ಇದನ್ನು “ಖಾಸಗಿ ಸಭೆ” ಎಂದು ಬಣ್ಣಿಸಿದರು. ಬಿಜೆಪಿ ವಿರುದ್ಧದ ಹೋರಾಟದಲ್ಲಿ ಬ್ಯಾನರ್ಜಿಯನ್ನು ಬೆಂಬಲಿಸಿದವರಿಗೆ ಧನ್ಯವಾದ ಹೇಳಲು ಇರುವ ಪ್ರವಾಸದ ಭಾಗವಾಗಿತ್ತು ಇದು ಎಂದು ಪ್ರಶಾಂತ್ ಕಿಶೋರ್ ಹೇಳಿದ್ದರು.

ಇದನ್ನೂ ಓದಿ: Prashant Kishor: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎದುರು ಟಿಎಂಸಿ ಗೆಲ್ಲಿಸಲು ಪ್ರಶಾಂತ್ ಕಿಶೋರ್ ಅನುಸರಿಸಿದ ಚುನಾವಣಾ ತಂತ್ರಗಳು ಒಂದೆರೆಡಲ್ಲ

ಇದನ್ನೂ ಓದಿ: Prashant Kishor ಶರದ್ ಪವಾರ್ ಭೇಟಿಯಾದ ಪ್ರಶಾಂತ್ ಕಿಶೋರ್; ರಾಜಕೀಯ ವಲಯದಲ್ಲಿ ಭಾರೀ ಊಹಾಪೋಹ ಸೃಷ್ಟಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!