AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭ್ರಷ್ಟಾಚಾರದ ಆರೋಪ ಮಾಡಿದ ರಾಜಕಾರಣಿಗಳ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿ: ರಾಮ ಮಂದಿರ ಟ್ರಸ್ಟ್​ಗೆ ವಿಎಚ್​ಪಿ ಸಲಹೆ

Ram Temple Trust: ಈ ಭೂಮಿ ಕುಸುಮ್ ಪಾಠಕ್ ಹೆಸರಿನಲ್ಲಿತ್ತು. ಕೆಲವು ವರ್ಷಗಳ ಹಿಂದೆ ಅವರು ಸುಲ್ತಾನ್ ಅನ್ಸಾರಿ ಮತ್ತು ರವಿ ಮೋಹನ್ ತ್ರಿಪಾಠಿ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅದರಲ್ಲಿ ಅವರು ಅದನ್ನು 2 ಕೋಟಿ ರೂ.ಗೆ ಮಾರಾಟ ಮಾಡಲು ಒಪ್ಪಿಕೊಂಡರು, ಅದು ಆ ಸಮಯದಲ್ಲಿ ಭೂಮಿಯ ಮಾರುಕಟ್ಟೆ ದರವಾಗಿತ್ತು

ಭ್ರಷ್ಟಾಚಾರದ ಆರೋಪ ಮಾಡಿದ ರಾಜಕಾರಣಿಗಳ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿ: ರಾಮ ಮಂದಿರ ಟ್ರಸ್ಟ್​ಗೆ ವಿಎಚ್​ಪಿ ಸಲಹೆ
ಅಲೋಕ್ ಕುಮಾರ್
TV9 Web
| Edited By: |

Updated on: Jun 15, 2021 | 1:22 PM

Share

ದೆಹಲಿ: ಅಯೋಧ್ಯೆಯಲ್ಲಿ ಭೂಮಿ ಖರೀದಿಯಲ್ಲಿ ಶ್ರೀ ರಾಮ್ ಜನ್ಮಭೂಮಿ ತೀರ್ಥ್ ಕ್ಷೇತ್ರ ಟ್ರಸ್ಟ್ ವಿರುದ್ಧ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ತೇಜ್ ನಾರಾಯಣ್ ಪಾಂಡೆ ಅವರು ಮಾಡಿರುವ ಭ್ರಷ್ಟಾಚಾರದ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ಮಾನಹಾನಿ ಮೊಕದ್ದಮೆ  ದಾಖಲಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಸೋಮವಾರ ಹೇಳಿದ್ದಾರೆ.

“ಈ ಭೂಮಿ ಕುಸುಮ್ ಪಾಠಕ್ ಹೆಸರಿನಲ್ಲಿತ್ತು. ಕೆಲವು ವರ್ಷಗಳ ಹಿಂದೆ ಅವರು ಸುಲ್ತಾನ್ ಅನ್ಸಾರಿ ಮತ್ತು ರವಿ ಮೋಹನ್ ತ್ರಿಪಾಠಿ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅದರಲ್ಲಿ ಅವರು ಅದನ್ನು 2 ಕೋಟಿ ರೂ.ಗೆ ಮಾರಾಟ ಮಾಡಲು ಒಪ್ಪಿಕೊಂಡರು, ಅದು ಆ ಸಮಯದಲ್ಲಿ ಭೂಮಿಯ ಮಾರುಕಟ್ಟೆ ದರವಾಗಿತ್ತು ” ಎಂದು ಕುಮಾರ್ ಹೇಳಿರುವುದಾಗಿ ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಪರಸ್ಪರ ಮಾತುಕತೆ ಮತ್ತು ಒಪ್ಪಿಗೆಯ ಆಧಾರದ ಮೇಲೆ ಭೂಮಿಯನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದು ನಡೆಯುತ್ತಿದೆ ಎಂದು ಅವರು ಹೇಳಿದರು.

“ಕುಸುಮ್ ಪಾಠಕ್ ಅದನ್ನು ಮಾರಾಟ ಮಾಡಲು ಸಿದ್ಧರಾಗಿದ್ದರು. ಆದರೆ ಆಕೆ ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದರಿಂದ ಅವಳು ಅದನ್ನು ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ, ಸುಲ್ತಾನ್ ಅನ್ಸಾರಿ ಮತ್ತು ರವಿ ಮೋಹನ್ ತ್ರಿಪಾಠಿ ಇಬ್ಬರೂ ಸಹ ಅದನ್ನು ಮಾರಾಟ ಮಾಡಲು ಸಿದ್ಧರಿದ್ದರು. ಆದರೆ ಅವರು ಕುಸುಮ್ ಅವರ ಒಪ್ಪಿಗೆಯಿಲ್ಲದೆ ಆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದಕ್ಕಿಂತ ಹೆಚ್ಚಾಗಿ ಅವರು ಅದನ್ನು ಮಾರಾಟ ಮಾಡಲು ಯಾವುದೇ ಒಪ್ಪಂದವನ್ನು ಹೊಂದಿಲ್ಲ “ಎಂದು ಅವರು ಹೇಳಿದರು.

“ಆದರೆ ಹರೀಶ್ ಪಾಠಕ್ ಸೇರಿದಂತೆ ಈ ನಾಲ್ವರ ಒಪ್ಪಿಗೆಯಿಲ್ಲದೆ ಈ ಒಪ್ಪಂದ ಸಾಧ್ಯವಿಲ್ಲ” ಎಂದು ಅವರು ಹೇಳಿದರು.

“ರಾಮ್ ಮಂದಿರದ ನಿರ್ಮಾಣವು ಅಧಿಕೃತ ಮತ್ತು ಪಾರದರ್ಶಕವಾಗಿದೆ. ಈ ದೈವಿಕ ಚಳುವಳಿಯನ್ನು ಕೆಣಕುವ ಪ್ರಯತ್ನಗಳು ದುರದೃಷ್ಟಕರ. ಈ ತಪ್ಪು ಮಾಹಿತಿ ಅಭಿಯಾನವನ್ನು ಸ್ವಾರ್ಥ ಉದ್ದೇಶಗಳಿಂದ ಮಾಡಲಾಗುತ್ತಿದೆ ಎಂದು ತೋರುತ್ತದೆ. ರಾಜಕೀಯ ಪಕ್ಷಗಳು ಈ ವಿಷಯವನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿವೆ ಆದರೆ ಅದು ನಂಬಿಕೆಗೆ ಸಂಬಂಧಿಸಿದೆ” ಎಂದು ಅವರು ಹೇಳಿದರು.

ಕುಸುಮ್ ಪಾಠಕ್ ಈ ಭೂಮಿಯನ್ನು ಅನ್ಸಾರಿಗೆ ಮಾರಾಟ ಮಾಡುವುದಾಗಿ ಒಟ್ಟಾಗಿ ಒಪ್ಪಲಾಗಿದೆ ಮತ್ತು ಈ ಒಪ್ಪಂದವು 2 ಕೋಟಿ ಮೌಲ್ಯದ್ದಾಗಿದೆ. ಆದ್ದರಿಂದ ಈ ಒಪ್ಪಂದವನ್ನು ಆ ಮೊತ್ತದಲ್ಲಿಯೇ ಮಾಡಲಾಗಿದೆ ಎಂದು ಕುಮಾರ್  ಹೇಳಿದರು.

ರಾಮ ಮಂದಿರ ತೀರ್ಪು ಮತ್ತು ಮಂದಿರ ನಿರ್ಮಾಣದ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಭೂಮಿಯ ದರ ಹೆಚ್ಚಾಗಿದೆ ಎಂದು ವಿಎಚ್‌ಪಿ ಮುಖಂಡರು ತಿಳಿಸಿದ್ದಾರೆ.

ಸರ್ಕಲ್ ರೇಟ್ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿದೆ ಎಂದು ಟ್ರಸ್ಟ್ ಕಂಡುಹಿಡಿದಿದೆ. ಪ್ರಸ್ತುತ ಭೂಮಿಯ ದರ 18.5 ಕೋಟಿ ರೂ. ಆಗಿದೆ.ಒಪ್ಪಂದದಲ್ಲಿ ಯಾವುದೇ ಅಕ್ರಮಗಳಿಲ್ಲ ಎಂದು ಪ್ರತಿಪಾದಿಸಿದ ಅವರು, ಎಲ್ಲಾ ಹಣದ ವಹಿವಾಟುಗಳನ್ನು ನಗದು ರೂಪದಲ್ಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು, ಆದ್ದರಿಂದ ಹಣ ವರ್ಗಾವಣೆಯ ಪ್ರಶ್ನೆಯೇ ಇಲ್ಲ.

ವಿರೋಧ ಪಕ್ಷಗಳನ್ನು ಮತ್ತಷ್ಟು ದೂಷಿಸಿದ ಕುಮಾರ್, ಸುಳ್ಳು ಆರೋಪಗಳನ್ನು ಮಾಡುವುದು ಕೆಲವು ಜನರ ಸ್ವಭಾವವಾಗಿದೆ ಎಂದು ಹೇಳಿದರು.

“ಶ್ರೀ ರಾಮ್ ಜನ್ಮಭೂಮಿ ತೀರ್ಥ್ ಕ್ಷೇತ್ರ ಟ್ರಸ್ಟ್ ವಿರುದ್ಧ ಸುಳ್ಳು ಆರೋಪ ಹೊರಿಸುವ ವ್ಯಕ್ತಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಾವು ಟ್ರಸ್ಟ್‌ಗೆ ಸೂಚಿಸಿದ್ದೇವೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳು ಸನ್ನಿಹಿತವಾಗಿದ್ದು ಅದಕ್ಕಾಗಿಯೇ ಅವರು ಜನರನ್ನು ಸುಳ್ಳಿನಿಂದ ದಾರಿತಪ್ಪಿಸುತ್ತಿದ್ದಾರೆ” ಎಂದು ಅವರು ಹೇಳಿದರು.

ಭೂ ವ್ಯವಹಾರವನ್ನು “ಪಾರದರ್ಶಕ” ಒಪ್ಪಂದ ಎಂದು ಕರೆದ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಿರುದ್ಧ ತೀವ್ರ ದಾಳಿ ನಡೆಸಿದರು. ಶ್ರೀರಾಮನ ಅಸ್ತಿತ್ವವನ್ನು ಪ್ರಶ್ನಿಸಿ ಅವರ ಪಕ್ಷವು ಸುಪ್ರೀಂ ಕೋರ್ಟ್​ನಲ್ಲಿ  ಅಫಿಡವಿಟ್ ಸಲ್ಲಿಸಿತ್ತು.

“ಪ್ರಿಯಾಂಕಾ ಜಿ ಅವರ ಪಕ್ಷ ಅಧಿಕಾರದಲ್ಲಿದ್ದಾಗ, ಅವರು ಶ್ರೀರಾಮನ ಅಸ್ತಿತ್ವವನ್ನು ಒಪ್ಪಿಕೊಳ್ಳಲು ನಿರಾಕರಿಸಿದರು ಮತ್ತು ಸುಪ್ರೀಂ ಕೋರ್ಟ್ನಲ್ಲಿ ಅಫಿಡವಿಟ್ ನೀಡಿದರು. ಸಂಜಯ್ ಸಿಂಗ್ ಮತ್ತು ಇತರರನ್ನು ಸಹ ಮಾನಹಾನಿ ಪ್ರಕರಣದ ವಿಚಾರಣೆಗೆ ಒಳಪಡಿಸಬೇಕು” ಎಂದು ಅವರು ಹೇಳಿದರು.

ಶ್ರೀ ರಾಮ್ ಜನ್ಮಭೂಮಿ ತೀರ್ಥ್ ಕ್ಷೇತ್ರ ಟ್ರಸ್ಟ್ ಭೂ ವ್ಯವಹಾರದಲ್ಲಿ ಭ್ರಷ್ಟಾಚಾರ ಎಸಗಿದೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ತೇಜ್ ನಾರಾಯಣ್ ಪಾಂಡೆ ಭಾನುವಾರ ಆರೋಪಿಸಿದ್ದಾರೆ ಮತ್ತು ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಪಾಂಡೆ, “ಈ ತುಂಡು ಭೂಮಿಯನ್ನು ಈ ಹಿಂದೆ 2 ಕೋಟಿ ರೂ.ಗೆ ರವಿ ಮೋಹನ್ ತಿವಾರಿ ಮತ್ತು ಸುಲ್ತಾನ್ ಅನ್ಸಾರಿ ಖರೀದಿಸಿದ್ದರು. 10 ನಿಮಿಷಗಳ ನಂತರ ಟ್ರಸ್ಟ್ ಮಾರ್ಚ್ 18 ರಂದು 18.5 ಕೋಟಿ ರೂ.ಗೆ ಭೂಮಿಯನ್ನು ಖರೀದಿಸಿತು” ಎಂದು ಹೇಳಿದರು.

ಆರ್‌ಟಿಜಿಎಸ್ ಪಾವತಿ ವಿಧಾನದ ಮೂಲಕ ರವಿ ಮೋಹನ್ ತಿವಾರಿ ಮತ್ತು ಸುಲ್ತಾನ್ ಅನ್ಸಾರಿ ಅವರ ಬ್ಯಾಂಕ್ ಖಾತೆಗೆ 17 ಕೋಟಿ ರೂ. ಪಾವತಿಮಾಡಲಾಗಿದೆ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು.

ಇದನ್ನೂ ಓದಿ:  ರಾಮ ಮಂದಿರ ನಿರ್ಮಾಣಕ್ಕೆ ನೀಡಿದ 22 ಕೋಟಿ ಮೊತ್ತದ 15 ಸಾವಿರ ಚೆಕ್ ಬೌನ್ಸ್

(Corruption allegations against Shri Ram Janmbhoomi Teerth Kshetra Trust VHP suggests defamation case against politicians )