ಪಶ್ಚಿಮ ಬಂಗಾಳ: ಟಿಎಂಸಿ ನಾಯಕನನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು; ಸಿಪಿಎಂ ಕಾರ್ಯಕರ್ತರ ಮನೆಗೆ ಬೆಂಕಿ
Joynagar TMC Leader Murder: ಗುಂಡಿನ ಸದ್ದು ಕೇಳಿದ ಸ್ಥಳೀಯರು ಹೊರಗೆ ಬಂದಿದ್ದಾರೆ. ಅವರು ಗುಂಡು ಹಾರಿಸಿ ಆರೋಪಿಗಳ ಪೈಕಿ ಇಬ್ಬರು ದುಷ್ಕರ್ಮಿಗಳನ್ನು ಹಿಡಿದಿದ್ದಾರೆ. ಅವರಲ್ಲಿ ಒಬ್ಬನನ್ನು ಗ್ರಾಮಸ್ಥರು ಹೊಡೆದು ಕೊಂದಿದ್ದಾರೆ ಎನ್ನಲಾಗಿದೆ. ಮತ್ತೊಬ್ಬ ಅಪರಾಧಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಘಟನೆಯ ತನಿಖೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ.
ಜೊಯನಗರ ನವೆಂಬರ್ 13: ದಕ್ಷಿಣ 24 ಪರಗಣ ಜಯನಗರ ಪೊಲೀಸ್ ಠಾಣೆಯ ಬಮಂಗಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಚಾಯಿತಿ ಸದಸ್ಯ, ತೃಣಮೂಲ ಕಾಂಗ್ರೆಸ್ ನಾಯಕ (TMC) ಸೈಫುದ್ದೀನ್ ಲಷ್ಕರ್ (Saifuddin Lashkar) ಬೆಳಗಿನ ಜಾವ ಪ್ರಾರ್ಥನೆಗೆಂದು ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ (Murder) ಮಾಡಿದ ಘಟನೆ ಸೋಮವಾರ ನಡೆದಿದೆ. ಸೈಫುದ್ದೀನ್ ಲಷ್ಕರ್ ಎಂಬ ತೃಣಮೂಲ ನಾಯಕನನ್ನು ಹಿಂದಿನಿಂದ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸ್ಥಳೀಯ ಮೂಲಗಳ ಪ್ರಕಾರ ನಾಲ್ಕೈದು ದುಷ್ಕರ್ಮಿಗಳು ಆತನ ದೇಹಕ್ಕೆ ಗುಂಡು ಹಾರಿಸಿದ್ದಾರೆ. ಗುಂಡಿನ ಸದ್ದು ಕೇಳಿ ಸ್ಥಳೀಯರು ಓಡಿ ಬಂದರು. ಅವರು ಆರೋಪಿಗಳನ್ನು ಹಿಡಿದಿದ್ದು ಆರೋಪಿಗಳಲ್ಲಿ ಒಬ್ಬನನ್ನು ಸ್ಥಳೀಯರು ಹೊಡೆದು ಸಾಯಿಸಿದ್ದಾರೆ ಎನ್ನಲಾಗಿದೆ. ಮತ್ತೊಬ್ಬ ದುಷ್ಕರ್ಮಿಯನ್ನು ಪೊಲೀಸರು ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ತೃಣಮೂಲ ನಾಯಕನನ್ನು ಗುಂಡಿಕ್ಕಿ ಕೊಂದ ನಂತರ ಈ ಪ್ರದೇಶ ಸ್ತಬ್ಧವಾಗಿದೆ. ಜೊಯನಗರ ಪೊಲೀಸ್ ಪಡೆ ಕೂಡ ಇದೆ. ಸೈಫುದ್ದೀನ್ ಮೇಲೆ ಗುಂಡು ಹಾರಿಸಿದ ಮಸೀದಿಯ ಮುಂದೆ ಇನ್ನೂ ರಕ್ತದ ಕಲೆಗಳಿವೆ. ಮುಂಜಾನೆ 5 ಗಂಟೆ ಸುಮಾರಿಗೆ ಐವರು ದುಷ್ಕರ್ಮಿಗಳು ಎರಡು ಬೈಕ್‌ಗಳಲ್ಲಿ ಬಂದಿದ್ದರು ಎಂದು ಘಟನೆಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅವರು ಸೈಫುದ್ದೀನ್ ಹಿಂಭಾಗದಿಂದು ಗುಂಡು ಹಾರಿಸಿದ್ದಾರೆ.
ಗುಂಡಿನ ಸದ್ದು ಕೇಳಿದ ಸ್ಥಳೀಯರು ಹೊರಗೆ ಬಂದಿದ್ದಾರೆ. ಅವರು ಗುಂಡು ಹಾರಿಸಿ ಆರೋಪಿಗಳ ಪೈಕಿ ಇಬ್ಬರು ದುಷ್ಕರ್ಮಿಗಳನ್ನು ಹಿಡಿದಿದ್ದಾರೆ. ಅವರಲ್ಲಿ ಒಬ್ಬನನ್ನು ಗ್ರಾಮಸ್ಥರು ಹೊಡೆದು ಕೊಂದಿದ್ದಾರೆ ಎನ್ನಲಾಗಿದೆ. ಮತ್ತೊಬ್ಬ ಅಪರಾಧಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಘಟನೆಯ ತನಿಖೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ.
ಪ್ರಥಮ ಚಿಕಿತ್ಸೆಯ ಬಳಿಕ ಬಂಧಿತ ಆರೋಪಿಯನ್ನು ಪೊಲೀಸರು ವಿಚಾರಣೆ ಆರಂಭಿಸಲಿದ್ದಾರೆ. ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದು, ಕೊಲೆಯ ಹಿಂದೆ ಯಾರ ಕೈವಾಡವಿದೆ ಎಂಬುದು ತಿಳಿಯಬೇಕಿದೆ. ಇದರೊಂದಿಗೆ ಈ ದುಷ್ಕರ್ಮಿಗಳನ್ನು ಕೊಲೆಗೆ ಕಳುಹಿಸಿದವರು ಯಾರು ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ. ಈ ಹಿಂದೆ ಮೃತ ಸೈಫುದ್ದೀನ್ ಮೇಲೆ ಹಲ್ಲೆಗೆ ಯತ್ನಿಸಲಾಗಿತ್ತು ಎನ್ನಲಾಗಿದೆ.
ಸಿಪಿಎಂ ಕಾರ್ಯಕರ್ತರ ಮನೆಗೆ ಬೆಂಕಿ
ಪಶ್ಚಿಮ ಬಂಗಾಳದ ಜೊಯ್‌ನಗರ ಪ್ರದೇಶದಲ್ಲಿ ಟಿಎಂಸಿ ನಾಯಕ ಸೈಫುದ್ದೀನ್ ಲಷ್ಕರ್ ಹತ್ಯೆ ನಡೆದ ನಂತರ ಸಿಪಿಎಂ ಕಾರ್ಯಕರ್ತರ ಮನೆಗೆ ಬೆಂಕಿ ಹಚ್ಚಲಾಗಿದೆ. ಬಿಜೆಪಿ ಮತ್ತು ಸಿಪಿಎಂ ಬೆಂಬಲಿತ ದುಷ್ಕರ್ಮಿಗಳು ಪ್ರಾದೇಶಿಕ ಅಧ್ಯಕ್ಷರನ್ನು ಕೊಂದಿದ್ದಾರೆ ಎಂದು ತೃಣಮೂಲ ನಾಯಕ ಶೌಕತ್ ಮೊಲ್ಲಾ ಹೇಳಿದ್ದಾರೆ. ಈ ಘಟನೆಯ ನಂತರ ಬಮಣಗಚಿ ಗ್ರಾಮ ಪಂಚಾಯ್ತಿಯ ದಲುಅಖಂತಿ ಗ್ರಾಮದಲ್ಲಿ ಮನೆಗಳಿಗೆ ಬೆಂಕಿ ಹಚ್ಚುಪ ಆರೋಪ ಕೇಳಿ ಬಂದಿದೆ. ಇಡೀ ಗ್ರಾಮವೇ ಸುಟ್ಟು ಹೋಗಿದ್ದು. ಮನೆಗಳು, ಗಿಡಗಳು, ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಆಕಾಶವು ಕಪ್ಪು ಹೊಗೆಯಿಂದ ಆವೃತವಾಗಿದೆ. ಸಂಗ್ರಹಿಸಿಟ್ಟಿದ್ದ ಭತ್ತ ಹಾಗೂ ಭತ್ತದ ತೆನೆ ಸುಟ್ಟು ಕರಕಲಾಗಿದೆ.
ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು ಈ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಆ ಆಕ್ರೋಶದಲ್ಲಿ ಗ್ರಾಮದ ಮನೆಗಳು ಸುಟ್ಟು ಕರಕಲಾಗಿವೆ. ಮನೆಯ ಮೇಜು, ಕುರ್ಚಿಗಳನ್ನು ಧ್ವಂಸಗೊಳಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಬಂದರೂ ಅಗ್ನಿಶಾಮಕ ವಾಹನಗಳು ಅಲ್ಲಿಗೆ ಬಂದಿಲ್ಲ. ಗ್ರಾಮೀಣ ಪ್ರದೇಶವಾದ್ದರಿಂದ ರಸ್ತೆಗಳು ತೀರಾ ಹದಗೆಟ್ಟಿರುವುದರಿಂದ ಇಲ್ಲಿಯವರೆಗೆ ಯಾವುದೇ ಫೈರ್ ಇಂಜಿನ್‌ಗೆ ತಲುಪಲು ಸಾಧ್ಯವಾಗಿಲ್ಲ. ಆದರೂ ಗ್ರಾಮದ ಮಹಿಳೆಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಹಂತಕನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಆತ ಕೊಲೆ ಮಾಡಿದ್ದಾನೆ ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸ್ ಹೇಳಿದ್ದಾರೆ.
ಇದನ್ನೂ ಓದಿ: Global Teacher Prize 2023: ಜಾಗತಿಕ ಶಿಕ್ಷಣ ಪ್ರಶಸ್ತಿ -ಟಾಪ್ 10 ಅಭ್ಯರ್ಥಿಗಳಲ್ಲಿ ಪಶ್ಚಿಮ ಬಂಗಾಳ ಶಿಕ್ಷಕಗೆ ಸ್ಥಾನ
ತೃಣಮೂಲ ನಾಯಕ ಸೈಫುದ್ದೀನ್ ಲಷ್ಕರ್ (43) ಸೋಮವಾರ ನಮಾಜ್ ಮಾಡಲು ಮನೆಯಿಂದ ಹೊರಬಂದಾಗ ಕೊಲೆಯಾಗಿದ್ದಾರೆ. ಐವರು ದುಷ್ಕರ್ಮಿಗಳು ಸೈಫುದ್ದೀನ್ ಮೇಲೆ ಗುಂಡು ಹಾರಿಸಿದ್ದು ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ, ಗುಂಡಿನ ಸದ್ದು ಕೇಳಿ ಸ್ಥಳೀಯರು ಧಾವಿಸಿದ್ದು ಅಪರಾಧಿಗಳನ್ನು ಹಿಡಿದರು. ಆರೋಪಿಗಳಲ್ಲಿ ಒಬ್ಬನನ್ನು ಸ್ಥಳದಲ್ಲೇ ಹೊಡೆದು ಸಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಹತ್ಯೆಯ ಹಿಂದೆ ವಿರೋಧ ಪಕ್ಷದವರ ಕೈವಾಡವಿದೆ ಎಂಬುದು ತೃಣಮೂಲದ ಆರೋಪಿಸಿದೆ ಘಟನೆಯ ನಂತರ ಇಲ್ಲಿನ ಪ್ರದೇಶದಲ್ಲಿ ಹಿಂದೆ ಒಂದರಂತೆ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ