ಕೊವಿಡ್ 19 ನಕಲಿ ಲಸಿಕೆ ಪಡೆದು ಅಸ್ವಸ್ಥರಾಗಿದ್ದ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿಗೆ ಕೊರೊನಾ ಸೋಂಕು; ಎಲ್ಲೂ ಹೋಗದಿದ್ದರೂ ಬಂತು ಎಂದ ನಟಿ
ಮಿಮಿ ಚಕ್ರವರ್ತಿ ಮತ್ತು ಇನ್ನೊಬ್ಬರು ಬೆಂಗಾಳಿ ನಟಿ ನುಸ್ರತ್ ಜಹಾನ್ ಇಬ್ಬರೂ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅದರಲ್ಲಿ ಮಿಮಿಯವರು ಜಾದವ್ಪುರ ಸಂಸದೆಯಾಗಿದ್ದು, ನುಸ್ರತ್ ಜಹಾನ್ ಬಸಿರ್‌ಹತ್ ಲೋಕಸಭಾ ಕ್ಷೇತ್ರದ ಸಂಸದೆ.
ಬಂಗಾಳಿ ನಟಿ, ರಾಜಕಾರಣಿ ಮಿಮಿ ಚಕ್ರವರ್ತಿ(TMC MP Mimi Chakraborty ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ನಾನು ಹೊರಗೆಲ್ಲೂ ಹೋಗಿಲ್ಲ. ಸಾರ್ವಜನಿಕರ ಸ್ಥಳಗಳಿಗೆ ಭೇಟಿ ಕೊಟ್ಟಿಲ್ಲ. ಹೀಗಿದ್ದಾಗ್ಯೂ ನನಗೆ ಸೋಂಕು ತಗುಲಿದೆ ಎಂದು ಮಿಮಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಆದಷ್ಟು ಎಚ್ಚರಿಕೆ ವಹಿಸಿ ಎಂದು ಕರೆ ನೀಡಿದ್ದಾರೆ. ಟ್ವೀಟ್ ಮಾಡಿರುವ ಮಿಮಿ ಚಕ್ರವರ್ತಿ(Mimi Chakraborty), ನನಗೆ ಕೊರೊನಾ ಸೋಂಕು ತಗುಲಿದೆ. ಆದರೆ ಕಳೆದ ಹಲವು ದಿನಗಳಿಂದ ನಾನು ಮನೆಬಿಟ್ಟು ಹೊರಗೆ ಹೋಗಿರಲಿಲ್ಲ. ಇದು ನಿಜಕ್ಕೂ ವಿಚಿತ್ರ ಎನ್ನಿಸುತ್ತಿದೆ. ಸದ್ಯ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡಿದ್ದೇನೆ. ಮನೆಯಲ್ಲೇ ಐಸೋಲೇಟ್ ಆಗಿ, ವೈದ್ಯರ ಸಲಹೆಯಂತೆ ನಡೆದುಕೊಳ್ಳುತ್ತಿದ್ದೇನೆ. ದಯವಿಟ್ಟು ಎಲ್ಲರೂ , ಕೊವಿಡ್ 19 ನಿಯಂತ್ರಿತ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿ. ಮಾಸ್ಕ್ನ್ನು ಧರಿಸಿಯೇ ಓಡಾಡಿ, ಸುರಕ್ಷಿತವಾಗಿರಿ. ನನ್ನಪಾಲಿಗೆ ಕೊರೊನಾ ಅತ್ಯಂತ ಕೆಟ್ಟದಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.
ಮಿಮಿ ಚಕ್ರವರ್ತಿ ಪಶ್ಚಿಮಬಂಗಾಳದ ತೃಣಮೂಲ ಕಾಂಗ್ರೆಸ್ನ ಸಂಸದೆ. ಕಳೆದ ವರ್ಷ ಜೂನ್ನಲ್ಲಿ ಕೊವಿಡ್ 19 ನಕಲಿ ಲಸಿಕೆ ಪಡೆದು ತೀವ್ರ ಅಸ್ವಸ್ಥರಾಗಿದ್ದರು. ಮನೆಯಲ್ಲಿ ಆರೋಗ್ಯ ಹದಗೆಟ್ಟು ನರಳುತ್ತಿದ್ದ ಆಕೆಯನ್ನು ನೋಡಿ, ಮನೆ ಕೆಲಸದಾಕೆ ವೈದ್ಯರನ್ನು ಕರೆಸಿದ್ದರು. 32 ವರ್ಷದ ಇವರು ಜೂನ್ನಲ್ಲಿ ಕೋಲ್ಕತ್ತದಲ್ಲಿ ಲಸಿಕೆ ಪಡೆದಿದ್ದರು. ಅದಾದ ಬಳಿಕ ನಿರ್ಜಲೀಕರಣ ಮತ್ತು ತೀವ್ರ ಹೊಟ್ಟೆನೋವು ಉಂಟಾಗಿತ್ತು. ರಕ್ತದೊತ್ತಡ ಕೂಡ ತೀವ್ರವಾಗಿ ಕುಸಿದಿತ್ತು. ಚಿಕಿತ್ಸೆಯ ಬಳಿಕ ಸರಿಹೋಗಿದ್ದರು. ಆದರೆ ಹೀಗಾಗಿದ್ದು ನಕಲಿ ಲಸಿಕೆಯಿಂದಲೇ ಎಂದು ಹೇಳಲು ಸಾಧ್ಯವಿಲ್ಲ ಎಂದು ಚಿಕಿತ್ಸೆ ನೀಡಿದ್ದ ವೈದ್ಯರು ತಿಳಿಸಿದ್ದರು.
— Mimssi (@mimichakraborty) January 5, 2022
ಮಿಮಿ ಚಕ್ರವರ್ತಿ ಮತ್ತು ಇನ್ನೊಬ್ಬರು ಬೆಂಗಾಳಿ ನಟಿ ನುಸ್ರತ್ ಜಹಾನ್ ಇಬ್ಬರೂ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅದರಲ್ಲಿ ಮಿಮಿಯವರು ಜಾದವ್ಪುರ ಸಂಸದೆಯಾಗಿದ್ದು, ನುಸ್ರತ್ ಜಹಾನ್ ಬಸಿರ್‌ಹತ್ ಲೋಕಸಭಾ ಕ್ಷೇತ್ರದ ಸಂಸದೆ. ಚಲನಚಿತ್ರ ಕ್ಷೇತ್ರದಲ್ಲೂ ಮಿಮಿ ಒಳ್ಳೊಳ್ಳೆ ಸಿನಿಮಾ ಕೊಟ್ಟವರು. ಜೀತ್ ಮತ್ತು ಮಿಮಿ ಚಕ್ರವರ್ತಿ ಅಭಿನಯ ಭಾಜಿ ಥಿಯೇಟರ್ಗಳಲ್ಲಿ ಬಿಡುಗಡೆಯಾಗಿದೆ. ಇದು ತೆಲುಗುದಲ್ಲಿ ಹಿಟ್ ಆದ ನನ್ನಕು ಪ್ರೇಮತೋ ಸಿನಿಮಾದ ರಿಮೇಕ್ ಆಗಿದೆ.
ಇದನ್ನೂ ಓದಿ: ಷೇರುಪೇಟೆಯಲ್ಲಿ ಒಮಿಕ್ರಾನ್ ಭೀತಿ; 800ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿದ ಸೆನ್ಸೆಕ್ಸ್, ನಿಫ್ಟಿ 230 ಪಾಯಿಂಟ್ಸ್ ಇಳಿಕೆ
Published On - 11:23 am, Thu, 6 January 22